Ind vs Eng: ಹೂಡಾ ಬದಲಿಗೆ ಶ್ರೇಯಸ್ ಐಯ್ಯರ್‌ಗೆ ಅವಕಾಶ: ಅಚ್ಚರಿ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತ ದೊಡ್ಡ ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ನಾಲ್ಕು ಬದಲಾವಣೆಗಳನ್ನು ಮಾಡಿಕೊಂಡು ಭಾರತ ಕಣಕ್ಕಿಳಿದಿದ್ದು ಯುವ ಆಟಗಾರರಿಗೆ ಮತ್ತಷ್ಟು ಅವಕಾಶ ದೊರೆತಿದೆ. ಆದರೆ ಮಾಜಿ ಕ್ರಿಕೆಟಿಗ ಆರ್‌ಪಿ ಸಿಂಗ್ ಒಂದು ಬದಲಾವಣೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ದೀಪಕ್ ಹೂಡಾ ಎರಡನೇ ಪಂದ್ಯದಲ್ಲಿಯೂ ಆಡುವ ಬಳಗದಿಂದ ಹೊರಗುಳಿದಿದ್ದರು. ಮೂರನೇ ಪಂದ್ಯದಲ್ಲಿಯೂ ದೀಪಕ್ ಹೂಡಾಗೆ ಅವಕಾಶ ದೊರೆಯದ ಬಗ್ಗೆ ಆರ್‌ಪಿ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. ದೀಪಕ್ ಹೂಡಾ ಬದಲಿಗೆ ಶ್ರೇಯಸ್ ಐಯ್ಯರ್ ಅವರನ್ನು ಆಯ್ಕೆ ಮಾಡಿದ್ದು ಸರಿಯಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಆರ್‌ಪಿ ಸಿಂಗ್.

ಭಾರತ ತಂಡದಲ್ಲಿ ನಾಲ್ಕು ಬದಲಾವಣೆ
ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ನಾಲ್ಕು ಬದಲಾವಣೆ ಮಾಡಿಕೊಂಡಿದೆ. ರವಿ ಬಿಶ್ನೋಯ್, ಆವೇಶ್ ಖಾನ್, ಉಮ್ರಾನ್ ಮಲಿಕ್ ಹಾಗೂ ಶ್ರೇಯಸ್ ಐಯ್ಯರ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದು ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬೂಮ್ರಾ, ಯುಜುವೇಂದ್ರ ಚಾಹಲ್ ಹಾಗೂ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಇಂಗ್ಲೆಂಡ್ ತಂಡ ಕೂಡ ಈ ಪಂದ್ಯಕ್ಕಾಗಿ ಎರಡು ಬದಲಾವಣೆ ಮಾಡಿಕೊಂಡಿದೆ. ರೀಸ್ ಟಾಪ್ಲಿ ಹಾಗೂ ಫಿಲ್ ಸಾಲ್ಟ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದು ಪಾರ್ಕಿನ್ಸನ್ ಹಾಗೂ ಸ್ಯಾಮ್ ಕರನ್ ಆಡುವ ಬಳಗದಿಂದ ಹೊರಬಿದ್ದಿದ್ದಾರೆ.

ಅಚ್ಚರಿ ವ್ಯಕ್ತಪಡಿಸಿದ ಆರ್‌ಪಿ ಸಿಂಗ್
ಕ್ರಿಕ್‌ಬಜ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆರ್‌ಪಿ ಸಿಂಗ್ ದೀಪಕ್ ಹೂಡಾಗೆ ಅವಕಾಶ ದೊರೆಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ ಸಂದರ್ಭದಲ್ಲಿ ಆಡುವ ಬಳಗದಿಂದ ಹೊರಗಿಡುವುದು ಸೂಕ್ತವಾಲ್ಲ ಎಂದಿದ್ದಾರೆ. "ಉತ್ತಮ ಫಾರ್ಮ್‌ನಲ್ಲಿರುವ ಸಂದರ್ಭದಲ್ಲಿ ಆಟಗಾರರಿಗೆ ಅವಕಾಶವನ್ನು ಖಂಡಿತಾ ನೀಡಬೇಕು. ದೀಪಕ್ ಹೂಡಾ ಫಾರ್ಮ್‌ನಲ್ಲಿದ್ದು ಸಾಕಷ್ಟು ರನ್ ಬಾರಿಸಿದ್ದಾರೆ. ಆದರೆ ಶ್ರೇಯಸ್ ಐಯ್ಯರ್ ಅವರನ್ನು ಆಡಿಸುವ ಮೂಲಕ ನೀವು ಆತನನ್ನು ಫಾರ್ಮ್‌ನಿಮದ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತೀರಾ? ನಾನೇನಾದರೂ ನಾಯಕನಾಗಿದ್ದರೆ ಶ್ರೇಯಸ್ ಐಯ್ಯರ್ ಬದಲಿಗೆ ದೀಪಕ್ ಹೂಡಾಗೆ ಅವಕಾಶ ನೀಡುತ್ತಿದ್ದೆ" ಎಂದಿದ್ದಾರೆ ಆರ್‌ಪಿ ಸಿಂಗ್.

ಪಾರ್ಥಿವ್ ಪಟೇಲ್‌ಗೂ ಅಸಮಾಧಾನ
ಇನ್ನು ದೀಪಕ್ ಹೂಡಾಗೆ ಅವಕಾಶ ದೊರೆಯದ ಬಗ್ಗೆ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಕುಡ ಬೇಸರ ವ್ಯಕ್ತಪಡಿಸಿದ್ದಾರೆ. ಆಟಗಾರರ ಆಯ್ಕೆ ವಿಚಾರದಲ್ಲಿ ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ಅವರ ಸ್ಥರತೆ ಇಂದು ಕಂಡು ಬಂದಿಲ್ಲ. ಐಪಿಎಲ್‌ಗಿಂತ ಹಿಂದಿನ ಸರಣಿಯಲ್ಲಿ ಐಯ್ಯರ್ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂಬ ಕಾರಣಕ್ಕೆ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ ಎಂದಿದ್ದಾರೆ ಪಾರ್ಥಿವ್ ಪಟೇಲ್

ಭಾರತ vs ಇಂಗ್ಲೆಂಡ್
ಇಂಗ್ಲೆಂಡ್ ಆಡುವ ಬಳಗ
ಜೇಸನ್ ರಾಯ್, ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಡೇವಿಡ್ ಮಲನ್, ಫಿಲಿಪ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್, ರೀಸ್ ಟೋಪ್ಲಿ, ರಿಚರ್ಡ್ ಗ್ಲೀಸನ್
ಬೆಂಚ್: ಟೈಮಲ್ ಮಿಲ್ಸ್, ಸ್ಯಾಮ್ ಕರನ್, ಮ್ಯಾಥ್ಯೂ ಪಾರ್ಕಿನ್ಸನ್
ಭಾರತ vs ಇಂಗ್ಲೆಂಡ್
ಭಾರತ ಆಡುವ ಬಳಗ
ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಆವೇಶ್ ಖಾನ್, ಉಮ್ರಾನ್ ಮಲಿಕ್, ರವಿ ಬಿಷ್ಣೋಯ್
ಬೆಂಚ್: ದೀಪಕ್ ಹೂಡಾ, ಇಶಾನ್ ಕಿಶನ್, ಅಕ್ಸರ್ ಪಟೇಲ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications