ದ್ವಿತೀಯ ಟಿ20: ಭಾರತ ವಿರುದ್ಧ ಇಂಗ್ಲೆಂಡ್ ಗೆ 5 ವಿಕೆಟ್ ಗೆಲುವು

ವೇಲ್ಸ್, ಜು. 7: ಇಂಗ್ಲೆಂಡ್ ನ ಕಾರ್ಡಿಫ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಟಿ20 ಎರಡನೇ ಪಂದ್ಯದಲ್ಲಿ ಭಾರತ ಕಳಪೆ ಬ್ಯಾಟಿಂಗ್ ನಿಂದಾಗಿ ಇಂಗ್ಲೆಂಡ್ ವಿರುದ್ಧ ಸೋಲಿನ ಬೆಲೆ ತೆತ್ತಿದೆ. ಭಾರತ ನೀಡಿದ್ದ 149 ಸುಲಭ ರನ್ ಗುರಿಯನ್ನು 19.4 ಓವರ್ ಗಳಲ್ಲೇ ಮುಟ್ಟಿದ ಇಂಗ್ಲೆಂಡ್ 5 ವಿಕೆಟ್ ಜಯಭೇರಿ ಬಾರಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಪೇರಿಸಿ ಇಂಗ್ಲೆಂಡ್ ಗೆ 149 ಸಾಧಾರಣ ರನ್ ಗುರಿ ನೀಡಿತ್ತು. ಈ ಪಂದ್ಯದಲ್ಲಿ ಬ್ಯಾಟಿಂಗ್ ಗೆ ಇಳಿದ ಯಾವ ಬ್ಯಾಟ್ಸ್ಮನ್ ಕೂಡ ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲದೆ ಪೆವಿಲಿಯನ್ ದಾರಿ ಹಿಡಿದದ್ದು ಟೀಮ್ ಇಂಡಿಯಾದ ರನ್ ಹಿನ್ನಡೆಗೆ ಕಾರಣವಾಯ್ತು.
ಭಾರತ 148ರನ್ ಪೇರಿಸುವಲ್ಲಿ ನಾಯಕ ವಿರಾಟ್ ಕೊಹ್ಲಿ 47 (38), ಸುರೇಶ್ ರೈನಾ 27 (20), ಎಂಎಸ್ ಧೋನಿ ಅಜೇಯ 32 (24) ಕೊಂಚ ಮಟ್ಟಿನ ನೆರವು ನೀಡಿದರು. ಉಳಿದಂತೆ ರೋಹಿತ್ ಶರ್ಮಾ 5 (9), ಶಿಖರ್ ಧವನ್ 10 (12), ಕೆಎಲ್ ರಾಹುಲ್ 6 (8), ಹಾರ್ದಿಕ್ ಪಾಂಡ್ಯ ಅಜೇಯ 12 (10) ರನ್ ತಂಡವನ್ನು ಬೆಂಬಲಿಸದಾಯಿತು.
ಭಾರತದ ಇನ್ನಿಂಗ್ಸ್ ವೇಳೆ ಡೇವಿಡ್ ವಿಲ್ಲೆ, ಜೇಕ್ ಬಾಲ್, ಪ್ಲಾಂಕೆಟ್, ರಶೀದ್ ತಲಾ ಒಂದೊಂದು ವಿಕೆಟ್ ಕಬಳಿಸಿ ಕೊಹ್ಲಿ ಪಡೆ ರನ್ ಪೇರಿಸುವಿಕೆಗೆ ತಡೆ ಹಾಕಿದರು. ಅದರಲ್ಲೂ ಶರ್ಮಾ, ಧವನ್, ರಾಹುಲ್ ಅವರಿಂದ ರನ್ ಕೊರತೆ ಕಾಡಿತು.
ಇಂಗ್ಲೆಂಡ್ ಇನ್ನಿಂಗ್ಸ್ ನಲ್ಲೂ ಆರಂಭಿಕ ವಿಕೆಟ್ ಗಳು ಬೇಗನೆ ಉರುಳಿದವು. ಅಲೆಕ್ಸ್ ಹೇಲ್ಸ್ ಅಜೇಯ 58 (41) ರನ್ ನೊಂದಿಗೆ ಇಂಗ್ಲೆಂಡ್ ಗೆಲುವಿಗೆ ಕಾರಣರಾದರು. ಹೇಲ್ಸ್ ಅವರೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications