For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ಸೆಮಿಫೈನಲ್: ಈ 4 ವಿಚಾರಗಳಲ್ಲಿ ಅಂದುಕೊಂಡಂತೆ ಆದರೆ ಭಾರತ ಫೈನಲ್‌ಗೇರುವುದು ನಿಶ್ಚಿತ

India vs England Semi Final: If India success in these 4 area india will enter finals

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದ್ದು ಸೆಮಿಫೈನಲ್‌ಗೇರುವಲ್ಲಿ ಯಶಸ್ವಿಯಾಗಿದೆ. ಸೂಪರ್ 12 ಹಂತದಲ್ಲಿ ಆಡಿರುವ ಐದು ಪಂದ್ಯಗಳ ಪೈಕಿ ಟೀಮ್ ಇಂಡಿಯಾ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 8 ಅಂಕಗಳನ್ನು ಪಡೆದು ಮೊದಲ ಸ್ಥಾನಿಯಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಸೆಮಿಫೈನಲ್‌ನಲ್ಲಿ ಭಾರತ ತಂಡಕ್ಕೆ ಇಂಗ್ಲೆಂಡ್ ಎದುರಾಳಿಯಾಗಿದ್ದು ಗುರುವಾರ ಈ ಎರಡು ತಂಡಗಳ ಮುಖಾಮುಖಿಯ ನಡೆಯಲಿದೆ.

ಇನ್ನು ಇಂಗ್ಲೆಂಡ್ ಹಾಗೂ ಭಾರತ ನಡುವಿನ ಈ ಮುಖಾಮುಖಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದ್ದು ತಂಡಗಳ ಬಲಾಬಲಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಗೆಲುವು ಸುಲಭವಿಲ್ಲ. ಇಂಗ್ಲೆಂಡ್ ತಂಡ ಆಲ್‌ರೌಂಡರ್‌ಗಳ ದೊಡ್ಡ ಪಡೆಯನ್ನೇ ಹೊಂದಿದ್ದು ಭಾರತದ ವಿರುದ್ಧ ಮಿಂಚಲು ಸಜ್ಜಾಗಿದೆ. ಹೀಗಾಗಿ ಟೀಮ್ ಇಂಡಿಯಾ ಸೂಕ್ತ ಯೋಜನೆಯೊಂದಿಗೆ ಕಣಕ್ಕಿಳಿದರೆ ಮಾತ್ರವೇ ಈ ಪಂದ್ಯದಲ್ಲಿ ಗೆಲುವು ಸಾಧ್ಯವಿದೆ.

ಜೊತೆಯಾಗಿ ನಿಂತು ಆಡಬೇಕಿದೆ ರೋಹಿತ್-ರಾಹುಲ್

ಜೊತೆಯಾಗಿ ನಿಂತು ಆಡಬೇಕಿದೆ ರೋಹಿತ್-ರಾಹುಲ್

ಟೀಮ್ ಇಂಡಿಯಾಗೆ ಈ ವಿಶ್ವಕಪ್‌ನಲ್ಲಿ ದೊಡ್ಡ ಹಿನ್ನಡೆಯಾಗಿ ಕಂಡುಬಂದಿರುವುದು ಆರಂಭಿಕ ವೈಫಲ್ಯ. ಲೀಗ್ ಹಂತದಲ್ಲಿ ಆಡಿದ ಐದು ಪಂದ್ಯಗಳಲ್ಲಿಯೂ ಈ ಜೋಡಿಯಿಂದ ನಿರೀಕ್ಷಿಯ ಜೊತೆಯಾಟ ಬಂದೇ ಇಲ್ಲ. ಪವರ್‌ಪ್ಲೇ ಅವಧಿಯನ್ನು ಅದ್ಭುತವಾಗಿ ಬಳಸಿಕೊಂಡು ಸಾಧ್ಯವಾದಷ್ಟು ರನ್‌ಗಳಿಸುವ ಬದಲು ಟೀಮ್ ಇಂಡಿಯಾ ಈ ಹಂತದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಕೆಎಲ್ ರಾಹುಲ್ ಕಳೆದ ಎರಡು ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸಿ ಫಾರ್ಮ್‌ಗೆ ಮರಳಿದರೂ ರೋಹಿತ್ ಶರ್ಮಾ ಅವರಿಂದ ಕೂಡ ದೊಡ್ಡ ಇನ್ನಿಂಗ್ಸ್ ಬರಬೇಕಿದೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ಜೋಡಿಯ ಮೇಲೆ ಟೀಮ್ ಇಂಡಿಯಾ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದೆ.

ಕಡಿಮೆ ಮಾಡಬೇಕಿದೆ ಕೊಹ್ಲಿ- ಸೂರ್ಯ ಮೇಲಿನ ಹೊರೆ

ಕಡಿಮೆ ಮಾಡಬೇಕಿದೆ ಕೊಹ್ಲಿ- ಸೂರ್ಯ ಮೇಲಿನ ಹೊರೆ

ಇನ್ನು ಟೀಮ್ ಇಂಡಿಯಾ ಲೀಗ್ ಹಂತದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ವಿರಾಟ್ ಕೊಹ್ಲಿ ಮೇಲೆಯೇ ಅತಿಯಾಗಿ ಅವಲಂಬಿಸಿರುವುದು ಸ್ಪಷ್ಟವಾಗಿದೆ. ಆದರೆ ಸೆಮಿಫೈನಲ್‌ನಲ್ಲಿ ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ ಮಧ್ಯಮ ಕ್ರಮಾಂಕದ ಇತರ ಆಟಗಾರರು ಕೂಡ ಮಿಂಚಬೇಕಿದೆ. ಅದರಲ್ಲೂ ಆಸ್ಟ್ರೇಲಿಯಾ ನೆಲದಲ್ಲಿ ಹಾರ್ದಿಕ್ ಪಾಂಡ್ಯ ಮಂಕಾದಂತೆ ಕಂಡು ಬಂದಿದ್ದು ಜವಾಬ್ಧಾರಿಯುತ ಪ್ರದರ್ಶನದ ಅಗತ್ಯವಿದೆ.

ಸಿಕ್ಕ ಅವಕಾಶ ಬಳಸಿಕೊಳ್ಳಬೇಕಿದೆ ಡಿಕೆ or ಪಂತ್

ಸಿಕ್ಕ ಅವಕಾಶ ಬಳಸಿಕೊಳ್ಳಬೇಕಿದೆ ಡಿಕೆ or ಪಂತ್

ಇನ್ನು ಲೀಗ್ ಹಂತದಲ್ಲಿ ಮೊದಲ ನಾಲ್ಕು ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿದ್ದರು ನಾಲ್ಕು ಪಂದ್ಯದಲ್ಲಿಯೂ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಡಿಕೆ ವಿಫಲವಾಗಿದ್ದಾರೆ. ಇನ್ನು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರು ಕೂಡ ಪಂತ್ ಅವರಿಂದಲೂ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ. ಹೀಗಾಗಿ ಸೆಮಿಫೈನಲ್‌ನಲ್ಲಿ ಈ ಇಬ್ಬರ ಪೈಕಿ ಯಾರಿಗೆ ಅವಕಾಶ ದೊರೆಯಲಿದೆ ಎಂಬುದು ಸ್ಪಷ್ಟವಿಲ್ಲದಿದ್ದರೂ ಅವಕಾಶ ಸಿಕ್ಕ ಆಟಗಾರನಿಂದ ನಿರೀಕ್ಷಿತ ಪ್ರದರ್ಶನ ಬಾರದಿದ್ದರೆ ತಂಡಕ್ಕೆ ದೊಡ್ಡ ಹಿನ್ನಡೆಯಾಗುವುದರಲ್ಲಿ ಅನುಮಾನವಿಲ್ಲ

ಬೌಲರ್‌ಗಳ ಮೇಲಿನ ಜವಾಬ್ಧಾರಿ ಹೆಚ್ಚು

ಬೌಲರ್‌ಗಳ ಮೇಲಿನ ಜವಾಬ್ಧಾರಿ ಹೆಚ್ಚು

ಇನ್ನು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ಮಿಂಚುವಲ್ಲಿ ಯಶಸ್ವಿಯಾಗಿದೆ. ಲೀಗ್ ಹಂತದಲ್ಲಿ ನೀಡಿದ ಪ್ರದರ್ಶನವನ್ನು ಸೆಮಿಫೈನಲ್‌ನಲ್ಲಿಯೂ ಮುಂದುವರಿಸಬೇಕಿದೆ. ಅನುಭವಿ ಭುವನೇಶ್ವರ್ ಕುಮಾರ್ ಹಾಗೂ ಅರ್ಶ್‌ದೀಪ್ ಜೋಡಿ ಪವರ್‌ಪ್ಲೇನಲ್ಲಿ ಮಿಂಚುತ್ತಿದ್ದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಜೋಡಿಯನ್ನು ಬೇರ್ಪಡಿಸುವ ಜವಾಬ್ಧಾರಿ ಈ ಆಟಗಾರರ ಮೇಲಿದೆ. ಇನ್ನು ಅನುಭವಿ ಮೊಹಮ್ಮದ್ ಶಮಿ ಕೂಡ ಮಿಂಚುತ್ತಿದ್ದು ಸ್ಪಿನ್ನರ್‌ಗಳು ಕೂಡ ಉತ್ತಮ ಪ್ರದರ್ಶನ ನೀಡಿದರೆ ಭಾರತ ಇಂಗ್ಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆಯುವದರಲ್ಲಿ ಅನುಮಾನವಿಲ್ಲ.

Story first published: Tuesday, November 8, 2022, 18:25 [IST]
Other articles published on Nov 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+