ಭಾರತ vs ಇಂಗ್ಲೆಂಡ್ : ಏಕದಿನ ಸರಣಿಯ ಉಳಿದ ಪಂದ್ಯಗಳಿಗೆ ಶ್ರೇಯಸ್ ಐಯ್ಯರ್ ಅಲಭ್ಯ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಮುಂದಿನ ಎರಡು ಪಂದ್ಯಗಳಿಗೂ ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಐಯ್ಯರ್ ಹೊರಗುಳಿಯಲಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಐಯ್ಯರ್ ಫೀಲ್ಡಿಂಗ್ ವೇಳೆ ಭುಜದ ನೋವಿಗೆ ಒಳಗಾಗಿದ್ದರು. ಹೀಗಾಗಿ ಶ್ರೇಯಸ್ ಐಯ್ಯರ್ ವಿಶ್ರಾಂತಿಯನ್ನು ಪಡೆಯಲಿದ್ದಾರೆ.
ಇಂಗ್ಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್‌ನ 8 ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್ ಸಂದರ್ಭದಲ್ಲಿ ಬೌಂಡರಿ ಉಳಿಸಲು ಶ್ರೇಯಸ್ ಐಯ್ಯರ್ ಡೈವ್ ಮಾಡಿದ್ದರು. ಆದರೆ ಆ ಸಂದರ್ಭದಲ್ಲಿ ಭುಜಕ್ಕೆ ಒತ್ತಡ ಬಿದ್ದು ಶ್ರೇಯಸ್ ಐಯ್ಯರ್ ನೋವಿಗೆ ಒಳಗಾದರು.
ತಂಡದ ಫಿಸಿಯೋ ಬಳಿಕ ಫೀಲ್ಡ್‌ಗೆ ಆಗಮಿಸಿ ಚಿಕಿತ್ಸೆ ನೀಡಿದರಾದರೂ ಬಳಿಕ ಫೀಲ್ಡಿಂಗ್ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಶುಬ್ಮನ್ ಗಿಲ್ ಬಳಿಕ ಬಲಿಯಾಗಿ ಫಿಲ್ಡಿಂಗ್ ನಡೆಸಿದರು. ಈಗ ಶ್ರೇಯಸ್ ಐಯ್ಯರ್ ಮುಂದಿನ ಎರಡು ಪಂದ್ಯಗಳಿಂದಲೂ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಈ ಮಧ್ಯೆ ಐಪಿಎಲ್‌ನಲ್ಲಿ ಶ್ರೇಯಸ್ ಐಯ್ಯರ್ ಆಡುವ ಬಗ್ಗೆಯೂ ಪ್ರಶ್ನೆಗಳು ಎದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕಳೆದ ಎರಡು ಆವೃತ್ತಿಗಳಿಂದ ಶ್ರೇಯಸ್ ಐಯ್ಯರ್ ಮುನ್ನಡೆಸುತ್ತಿದ್ದು ಕಳೆದ ಬಾರಿಯ ಆವೃತ್ತಿಯಲ್ಲಿ ಫೈನಲ್‌ವರೆಗೂ ತಲುಪುವಲ್ಲಿ ಐಯ್ಯರ್ ಪಡೆ ಯಶಸ್ವಿಯಾಗಿತ್ತು.
ಇನ್ನು ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಸಂದರ್ಭದಲ್ಲಿ ರೋಹಿತ್ ಶರ್ಮಾ ಕೂಡ ಗಾಯಗೊಂಡಿದ್ದರು. ಚಿಕಿತ್ಸೆ ಪಡೆದು ಬ್ಯಾಟಿಂಗ್ ಮುಂದುವರಿಸಿದ್ದರಾದರೂ ಫೀಲ್ಡಿಂಗ್‌ಗೆ ಶರ್ಮಾ ಇಳಿದಿರಲಿಲ್ಲ. ಮತ್ತೊಂದೆಡೆ ಇಂಗ್ಲೆಂಡ್ ತಂಡದಲ್ಲೂ ನಾಯಕ ಇಯಾನ್ ಮಾರ್ಗನ್ ಹಾಗೂ ಸ್ಯಾಮ್ ಬಿಲ್ಲಿಂಗ್ಸ್ ಗಾಯಗೊಂಡಿದ್ದು ಅವರ ಲಬ್ಯತೆ ಕೂಡ ಅನುಮಾನವಾಗಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications