ಟೀಮ್ ಇಂಡಿಯಾ 3ನೇ ಟೆಸ್ಟ್ ಪಂದ್ಯ ಗೆಲ್ಲಲಿದೆ: ಸೌರವ್ ಗಂಗೂಲಿ

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಗೆಲ್ಲಲಿದೆ ಎಂದು ಬೋರ್ಡ್ ಆಫ್ ಪಂಟ್ರೋಲ್ ಪಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್‌ಗೂ ಮುನ್ನ ಗಂಗೂಲಿ ಈ ಹೇಳಿಕೆ ನೀಡಿದ್ದಾರೆ.
ಭಾರತ-ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳು ಮುಗಿದಿವೆ. ಸರಣಿ 1-1ರಿಂದ ಸಮಬಲಗೊಂಡಿದೆ. ಮೂರನೇ ಟೆಸ್ಟ್ ಪಂದ್ಯ ಡೇ-ನೈಟ್ ಟೆಸ್ಟ್ ಅಥವಾ ಪಿಂಕ್‌ಬಾಲ್ ಟೆಸ್ಟ್ ಆಗಿದ್ದು, ಅಹ್ಮದಾಬಾದ್‌ನ ಮೊಟೆರಾ ಸ್ಟೇಡಿಯಂನಲ್ಲಿ ಫೆಬ್ರವರಿ 24ರಂದು 2.30 pmಗೆ ಆರಂಭಗೊಳ್ಳಲಿದೆ.
'ಭಾರತೀಯ ಕ್ರಿಕೆಟ್ ಈಗ ಸಾಕಷ್ಟು ಬದಲಾಗಿದೆ. ನಮ್ಮ ಹುಡುಗರು ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ನಾವು ಚೆನ್ನಾಗಿ ಆಡಿದರೆ ಪಿಂಕ್‌ಬಾಲ್ ಟೆಸ್ಟ್‌ನಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ನನಗೆ ಭರವಸೆಯಿದೆ,' ಎಂದು ಎಎನ್‌ಐ ಜೊತೆ ಮಾತನಾಡಿದ ಗಂಗೂಲಿ ಹೇಳಿದ್ದಾರೆ.
ಚೆನ್ನೈನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ 227 ರನ್ ಸೋಲನುಭವಿಸಿದ್ದ ಭಾರತ, ದ್ವಿತೀಯ ಪಂದ್ಯದಲ್ಲಿ 317 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಹೀಗಾಗಿ ಪಿಂಕ್‌ಬಾಲ್ ಟೆಸ್ಟ್‌ನಲ್ಲೂ ಗೆಲುವು ಕಾಣುವ ಯೋಜನೆ ವಿರಾಟ್ ಕೊಹ್ಲಿ ಬಳಗದ್ದಾಗಿದೆ. ಈ ಟೆಸ್ಟ್ ಸರಣಿಯ ಫಲಿತಾಂಶ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸ್ಪರ್ಧಿಯನ್ನು ನಿರ್ಧರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications