ಭಾರತ vs ಇಂಗ್ಲೆಂಡ್: ಸ್ಟಾರ್ ಸ್ಪೋರ್ಟ್ಸ್‌ನಿಂದ ದಾಖಲೆ ಟೆಸ್ಟ್ ವ್ಯೂವರ್‌ಶಿಪ್

ನವದೆಹಲಿ: ಭಾರತದ ಕ್ರೀಡಾ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್, ವ್ಯೂವರ್‌ಶಿಪ್‌ನಲ್ಲಿ ದಾಖಲೆ ನಿರ್ಮಿಸಿದೆ. ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ಸ್ಟಾರ್ ಸ್ಟೋರ್ಟ್ಸ್ ದಾಖಲೆಯ ವ್ಯೂವರ್‌ಶಿಪ್ ನೀಡಿದೆ. ಕಳೆದ ಐದು ವರ್ಷಗಳಲ್ಲಿ ಪ್ರಸಾರಕವೊಂದು ನೀಡಿದ ಅತ್ಯಧಿಕ ವ್ಯೂವರ್‌ಶಿಪ್ ದಾಖಲೆಗೆ ಇದು ಕಾರಣವಾಗಿದೆ.
ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಸದ್ಯ ಐದು ಪಂದ್ಯಗಳ ಟಿ20ಐ ಸರಣಿ ಆಡುತ್ತಿದೆ. ಈ ಸರಣಿಗೂ ಮುನ್ನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆದಿತ್ತು. ಈ ಸರಣಿ ವೇಳೆ ಕಳೆದ ಐದು ವರ್ಷಗಳಲ್ಲೇ ಅತ್ಯಧಿಕ ವ್ಯೂವರ್‌ಶಿಪ್ ಬಂದಿದೆ. ಇದನ್ನು ಒಂದು ನಿಮಿಷಕ್ಕೆ ಪರಿಗಣಿಸಿದರೆ ಸರಾಸರಿ 1.3 ಮಿಲಿಯನ್ ವ್ಯೂವರ್‌ಶಿಪ್ ಲಭಿಸುತ್ತದೆ.
ಟೆಸ್ಟ್ ಕ್ರಿಕೆಟ್‌ನ ವ್ಯೂವರ್‌ಶಿಪ್‌ನಲ್ಲಿ ದಾಖಲೆ ನಿರ್ಮಾಣವಾಗಲು ಕಾರಣವಿದೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಇತ್ತೀಚೆಗೆ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಪರಿಗಣಿಸಿತ್ತು. ಅಲ್ಲದೆ ಈಚಿನ ದಿನಗಳಲ್ಲಿ ಟೆಸ್ಟ್ ಬೋರಿಂಗ್ ಅನ್ನಿಸುವುದಕ್ಕಿಂತ ಹೆಚ್ಚಾಗಿ ಜನಪ್ರಿಯಗೊಳ್ಳಲಾರಂಭಿಸಿದೆ.
ಹೀಗಾಗಿ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ಒಟ್ಟಾರೆ 103 ಮಿಲಿಯನ್ ವ್ಯೂವರ್‌ಶಿಪ್ ಲಭಿಸಿದೆ. ಟೆಸ್ಟ್ ಸರಣಿಯ ವೇಳೆ ಕೊನೇ ಎರಡು ಟೆಸ್ಟ್ ಪಂದ್ಯಗಳು ಪೂರ್ತಿ ಐದು ದಿನ ನಡೆಯದೆ 2-3 ದಿನಗಳಲ್ಲಿ ಮುಗಿದಿತ್ತು. ಈ ವೇಳೆಯೂ ವೀಕ್ಷಕರ ಸಂಖ್ಯೆ ದೊಡ್ಡದೇ ಇತ್ತು ಅನ್ನೋದು ವಿಶೇಷ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications