ಭಾರತ vs ಇಂಗ್ಲೆಂಡ್: ಫಿಟ್ನೆಸ್ ಪರೀಕ್ಷೆಯಲ್ಲಿ ಟಿ ನಟರಾಜನ್ ಪಾಸ್

ಅಹ್ಮದಾಬಾದ್: ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಾಲಿಸ್ಟ್ ಟಿ ನಟರಾಜನ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಎಡಗೈ ವೇಗಿ ನಟರಾಜನ್ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಾಲ್ಕನೇ ಟಿ20ಐ ಪಂದ್ಯದ ವೇಳೆ ಡಗ್‌ಔಟ್‌ನಲ್ಲಿ ಕುಳಿತಿದ್ದರು. ಈ ಪಂದ್ಯದಲ್ಲಿ ಭಾರತ 8 ರನ್ ರೋಚಕ ಜಯ ಗಳಿಸಿತ್ತು.
ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸದ ವೇಳೆ ಟಿ ನಟರಾಜನ್ ಭಾರತ ತಂಡದಲ್ಲಿ ಟೆಸ್ಟ್ ಕ್ರಿಕೆಟ್, ಏಕದಿನ ಮತ್ತು ಟಿ20ಐ ಮೂರೂ ಮಾದರಿಗಳಲ್ಲಿ ಪಾದಾರ್ಪಣೆ ಮಾಡಿದ್ದರು. ಅಲ್ಲದೆ ಉತ್ತಮ ಬೌಲಿಂಗ್ ಪ್ರದರ್ಶನ ಕೂಡ ನೀಡಿ ಗಮನ ಸೆಳೆದಿದ್ದರು.
ಇಂಗ್ಲೆಂಡ್-ಭಾರತ ಸರಣಿಯ ವೇಳೆ ತಂಡದಲ್ಲಿದ್ದ ನಟರಾಜನ್ ಭುಜದ ನೋವಿನ ಸಮಸ್ಯೆಯಿಂದಾಗಿ ಐದು ಪಂದ್ಯಗಳ ಟಿ20 ಸರಣಿಯ ಕೆಲ ಪಂದ್ಯಗಳಿಂದ ಹೊರಗುಳಿಯಬೇಕಾಗಿ ಬಂದಿತ್ತು. ಮತ್ತೆ ಫಿಟ್ ಆಗಿರುವ ನಟರಾಜನ್, ಕೊನೇ ಟಿ20ಐನಲ್ಲಿ ಅಥವಾ ಏಕದಿನ ಸರಣಿಯಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ.
'2 ಕಿ.ಮೀ. ರೇಸ್ ಯೋ-ಯೋ ಟೆಸ್ಟ್ ಸೇರಿ ಎಲ್ಲಾ ಕಡ್ಡಾಯ ಫಿಟ್ನೆಸ್ ಪರೀಕ್ಷೆಗಳಲ್ಲಿ ನಟರಾಜನ್ ಪಾಸ್ ಆಗಿದ್ದಾರೆ. ಅಹ್ಮದಾಬಾದ್‌ಗೆ ನಟರಾಜನ್ ಕೆಲ ದಿನಗಳ ಹಿಂದೆಯೇ ಬಂದಿದ್ದರಾದರೂ ಕ್ವಾರಂಟೈನ್ ನಿಯಮದಿಂದಾಗಿ ತಂಡದ ಜೊತೆಗಿರಲು ಸಾಧ್ಯವಾಗಿರಲಿಲ್ಲ,' ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications