ಟಿ20ಐನಲ್ಲಿ ಭಾರತ-ಇಂಗ್ಲೆಂಡ್: ಕುತೂಹಲಕಾರಿ ಅಂಕಿ-ಅಂಶಗಳು!

ನವದೆಹಲಿ: ಭಾರತ vs ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಮುಕ್ತಾಯಗೊಂಡಿದೆ. ಸರಣಿಯನ್ನು 3-1ರಿಂದ ಗೆದ್ದಿರುವ ವಿರಾಟ್ ಕೊಹ್ಲಿ ಪಡೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಾಗಿದೆ. ಮುಂದೆ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟಿ20ಐ ಸರಣಿ ಆರಂಭಗೊಳ್ಳಲಿದೆ. ಮಾರ್ಚ್ 12ರಿಂದ ಟಿ20ಐ ಸರಣಿ ಶುರುವಾಗಲಿದೆ.
ಸದ್ಯದ ಟಿ20ಐ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಇಂಗ್ಲೆಂಡ್ ಮತ್ತು ನಂ.3ನೇ ಸ್ಥಾನದಲ್ಲಿರುವ ಭಾರತ ಮೊದಲನಿಂದಲೂ ಟಿ20ನಲ್ಲಿ ಜಿದ್ದಾಜಿದ್ದಿ ಕದನಗಳ ದಾಖಲೆಗಳನ್ನು ಹೊಂದಿದೆ. ಅದರಲ್ಲೂ ಈ ವರ್ಷ ಟಿ20 ವಿಶ್ವಕಪ್ ನಡೆಯಲಿರುವುದರಿಂದ ನಡೆಯಲಿರುವ ಟಿ20ಐ ಸರಣಿಯಲ್ಲಿ ಗೆಲ್ಲುವ ಉದ್ದೇಶವನ್ನು ಭಾರತ-ಇಂಗ್ಲೆಂಡ್ ಎರಡೂ ತಂಡಗಳೂ ಇಟ್ಟುಕೊಂಡಿವೆ.
ಭಾರತ-ಇಂಗ್ಲೆಂಡ್ ಮುಖಾಮುಖಿಯ ಕುತೂಹಲಕಾರಿ ಅಂಕಿ-ಅಂಶಗಳ ಮಾಹಿತಿ ಇಲ್ಲಿದೆ.

ನಾನಾ-ನೀನಾ ರೀತಿಯ ಕದನ
ಭಾರತ ಮತ್ತು ಇಂಗ್ಲೆಂಡ್ ತಂಡಗಳು ಈವರೆಗೆ ಒಟ್ಟು 14 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ವಿಶೇಷವೆಂದರೆ ಈ 14 ಪಂದ್ಯಗಳಲ್ಲಿ 7ರಲ್ಲಿ ಭಾರತ ಗೆದ್ದಿದ್ದರೆ, 7ರಲ್ಲಿ ಇಂಗ್ಲೆಂಡ್ ಗೆದ್ದಿದೆ. ಅಂದರೆ ಎರಡೂ ತಂಡಗಳು ಚುಟುಕು ಕ್ರಿಕೆಟ್ ಮಾದರಿಯಲ್ಲಿ ಸಮಬಲದ ಸಾಧನೆ ತೋರಿವೆ. ಹೀಗಾಗಿ ಟಿ20ಐನಲ್ಲಿ ಬಲಿಷ್ಠ ತಂಡ ಯಾವುದು ಅನ್ನೋದನ್ನು ಮುಂಬರಲಿರುವ ಭಾರತ-ಇಂಗ್ಲೆಂಡ್ ಟಿ20ಐ ಸರಣಿ ಹೇಳಲಿದೆ.

ತಾಣಗಳಲ್ಲಿ ಸೋಲು/ಗೆಲುವು
ಭಾರತ-ಇಂಗ್ಲೆಂಡ್ ಒಟ್ಟು 14 ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ 7 ಪಂದ್ಯಗಳನ್ನು ಗೆದ್ದಿದೆ. ತಟಸ್ಥ ತಾಣವಾದ ಡರ್ಬನ್‌ನಲ್ಲಿ ಎರಡು ಪಂದ್ಯಗಳು ನಡೆದಿದ್ದವು. ಇದರಲ್ಲಿ ಎರಡೂ ಪಂದ್ಯಗಳನ್ನು ಭಾರತ ಗೆದ್ದಿದೆ. ಇನ್ನು ಭಾರತದಲ್ಲಿ 6 ಪಂದ್ಯಗಳು ನಡೆದಿತ್ತು. ಇದರಲ್ಲಿ ಭಾರತ 3 ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿದೆ. 2012ರಲ್ಲಿ ಪೂಣೆ, 2017ರಲ್ಲಿ ನಾಗ್ಪುರ್, 2017ರಲ್ಲಿ ಬೆಂಗಳೂರಿನಲ್ಲಿ ಈ ಪಂದ್ಯಗಳು ನಡೆದಿದ್ದವು. ಇಂಗ್ಲೆಂಡ್‌ನಲ್ಲಿ ನಡೆದಿದ್ದ 6 ಪಂದ್ಯಗಳಲ್ಲಿ 2ರಲ್ಲಿ ಭಾರತ ಗೆದ್ದಿದೆ.

ಕುತೂಹಲಕಾರಿ ಅಂಕಿ-ಅಂಶಗಳು
* ಭಾರತ vs ಇಂಗ್ಲೆಂಡ್ ಒಟ್ಟು ಟಿ20ಐ ಪಂದ್ಯಗಳು 14
* ಭಾರತ ಗೆದ್ದಿದ್ದು 7 ಪಂದ್ಯಗಳು, ಇಂಗ್ಲೆಂಡ್ ಗೆದ್ದಿದ್ದು 7 ಪಂದ್ಯಗಳು
* ಎರಡೂ ತಂಡಗಳು ಟಿ20ಐನಲ್ಲಿ ಮೊದಲು ಮುಖಾಮುಖಿಯಾಗಿದ್ದು 19 ಸೆಪ್ಟೆಂಬರ್ 2007 (ಇದರಲ್ಲಿ ಭಾರತ ಗೆದ್ದಿತ್ತು)
* ಕೊನೇಯ ಬಾರಿಗೆ ಭಾರತ-ಇಂಗ್ಲೆಂಡ್ ಕಾದಾಡಿದ್ದು (ಟಿ20ಐನಲ್ಲಿ) 8 ಜುಲೈ 2018 (ಇದರಲ್ಲಿ ಭಾರತಕ್ಕೆ ಜಯ)
* ಅತ್ಯಧಿಕ ರನ್ ದಾಖಲೆ: ವಿರಾಟ್ ಕೊಹ್ಲಿ (346 ರನ್)
* ಅತ್ಯಧಿಕ ವಿಕೆಟ್ ದಾಖಲೆ ಯುಜುವೇಂದ್ರ ಚಾಹಲ್ (9 ವಿಕೆಟ್‌ಗಳು)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications