ಇಂಗ್ಲೆಂಡ್ vs ಭಾರತ 3ನೇ ಟೆಸ್ಟ್: ಭಾರತದ ಸಂಭಾವ್ಯ ತಂಡ ಇಲ್ಲಿದೆ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಎರಡು ತಲಾ ಒಂದೊಂದು ಗೆಲುವನ್ನು ಸಾಧಿಸಿರುವುದು ಮುಂದಿನೆರಡು ಪಂದ್ಯಗಳ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಜೊತೆಗೆ ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ಗೇರುವ ಅರ್ಹತೆಯನ್ನೂ ಈ ಸರಣಿ ನೀಡುವುದರಿಂದ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಮೂರನೇ ಟೆಸ್ಟ್ ಪಂದ್ಯ ಅಹರ್ನಿಶಿ ಪಂದ್ಯವಾಗಿರುವ ಕಾರಣ ಭಾರತೀಯ ಅಭಿಮಾನಿಗಳ ಎದೆ ಬಡಿತ ಹೆಚ್ಚಾಗುವಂತೆ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧದ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಆಘಾತಕಾರಿಯಾಗಿ 37 ರನ್‌ಗಳಿಗೆ ಕುಸಿದಿರುವುದು ಅಭಿಮಾನಿಗಳ ಹಾಗೂ ಆಟಗಾರರ ಸ್ಮೃತಿಪಟಲದಿಂದ ಅಷ್ಟು ಸುಲಭವಾಗಿ ಮರೆಯಾಗಲು ಸಾಧ್ಯವಿಲ್ಲ. ಹೀಗಾಗಿ ಇದೀಗ ಮತ್ತೊಂದು ಡೇ-ನೈಟ್ ಪಂದ್ಯ ನಡೆಯುತ್ತಿರುವ ಕಾರಣ ತಂಡ ಸಾಕಷ್ಟು ಬಲಿಷ್ಠವಾಗಿರುವುದನ್ನು ಅಭಿಮಾನಿಗಳು ಬಯಸುತ್ತಿದ್ದಾರೆ.
ಹಾಗಾದರೆ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಭಾರತೀಯ ಆಡುವ ಸಂಭಾವ್ಯ ತಂಡ ಹೇಗಿದೆ? ಮುಂದೆ ಓದಿ..

ಆರಂಭಿಕರಾಗಿ ರೋಹಿತ್-ಗಿಲ್
ಆರಂಭಿಕ ಜೋಡಿಯಾಗಿ ಮೂರನೇ ಪಂದ್ಯದಲ್ಲೂ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಮುಂದುವರಿಯಲಿದ್ದಾರೆ. ಅಂತಿಮ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜಟಿ 161 ರನ್ ಸಿಡಿಸುವ ಮೂಲಕ ತಾವು ಫಾರ್ಮ್‌ಗೆ ಮರಳಿರುವುದನ್ನು ಘೋಷಿಸಿದ್ದಾರೆ. ಹೀಗಾಘಿ ಅವರಿಂದ ಮುಂದಿನ ಪಮದ್ಯದಲ್ಲಿ ಮತ್ತಷ್ಟು ರನ್ ಹರಿದುಬರುವ ಸಾಧ್ಯತೆಯಿದೆ. ಮತ್ತೊಂದೆಡೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಶುಬ್ಮನ್ ಗಿಲ್ ಚೇತರಿಸಿಕೊಂಡಿದ್ದು ಮೂರನೇ ಪಂದ್ಯದಲ್ಲಿ ಮಿಂಚುವ ಭರವಸೆಯಲ್ಲಿದ್ದಾರೆ.

ಮಧ್ಯಮ ಕ್ರಮಾಂಕ
ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕ ಅನುಭವಿ ಆಟಗಾರರಿಂದ ಕೂಡಿದೆ. ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ, ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿರುವ ರಿಷಬ್ ಪಂತ್ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಪಕ್ಕಾ. ಸುದೀರ್ಘ ಕಾಲದಿಂದ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಶತಕ ಸಿಡಿಯದಿರುವುದರಿಂದ ಮುಂದಿನ ಪಂದ್ಯದಲ್ಲಿ ಶತಕದ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ.

ಆಲ್‌ರೌಂಡರ್‌ಗಳು
ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕ ಅನುಭವಿ ಆಟಗಾರರಿಂದ ಕೂಡಿದೆ. ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ, ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿರುವ ರಿಷಬ್ ಪಂತ್ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಪಕ್ಕಾ. ಸುದೀರ್ಘ ಕಾಲದಿಂದ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಶತಕ ಸಿಡಿಯದಿರುವುದರಿಂದ ಮುಂದಿನ ಪಂದ್ಯದಲ್ಲಿ ಶತಕದ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ.

ಕುಲ್‌ದೀಪ್ ಯಾದವ್/ಉಮೇಶ್ ಯಾದವ್ ಯಾರಿಗೆ ಸ್ಥಾನ
ಚೈನಾಮನ್ ಸ್ಪಿನ್ನರ್ ಖ್ಯಾತಿಯ ಕುಲ್‌ದೀಪ್ ಯಾದವ್ ಸುದೀರ್ಘ ಎರಡು ವರ್ಷಗಳ ನಂತರ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಅವಕಾಶವನ್ನು ಪಡೆದುಕೊಂಡದ್ದರು. ಸಿಕ್ಕ ಸೀಮಿತ ಅವಕಾಶದಲ್ಲಿ ಹೆಚ್ಚಿನ ಗಮನ ಸೆಳೆಯಲು ಕುಲ್‌ದೀಪ್ ಯಾದವ್ ಯಶಸ್ವಿಯಾಗಲಿಲ್ಲ. ಮತ್ತೊಂದೆಡೆ ವೇಗಿ ಉಮೇಶ್ ಯಾದವ್ ಗಾಯದಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿದ್ದಾರೆ. ಮೊಟೇರಾ ಸ್ಟೇಡಿಯಮ್ ಕುಡ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವ ನಿರೀಕ್ಷೆಯಿರುವ ಕಾರಣ ಕುಲ್‌ದೀಪ್ ಯಾದವ್‌ಗೆ ಮತ್ತೊಂದು ಅವಕಾಶ ದೊರೆಯುವ ಸಾಧ್ಯತೆಯಿದೆ. ಆದರೆ ಪಿಂಕ್ ಚೆಂಡನ್ನು ದೃಷ್ಟಿಯಲ್ಲಿಟ್ಟುಕೊಂಡು ಉಮೇಶ್ ಯಾದವ್‌ಗೆ ಅವಕಾಶ ದೊರೆತರೂ ಅಚ್ಚರಿಯಿಲ್ಲ.

ಇಶಾಂತ್ ಹಾಗೂ ಬೂಮ್ರಾ ಪಕ್ಕಾ
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬೂಮ್ರಾ ವಿಶ್ರಾಂತಿಯನ್ನು ಪಡೆದಿದ್ದರು. ಈಗ ಮೂರನೇ ಟೆಸ್ಟ್‌ಗೆ ಅವರು ಆಡುವ ಬಳಗಕ್ಕೆ ಮರಳುವುದರಲ್ಲಿ ಅನುಮಾನವಿಲ್ಲ. ಮತ್ತೊಂದೆಡೆ ಅನುಭವಿ ಇಶಾಂತ್ ಶರ್ಮಾ ಕೂಡ ಮೊಟೆರಾ ಸ್ಟೇಡಿಯಮ್‌ನಲ್ಲಿ ನೂರನೇ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications