ಭಾರತ vs ಇಂಗ್ಲೆಂಡ್: ಆಂಗ್ಲರೆದುರು ಭಾರತದ ಆರಂಭಿಕ ಜೋಡಿ ದುರ್ಬಲವಾಗಲಿದೆಯಾ?

ಇಂಗ್ಲೆಂಡ್: ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಮುಗಿಸಿರುವ ಟೀಮ್ ಇಂಡಿಯಾ ಮುಂದೆ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಭಾರತದ ಆರಂಭಿಕ ಜೋಡಿಯಲ್ಲಿ ಯುವ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಗಾಯಕ್ಕೀಡಾಗಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತದ ಆರಂಭಿಕ ಜೋಡಿ ದುರ್ಬಲವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈಗಿರುವ ಭಾರತೀಯ ಆರಂಭಿಕ ಆಟಗಾರರೆಂದರೆ ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್. ಅದು ಬಿಟ್ಟರೆ ಶುಬ್ಮನ್ ಗಿಲ್ ಜಾಗಕ್ಕೆ ಅಭಿಮನ್ಯು ಈಶ್ವರನ್ ಮೀಸಲು ಆಟಗಾರರಾಗಿ ತಂಡದಲ್ಲಿದ್ದಾರೆ.
ಈಗ ತಂಡದಲ್ಲಿರುವ ಆರಂಭಿಕ ಆಟಗಾರರಲ್ಲಿ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಇಬ್ಬರೂ ಫಾರ್ಮ್‌ನಲ್ಲಿ ಇದ್ದಂತಿಲ್ಲ. ಕಾರಣ ಇಬ್ಬರೂ 2 ವರ್ಷದಿಂದ ಒಂದೂ ಟೆಸ್ಟ್ ಪಂದ್ಯ ಆಡಿಲ್ಲ. ಅಷ್ಟೇ ಅಲ್ಲ, ಉಳಿದಿರುವ ರೋಹಿತ್ ಶರ್ಮಾ ಕೂಡ ಅಂದುಕೊಳ್ಳುವ ಫಾರ್ಮ್‌ನಲ್ಲಿ ಇದ್ದಂತಿಲ್ಲ. ಯಾಕೆಂದರೆ WTC ಫೈನಲ್‌ನಲ್ಲಿ ಶರ್ಮಾ 30ರ ಆಸುಪಾಸಷ್ಟೇ ರನ್ ಗಳಿಸಿದ್ದರು.
ಎಲ್ಲಾ ಬಿಟ್ಟು, ಮೀಸಲು ಆಟಗಾರ ಅಭಿಮನ್ಯು ಈಶ್ವರನ್ ಆಡಬಹುದು ಅಂದುಕೊಂಡರೆ, ಅವರೂ ಕೂಡ 2019-20ರ ರಣಜಿಯಲ್ಲಿ ಟಾಪ್ 5 ರನ್‌ಗೆಟ್ಟರ್ ಪಟ್ಟಿಯಲ್ಲಿ ಕಾಣಿಸಿಕೊಂಡವರಲ್ಲ. ಹೀಗಾಗಿ ಟೆಸ್ಟ್ ಸರಣಿಯಲ್ಲಿ ಭಾರತದ ಆರಂಭಿಕ ಜೋಡಿಯ ಬ್ಯಾಟಿಂಗ್ ಕುತೂಹಲ ಮೂಡಿಸಿದೆ. ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಆಗಸ್ಟ್ 4ರಿಂದ ಸೆಪ್ಟೆಂಬರ್ 14ರ ವರೆಗೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications