ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಪಂದ್ಯಗಳಿಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ

India vs England: Team India squad for 2 Tests announced

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಐತಿಹಾಸಿಕ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಗೆದ್ದಿರುವ ಟೀಮ್ ಇಂಡಿಯಾ ಫೆಬ್ರವರಿಯಲ್ಲಿ ಮತ್ತೊಂದು ಸುದೀರ್ಘ ಸರಣಿಗೆ ಸಜ್ಜಾಗುತ್ತಿದೆ. ಮುಂದಿನ ತಿಂಗಳು ಇಂಗ್ಲೆಂಡ್ ತಂಡ ಭಾರತಕ್ಕೆ ಪ್ರವಾಸ ಬರಲಿದ್ದು, ಭಾರತ-ಇಂಗ್ಲೆಂಡ್ ತಂಡಗಳು 4 ಪಂದ್ಯಗಳ ಟೆಸ್ಟ್ ಸರಣಿ, 5 ಪಂದ್ಯಗಳ ಟಿ20ಐ ಮತ್ತು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

'ಗಬ್ಬಾ'ದಲ್ಲಿ ಮನಗೆದ್ದ ಭಾರತೀಯ ಬಡ ಆಟಗಾರರ ಮನಮುಟ್ಟುವ ಕತೆ!'ಗಬ್ಬಾ'ದಲ್ಲಿ ಮನಗೆದ್ದ ಭಾರತೀಯ ಬಡ ಆಟಗಾರರ ಮನಮುಟ್ಟುವ ಕತೆ!

ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳಿಗಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 18 ಮಂದಿಯ ಭಾರತ ತಂಡ ಪ್ರಕಟಿಸಿದೆ.

ಭಾರತ vs ಆಸ್ಟ್ರೇಲಿಯಾ: ಅಂತಿಮ ಟೆಸ್ಟ್ ಪಂದ್ಯ ಗೆಲ್ಲಲು ಕಾರಣವಾದ ಐದು ಅಂಶಗಳುಭಾರತ vs ಆಸ್ಟ್ರೇಲಿಯಾ: ಅಂತಿಮ ಟೆಸ್ಟ್ ಪಂದ್ಯ ಗೆಲ್ಲಲು ಕಾರಣವಾದ ಐದು ಅಂಶಗಳು

ಕೊರೊನಾ ವೈರಸ್ ಸೋಂಕಿನ ಭೀತಿಯಿರುವುದರಿಂದ ಎಂದಿನಂತೆ 16 ಜನರ ತಂಡ ಪ್ರಕಟಿಸುವ ಬದಲಾಗಿ 18 ಮಂದಿಯ ತಂಡ ಪ್ರಕಟಗೊಂಡಿದೆ.

ಪ್ರಮುಖ ಆಟಗಾರರಿಲ್ಲ

ಪ್ರಮುಖ ಆಟಗಾರರಿಲ್ಲ

ಆಸ್ಟ್ರೇಲಿಯಾ ಪ್ರವಾಸವನ್ನು ಪರಿಗಣಿಸಿದರೆ ಅಲ್ಲಿ ಮೊದಲ ಆಯ್ಕೆಯ ತಂಡಕ್ಕಿಂತ ಈ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲ ಆಯ್ಕೆಯ ಆಟಗಾರರಾದ ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್ ಮತ್ತು ಹನುಮ ವಿಹಾರಿ ತಂಡದಲ್ಲಿ ಕಾಣಸಿಕೊಂಡಿಲ್ಲ. ಅವರೆಲ್ಲ ಗಾಯಕ್ಕೀಡಾಗಿರುವುದು ಇದಕ್ಕೆ ಕಾರಣ.

ಹೊಸ ಸೇರ್ಪಡೆ ಯಾರು?

ಹೊಸ ಸೇರ್ಪಡೆ ಯಾರು?

ಬಿಸಿಸಿಐ ಮಂಗಳವಾರ (ಜನವರಿ 19) ಪ್ರಕಟಿಸಿರುವ ತಂಡದಲ್ಲಿ ಅಕ್ಸರ್ ಪಟೇಲ್, ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೆಸರಿದೆ. ಆದರೆ ಪೃಥ್ವಿ ಶಾ, ನವದೀಪ್ ಸೈನಿ (ಗಾಯ) ಹೆಸರು ಪಟ್ಟಿಯಲ್ಲಿಲ್ಲ. ಇನ್ನು ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ರಿಷಭ್ ಪಂತ್ ಮೊದಲಾದವರಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗೆ ಭಾರತ ತಂಡ

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗೆ ಭಾರತ ತಂಡ

ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಅಕ್ಸರ್ ಪಟೇಲ್, ಚೇತೇಶ್ವರ ಪೂಜಾರ, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಕೆ.ಎಲ್. ರಾಹುಲ್, ಕುಲದೀಪ್ ಯಾದವ್, ಮಾಯಾಂಕ್ ಅಗರ್ವಾಲ್, ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್, ರಿಷಭ್ ಪಂತ್ (ಡಬ್ಲ್ಯೂಕೆ), ರೋಹಿತ್ ಶರ್ಮಾ, ಶಾರ್ದೂಲ್ ಠಾಕೂರ್, ಶುಬ್ಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ವೃದ್ಧಿಮಾನ್ ಸಹಾ (ಡಬ್ಲ್ಯೂಕೆ).

Story first published: Wednesday, January 20, 2021, 9:38 [IST]
Other articles published on Jan 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X