For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಹೊರಾಂಗಣ ಅಭ್ಯಾಸ ಶುರು

India vs England: Team India start outdoor training session at Chepauk

ಚೆನ್ನೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಎದುರುಗೊಳ್ಳಲಿರುವ ಟೀಮ್ ಇಂಡಿಯಾ ಶುಕ್ರವಾರ (ಫೆಬ್ರವರಿ 1) ಹೊರಾಂಗಣ ಅಭ್ಯಾಸ ಆರಂಭಿಸಿದೆ. ಶುಕ್ರವಾರಕ್ಕೆ ಭಾರತ ಮತ್ತು ಇಂಗ್ಲೆಂಡ್ ತಂಡದ ಆರು ದಿನಗಳ ಕ್ವಾರಂಟೈನ್ ಮುಗಿದಿದೆ. ಅಲ್ಲದೆ ಎರಡೂ ತಂಡಗಳಿಗೆ ನಡೆಸಲಾದ ಕೊರೊನಾ ವೈರಸ್ ಪರೀಕ್ಷೆಯ ಫಲಿತಾಂಶವೂ ನೆಗೆಟಿವ್ ಬಂದಿದೆ.

ಪ್ರವಾಸ ಸರಣಿಗಳಲ್ಲಿ ಕಾದಾಡಲಿರುವ ಭಾರತ-ಇಂಗ್ಲೆಂಡ್ ಎರಡೂ ತಂಡಗಳಿಗೂ ಒಟ್ಟಿಗೆ ಮೂರು ಬಾರಿ ಕೊರೊನಾವೈರಸ್ ಪರೀಕ್ಷೆ ನಡೆಸಲಾಗಿತ್ತು. ಮೂರರಲ್ಲೂ ಫಲಿತಾಂಶ ನೆಗೆಟಿವ್ ಬಂದಿದೆ. ಅಸಲಿಗೆ ಭಾರತಕ್ಕೆ ಗುರುವಾರವೇ ಕ್ವಾರಂಟೈನ್ ಮುಗಿದಿತ್ತು.

ವಿರಾಟ್ ಕೊಹ್ಲಿ ಪಡೆ ಕ್ವಾರಂಟೈನ್ ಮುಗಿಸಿ ಅಭ್ಯಾಸ ಆರಂಭಿಸಿರುವ ಚಿತ್ರಣವನ್ನು ಬಿಸಿಸಿಐ ನೀಡಿದೆ. ಶುಕ್ರವಾರ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿತ್ರಗಳನ್ನು ಹಾಕಿಕೊಂಡಿದ್ದ ಬಿಸಿಸಿಐ, '6 ದಿನಗಳ ಕ್ವಾರಂಟೈನ್ ಬಳಿಕ ಚೆಪಕ್ ಸ್ಟೇಡಿಯಂನಲ್ಲಿ ಭಾರತ ತಂಡ' ಎಂದು ಬರೆದುಕೊಂಡಿದೆ.

ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ತಂಡ ಮೊದಲು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಬಳಿಕ ಐದು ಪಂದ್ಯಗಳ ಟಿ20ಐ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಆರಂಭಿಕ ಎರಡು ಟೆಸ್ಟ್ ಪಂದ್ಯಗಳು ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.

Story first published: Tuesday, February 2, 2021, 0:12 [IST]
Other articles published on Feb 2, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+