For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್, ಟೆಸ್ಟ್‌ ಸರಣಿ: ಅಭ್ಯಾಸ ಪಂದ್ಯದ ದಿನಾಂಕ ಪ್ರಕಟ

India vs England: Team India to play warm up game from July 20 to 22

ನವದೆಹಲಿ: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಜುಲೈ 20-22ರ ವರೆಗೆ ಅಭ್ಯಾಸ ಪಂದ್ಯ ಆಡಲಿದೆ. ಈ ಅಭ್ಯಾಸ ಪಂದ್ಯವನ್ನು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ವ್ಯವಸ್ಥೆ ಮಾಡಲಿದೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ವಿನಂತಿಯ ಬಳಿಕ ಇಸಿಬಿ ಇದಕ್ಕೆ ಒಪ್ಪಿಕೊಂಡಿದೆ.

ಮಾಹಿತಿಯೊಂದರ ಪ್ರಕಾರ, ವಿರಾಟ್ ಕೊಹ್ಲಿಯ ತಂಡ ಇನ್ನೂ ನಿರ್ಧಾರವಾಗಿಲ್ಲ. ಆದರೆ ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಬಳಿಕ ಭಾರತೀಯ ತಂಡ ಸಣ್ಣ ಬಿಡುವು ಪಡೆದುಕೊಂಡಿರುವುದರಿಂದ ಅಭ್ಯಾಸ ಪಂದ್ಯದ ಅಗತ್ಯವಿದೆ.

"ಅಭ್ಯಾಸ ಪಂದ್ಯಕ್ಕಾಗಿ ಬಿಸಿಸಿಐ ಇಸಿಬಿಯಲ್ಲಿ ವಿನಂತಿಸಿಕೊಂಡಿತ್ತು. ಈ ಪಂದ್ಯ ಜುಲೈ 20-22ರ ವರೆಗೆ ನಡೆಯಲಿದೆ. ತಂಡಗಳು ಶೀಘ್ರ ನಿರ್ಧಾರವಾಗಲಿದೆ," ಎಂದು ಮೂಲವೊಂದು ವಿವರಿಸಿದೆ. ತಂಡದ ಆಂತರಿಕ ಅಭ್ಯಾಸಕ್ಕಿಂತ ಪರಸ್ಪರ ಎರಡೂ ತಂಡಗಳು ಅಭ್ಯಾಸ ನಡೆಸೋದು ಒಳ್ಳೆಯದು ಎಂದು ಎರಡೂ ತಂಡಗಳು ಅಭಿಪ್ರಾಯಿಸಿವೆ ಎನ್ನಲಾಗಿದೆ.

ಭಾರತೀಯ ತಂಡದಲ್ಲಿ ಈಗಾಗಲೇ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಶುಬ್ಮನ್ ಗಿಲ್ ಗಾಯಕ್ಕೀಡಾಗಿದ್ದಾರೆ. ಭಾರತದ ಆರಂಭಿಕ ಸ್ಥಾನಕ್ಕೆ ಯಾರು ಬರಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ. ಆಗಸ್ಟ್ 4ರಿಂದ ಸೆಪ್ಟೆಂಬರ್ 14ರ ವರೆಗೆ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ.

Story first published: Saturday, July 3, 2021, 9:10 [IST]
Other articles published on Jul 3, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+