For Quick Alerts
ALLOW NOTIFICATIONS  
For Daily Alerts
 

IND vs ENG Test: ಇಂಗ್ಲೆಂಡ್‌ನಲ್ಲಿ ಹೇಗಿದೆ ಭಾರತದ ಅಂಕಿ ಅಂಶ

ಟೀಮ್ ಇಂಡಿಯಾ ಐಪಿಎಲ್‌ ಮುಗಿದ ಬಳಿಕ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ಪ್ರವಾಸದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ವೇಳೆ ಟೀಮ್ ಇಂಡಿಯಾ ನಾಯಕ ಯಾರು? ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಬಾರಿ ಇಂಗ್ಲೆಂಡ್ ಪ್ರವಾಸ ಭಾರತಕ್ಕೆ ಸುಲಭವೇನು ಅಲ್ಲ. ಹಲವು ಸವಾಲುಗಳಿಂದ ಕುಡಿರಲಿದೆ. ಅನುಭವಿ ಆಟಗಾರರು ಅನುಪಸ್ಥಿತಿ ತಂಡವನ್ನು ಬಹುವಾಗಿ ಕಾಡಿದೆ. ಇದೇ ವೇಳೆ ಅಂಕಿ ಅಂಶಗಳು ಟೀಮ್ ಇಂಡಿಯಾ ನಿದ್ದೆ ಗೆಡಿಸಿವೆ.

ಇಂಗ್ಲೆಂಡ್ ವಿರುದ್ಧದ ಸರಣಿಗೆ ಇನ್ನು ತಂಡವನ್ನು ಪ್ರಕಟಿಸಬೇಕಿದೆ. ಈ ಪ್ರವಾಸಕ್ಕೂ ಮುನ್ನವೇ ರೋಹಿತ್ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇವರಿಬ್ಬರು ಅನುಭವಿಗಳ ಅನುಪಸ್ಥಿತಿ ತಂಡವನ್ನು ಬಹುವಾಗಿ ಕಾಡಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯಗಳು ನಡೆದಾಗಲೆಲ್ಲಾ, ಇಂಗ್ಲೆಂಡ್ ಯಾವಾಗಲೂ ಮೇಲುಗೈ ಸಾಧಿಸಿದೆ.

India vs England Test Head-to-Head England Leads 51-35 Can India Close the Gap on the 2025 Tour

ಹೇಗಿದೆ ಅಂಕಿ ಅಂಶ?

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಕ್ರಿಕೆಟ್‌ ಸಂಬಂಧಗಳು ಹಳೆಯದು. ಭಾರತ ಸ್ವಾತಂತ್ರ್ಯಗೊಳ್ಳುವ ಮೊದಲೇ ಈ ಎರಡೂ ತಂಡಗಳ ನಡುವೆ ಟೆಸ್ಟ್‌ ಸರಣಿ ನಡೆದಿತ್ತು. ಉಭಯ ದೇಶಗಳ ನಡುವಣ ಮೊದಲ ಟೆಸ್ಟ್‌ಗೆ 1932 ಸಾಕ್ಷಿಯಾಗಿತ್ತು. ಆಗಿನಿಂದಲೂ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಸಮಯ ಸಿಕ್ಕಾಗಲೆಲ್ಲಾ ಮಾಡುತ್ತಲೇ ಇದೆ. ಇನ್ನು ಇಂಗ್ಲೆಂಡ್ ಸಹ ಭಾರತಕ್ಕೆ ಹಲವು ಟೆಸ್ಟ್‌ ಸರಣಿಗಳನ್ನು ಆಡಲು ಬಂದಿದೆ. ಉಭಯ ತಂಡಗಳ ನಡುವೆ ಒಟ್ಟು 136 ಟೆಸ್ಟ್‌ ಪಂದ್ಯ ಈ ವರೆಗೆ ನಡೆದಿವೆ. ಈ ವೇಳೆ ಭಾರತ 35, ಇಂಗ್ಲೆಂಡ್‌ 51 ಟೆಸ್ಟ್‌ ಪಂದ್ಯ ಗೆದ್ದಿದೆ. 50 ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ.

ಇಂಗ್ಲೆಂಡ್‌ನ ಬೌನ್ಸಿ ಪಿಚ್‌ಗಳಲ್ಲಿ ಆತಿಥೇಯ ತಂಡದ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಈ ಮೈದಾನದಲ್ಲಿ ರನ್‌ ಕಲೆ ಹಾಕುವಲ್ಲಿ ಭಾರತೀಯ ಆಟಗಾರರು ವಿಫಲರಾಗಿದ್ದಾರೆ. ಹೀಗಾಗಿ ಯುವ ಭಾರತ ತಂಡದ ವಿರುದ್ಧ ಇಂಗ್ಲೆಂಡ್‌ ತಂಡ ಸಂಪೂರ್ಣ ಉತ್ಸಾಹದಲ್ಲಿ ಕಣಕ್ಕೆ ಇಳಿಯಲಿದೆ. ಇನ್ನು ತಂಡದಲ್ಲಿ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್‌ ಶರ್ಮಾ ಇರುವುದಿಲ್ಲ. ಈ ಒತ್ತಡದ ಸನ್ನಿವೇಶದಲ್ಲಿ ತಂಡ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದೇ ದೊಡ್ಡ ತಲೆ ನೋವಾಗಿದೆ.

India vs England Test Head-to-Head England Leads 51-35 Can India Close the Gap on the 2025 Tour

ಈ ಪ್ರವಾಸಕ್ಕಾಗಿ ಇನ್ನೇನು ಕೆಲವೇ ದಿನಗಳಲ್ಲಿ ಭಾರತ ತಂಡವನ್ನು ಪ್ರಕಟಿಸಲಾಗುತ್ತದೆ. ಈ ವೇಳೆ ಟೀಮ್ ಇಂಡಿಯಾದ ಚುಕ್ಕಾಣಿಯನ್ನು ಹಿಡಿಯಲು ಶುಭಮನ್‌ ಗಿಲ್‌, ಕೆಎಲ್ ರಾಹುಲ್‌ ಸಿದ್ಧರಾಗಿದ್ದು, ಈ ಇಬ್ಬರಲ್ಲಿ ಒಬ್ಬರಿಗೆ ನಾಯಕತ್ವದ ಜವಾಬ್ದಾರಿ ಸಿಗಲಿದೆ. ಯಾರಿಗೆ ಪಟ್ಟ ಕಟ್ಟುತ್ತದೆ ಎಂಬುದಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಲಭಿಸಲಿದೆ. ಈ ಪ್ರವಾಸದಲ್ಲಿ ಎಷ್ಟು ಜನ ಕನ್ನಡಿಗರಿಗೆ ಅವಕಾಶ ಸಿಗುತ್ತದೆ ಎಂಬ ಬಗ್ಗೆಯೂ ಪ್ರಶ್ನೆಗಳು ಹುಟ್ಟಿಕೊಂಡಿವೆ. ಯಾರಿಗೆ ಇಂಗ್ಲೆಂಡ್ ಪ್ರವಾಸದಲ್ಲಿ ಆಡುವ ಅವಕಾಶ ಲಭಿಸುತ್ತದೆ. ಯಾರಿಗೆ ನಿರಾಸೆ ಕಾದಿದೆ ಎಂಬುದು ಕುತೂಹಲ ಮೂಡಿಸಿದೆ.

Story first published: Thursday, May 15, 2025, 12:38 [IST]
Other articles published on May 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+