ಭಾರತ vs ಇಂಗ್ಲೆಂಡ್: ಎಡ್ಜ್‌ಬಾಸ್ಟನ್ ಟೆಸ್ಟ್, ಶತಕ ಸಿಡಿಸಿದ ಜಡೇಜಾ: 2ನೇ ದಿನ, Live ಸ್ಕೋರ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ದಿನದಾಟ ಆರಂಭವಾಗಿದೆ. ಮೊದಲ ದಿನದಾಟದಲ್ಲಿ ಭಾರತ ಆರಂಬಿಕ ಕುಸಿತದ ಬಳಿಕ ಅದ್ಭುತವಾದ ಚಚೇತರಿಕೆ ಕಂಡಿದ್ದು ಉತ್ತಮ ಮೊತ್ತಗಳಿಸುವತ್ತ ಸಾಗಿದೆ. ಎರಡನೇ ದಿನದಾಟದಲ್ಲಿ ಭಾರತ ಯಾವ ರೀತಿಯ ಪ್ರದರ್ಶನ ನೀಡಲಿದೆ? ಎಷ್ಟು ಮೊತ್ತವನ್ನು ಗಳಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಮೊದಲ ದಿನದಾಟದಲ್ಲಿ ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜಾ ಭಾರತಕ್ಕೆ ದ್ವಿಶತಕದ ಜೊತೆಯಾಟದ ಮೂಲಕ ಆಸರೆಯಾದರು. ರಿಷಭ್ ಪಂತ್ ಮೊದಲ ದಿನದಾಟದಲ್ಲಿ ಭರ್ಜರಿ ಶತಕ ಸಿಡಿಸಿದರೆ ರವೀಂದ್ರ ಜಡೇಜಾ ಅರ್ಧ ಶತಕಗಳಿಸಿದ್ದರು. ಇದೀಗ ರವೀಂದ್ರ ಜಡೇಜಾ ತಮ್ಮ ಶತಕವನ್ನು ಪೂರ್ಣಗೊಳಿಸಿದ್ದಾರೆ.
Live score ಹೀಗಿದೆ

ಮೊದಲ ದಿನದಾಟದ ಆರಂಭದಲ್ಲಿ ಹಿನ್ನಡೆ
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಆರಂಬಿಸಿದ ಭಾರತ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮುನ್ಸೂಚನೆ ನೀಡಿದರು. ಆರಂಭಿಕರಾದ ಶುಬ್ಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ ಉತ್ತಮ ಲಯದಲ್ಲಿದ್ದಂತೆ ಕಂಡು ಬಂದಿದ್ದರು. ಅದರಲ್ಲೂ ಶುಬ್ಮನ್ ಗಿಲ್ ಬ್ಯಾಟ್‌ನಿಂದ ಸರಾಗವಾಗಿ ರನ್ ಹರಿಸು ಬರುತ್ತಿದ್ದನ್ನು ಗಮನಿಸಿದ ಭಾರತೂಯ ಕ್ರಿಕೆಟ್ ಅಭಿಮಾನಿಗಲು ಉತ್ತಮ ಮೊತ್ತ ಗಳಿಸುವ ವಿಶ್ವಾಸ ಹೊಂದಿದ್ದರು. ಆದರೆ ಈ ಖುಷಿ ಹೆಚ್ಚು ಹೊತ್ತು ಇರಲಿಲ್ಲ. 17 ರನ್‌ಗಳಿಸಿದ ಗಿಲ್ ಆಂಡರ್ಸನ್‌ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು. ನಂತರ ಪೂಜಾರ ಕೂಡ 13 ರನ್‌ಗೆ ಆಟ ಮುಗಿಸಿದರು. ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್ ಕೂಡ ಹೆಚ್ಚು ರನ್‌ಗಳಿಸುವಲ್ಲಿ ಸಫಲವಾಗಲಿಲ್ಲ.

ಜೊತೆಯಾದ ಪಂತ್- ಜಡ್ಡು ಭರ್ಜರಿ ಆಟ
98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟದಲ್ಲಿದ್ದಾಗ ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜಾ ಜೊತೆಯಾದರು. ಈ ಜೋಡಿ ಅದ್ಭುತ ಪ್ರದರ್ಶನ ನಿಡಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಅದರಲ್ಲೂ ಸ್ಪೋಟಕವಾಗಿ ಬ್ಯಾಟಿಂಗ್ ಮಾಡಿದ ರಿಷಬ್ ಪಂತ್ ಅಬ್ಬರದ ಶತಕ ಬಾರಿಸಿದರೆ ರವೀಂದ್ರ ಜಡೇಜಾ ಕೂಡ ಶತಕ ಪೂರ್ಣಗೊಳಿಸಿದ್ದಾರೆ.

ಇಂಗ್ಲೆಂಡ್ ಆಡುವ ಬಳಗ
ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
ಬೆಂಚ್: ಬೆನ್ ಫೋಕ್ಸ್, ಕ್ರೇಗ್ ಓವರ್ಟನ್, ಜೇಮೀ ಓವರ್ಟನ್, ಹ್ಯಾರಿ ಬ್ರೂಕ್

ಭಾರತ ಆಡುವ ಬಳಗ
ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ (ನಾಯಕ)
ಬೆಂಚ್: ಉಮೇಶ್ ಯಾದವ್, ಶ್ರೀಕರ್ ಭರತ್, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications