ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಸರಣಿಯ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬೆನ್ ಸ್ಟೋಕ್ಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಬಗ್ಗೆ ಸ್ವತಃ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಪ್ರತಿಕ್ರಿಯಿಸಿದ್ದಾರೆ. ಅದು ಎರಡು ಪ್ರತಿಸ್ಪರ್ಧಿಗಳ ನಡುವಿನ ಮಾತುಗಳ ವರ್ಗಾವಣೆ. ಆದರೆ ಜನರು ಇದನ್ನು ಯಾವಾಗಲೂ ತಪ್ಪು ಎಂಬಂತೆಯೇ ಯೋಚಿಸುತ್ತಾರೆ ಎಂದಿದ್ದಾರೆ.
"ಕ್ರಿಕೆಟ್‌ನಲ್ಲಿ ಈಗ ಇಬ್ಬರು ಪ್ರತಿಸ್ಪರ್ಧಿಗಳು ಪರಸ್ಪರ ಮಾತುಗಳನ್ನಾಡಿದರೆ ಅದು ದೊಡ್ಡ ವಿಚಾರವಾಗುತ್ತದೆ. ಅದರಲ್ಲಿ ಅವರ ತಲೆಹೋಗುವಂತದ್ದು ಏನೂ ಇರುವುದಿಲ್ಲ. ಆದರೆ ಅದೆಲ್ಲಾ ತಪ್ಪು ಎಂದು ಅವರು ಭಾವಿಸುತ್ತಾರೆ" ಎಂದು ಸ್ಟೋಕ್ಸ್ ಪ್ರತಿಕ್ರಿಯಿಸಿದ್ದಾರೆ.
"ಆದರೆ ಜನರು ಬೇರೆ ರೀತಿಯಲ್ಲಿ ಯೋಚನೆಯನ್ನೇ ಮಾಡುವುದಿಲ್ಲ. ಆಟಗಾರರು ತಾವು ಮಾಡುವ ಕೆಲಸವನ್ನು ಹಾಗೂ ಅವರು ಪ್ರತಿನಿಧಿಸುವುದನ್ನು ರಕ್ಷಿಸಿಕೊಳ್ಳುತ್ತಿರುತ್ತಾರೆ. ಪರಸ್ಪರ ನಾಡು ಆಡವಾಗ ಪ್ರತಿಸ್ಪರ್ಧಿಗಳು. ನಾವು ಯಾರಿಗೂ ತಲೆಬಾಗಲು ಇಷ್ಟ ಪಡುವುದಿಲ್ಲ. ಅದು ಯಾರಾದರೂ ಆಗಿರಲಿ" ಎಂದಿದ್ದಾರೆ.
"ಇಬ್ಬರು ಪ್ರತಿಸ್ಪರ್ಧಿಗಳು ವಾಗ್ವಾದವನ್ನು ನಡೆಸುತ್ತಾ ತಾವು ತಲೆಬಾಗದಂತೆ ಮಾತುಗಳನ್ನಾಡುವುದು ನೋಡಲು ನಿಜಕ್ಕೂ ಇಷ್ಟವಾಗುತ್ತದೆ ಎಂದು ಬೆನ್ ಸ್ಟೋಕ್ಸ್ ವರ್ಚುವಲ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಈ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯನ್ನು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications