ಭಾರತ vs ಇಂಗ್ಲೆಂಡ್: ಉಮೇಶ್ ಯಾದವ್‌ಗೆ ಶೀಘ್ರ ಫಿಟ್ನೆಸ್ ಟೆಸ್ಟ್

ಅಹ್ಮದಾಬಾದ್: ಭಾರತದ ಅನುಭವಿ ವೇಗಿ ಉಮೇಶ್ ಯಾದವ್‌ಗೆ ಇನ್ನೆರಡು ದಿನಗಳಲ್ಲಿ ಫಿಟ್ನೆಸ್ ಟೆಸ್ಟ್ ನಡೆಯಲಿದೆ. ಆ ಬಳಿಕ ಯಾದವ್ ಭಾರತದ ಇನ್ನುಳಿದ ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ ಮತ್ತು ಇಶಾಂತ್ ಶರ್ಮಾ ಅವರ ಜೊತೆ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ತಂಡದ ಜೊತೆಗಿರುತ್ತಾರಾ ಅನ್ನೋದನ್ನು ನಿರ್ಧರಿಸಲಾಗುತ್ತದೆ.
ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಸದ್ಯ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ತೃತೀಯ ಟೆಸ್ಟ್ ಪಂದ್ಯ ಫೆಬ್ರವರಿ 24-28ರ ವರೆಗೆ ಅಹ್ಮದಾಬಾದ್‌ನ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಪ್ರಕಟಿತ ತಂಡದಲ್ಲಿ ಯಾದವ್ ಕೂಡ ಇದ್ದರು. ಆದರೆ ಫಿಟ್ನೆಸ್ ಟೆಸ್ಟ್ ಬಳಿಕ ಪ್ಲೇಯಿಂಗ್ XIನಲ್ಲಿ ಯಾದವ್ ಸ್ಥಾನ ನಿರ್ಧಾರವಾಗಲಿದೆ.
ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಟೆಸ್ಟ್ ಡೇ-ನೈಟ್ ಟೆಸ್ಟ್ ಆಗಿರಲಿದೆ. ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ ಆರ್ ಅಶ್ವಿನ್ ಮತ್ತು ಅಕ್ಸರ್ ಪಟೇಲ್ ಕೂಡ ಅಹ್ಮದಾಬಾದ್ ಟೆಸ್ಟ್‌ನಲ್ಲಿ ಆಡುವ ನಿರೀಕ್ಷೆ ಹೆಚ್ಚಿದೆ. ದ್ವಿತೀಯ ಟೆಸ್ಟ್‌ನಲ್ಲಿ ಪಟೇಲ್ ಮತ್ತು ಅಶ್ವಿನ್ ಉತ್ತಮ ಪ್ರದರ್ಶನ ನೀಡಿದ್ದರು.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯೀಗ 1-1ರಿಂದ ಸಮಬಲಗೊಂಡಿದೆ. ಈ ಟೆಸ್ಟ್ ಸರಣಿಯ ಫಲಿತಾಂಶ ಆಧರಿಸಿ ಮುಂಬರಲಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಸ್ಪರ್ಧಿಯನ್ನು ನಿರ್ಧರಿಸಲಾಗುತ್ತದೆ. ಫೈನಲ್‌ಗೆ ಆಯ್ಕೆಯಾಗುವ ತಂಡ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications