ಫಿಟ್ನೆಸ್ ಪರೀಕ್ಷೆಯಲ್ಲಿ ವರುಣ್ ಚಕ್ರವರ್ತಿ ಫೇಲ್, ನಟರಾಜನ್‌ಗೂ ಗಾಯ

ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಾಗಿ ಭಾರತ ತಂಡಕ್ಕೆ ಕರೆಯಲ್ಪಟ್ಟಿದ್ದ ವರುಣ್ ಚಕ್ರವರ್ತಿ ಫಿಟ್ನೆಸ್ ಪರೀಕ್ಷೆಯಲ್ಲಿ ಮತ್ತೆ ಫೇಲ್ ಆಗಿದ್ದಾರೆ. ಹೀಗಾಗಿ ಅವರನ್ನು ಮುಂಬರಲಿರುವ ಟಿ20ಐ ಸರಣಿಗಾಗಿ ಟೀಮ್ ಇಂಡಿಯಾದಿಂದ ಹೊರಗಿಡಲಾಗಿದೆ. ಮಾರ್ಚ್ 12ರಿಂದ ಐದು ಪಂದ್ಯಗಳ ಟಿ20ಐ ಸರಣಿ ಆರಂಭಗೊಳ್ಳಲಿದೆ.
ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಫಿಟ್ನೆಸ್ ಪರೀಕ್ಷೆ ಪಾಸ್ ಮಾಡುವಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಎಡವಿದ್ದಾರೆ. ಇದು ಒಂದೇ ಬಾರಿ ಪರೀಕ್ಷೆ ನಡೆದಿದ್ದಲ್ಲ. ಹಿಂದಿನ ಫಿಟ್ನೆಸ್ ಪರೀಕ್ಷೆಗಳಲ್ಲೂ ವರುಣ್ ಪಾಸ್ ಆಗಿರಲಿಲ್ಲ. ಹೀಗಾಗಿ ವರುಣ್ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಆಡುತ್ತಿಲ್ಲ. ವರುಣ್, ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಾರೆ.
ಯಾರ್ಕರ್ ಸ್ಪೆಷಾಲಿಸ್ಟ್ ಟಿ ನಟರಾಜನ್ ಕೂಡ ಟೀಮ್ ಇಂಡಿಯಾವನ್ನು ಸೇರಿಕೊಂಡಿಲ್ಲ. ಭುಜದ ಗಾಯಕ್ಕೀಡಾಗಿರುವ ನಟರಾಜನ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ನಟರಾಜನ್ ಕೂಡ ಆಡೋದು ಅನುಮಾನವಾಗಿದೆ.
ವರುಣ್ ಚಕ್ರವರ್ತಿ 8.15 ನಿಮಿಷದೊಳಗೆ 2 ಕಿ.ಮೀ. ಓಟದ ಮುಗಿಸಬೇಕಿತ್ತು. ಆದರೆ ಎರಡು ಬಾರಿಯ ಪರೀಕ್ಷೆಯಲ್ಲೂ ವರುಣ್ ಈ ಯೋ-ಯೋ ಟೆಸ್ಟ್‌ನಲ್ಲಿ ಪಾಸ್ ಆಗಿಲ್ಲ. ಅಕ್ಟೋಬರ್‌ನಿಂದಲೂ ವರುಣ್ ಒಂದು ಪಂದ್ಯವನ್ನೂ ಆಡಿಲ್ಲ. ಹೀಗಾಗಿ ವರುಣ್ ಅವರನ್ನು ಇಂಗ್ಲೆಂಡ್ ಸರಣಿಗೆ ಆರಿಸಿದ್ದೇಕೆ ಎಂದು ಚೇತನ್ ಶರ್ಮಾ ಮುಂದಾಳತ್ವದ ಆಯ್ಕೆ ಸಮಿತಿಯನ್ನು ಅಭಿಮಾನಿಗಳು ಈಗ ಪ್ರಶ್ನಿಸುವಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications