ಭಾರತ-ಇಂಗ್ಲೆಂಡ್ 5ನೇ ಟೆಸ್ಟ್: ಇಂಗ್ಲೆಂಡ್ ತಂಡ ಪ್ರಕಟ, ಕುಕ್ ಕೊನೇ ಆಟ!

ಲಂಡನ್, ಸೆಪ್ಟೆಂಬರ್ 4: ಇಂಗ್ಲೆಂಡ್ ನ ಕೆನ್ನಿಂಗ್ಟನ್ ಓವಲ್ ನಲ್ಲಿನ ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್ ಗಾಗಿ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು, ಜೇಮ್ಸ್ ವಿನ್ಸ ಅವರನ್ನು ಕೈಬಿಡಲಾಗಿದೆ. ಅಲಾಸ್ಟೇರ್ ಕುಕ್ ಅವರ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಗಿಯೂ ಇದು ಇತಿಹಾಸದ ಪುಟ ಸೇರಲಿದೆ.
ವಿನ್ಸ್ ಅವರು 4ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ತಂಡಕ್ಕೆ ಮರಳಿದ್ದರು. ಗಾಯಾಳಾಗಿದ್ದ ಜಾನಿ ಬೇರ್ಸ್ಟೋವ್ ಅವರ ಸ್ಥಾನ ತುಂಬುವುದಕ್ಕಾಗಿ ಇಂಗ್ಲೆಂಡ್ ವಿನ್ಸ್ ಅವರನ್ನು ತಂಡದ ಸಾಲಿನಲ್ಲಿ ಸೇರಿಸಿಕೊಂಡಿತ್ತು. ಆದರೆ ಬೇರ್ಸ್ಟೋವ್ ಚೇತರಿಸಿಕೊಂಡಿದ್ದರಿಂದ ಆಡುವ 11 ಆಟಗಾರರಲ್ಲಿ ವಿನ್ಸ್ ಗೆ ಅವಕಾಶ ಸಿಕ್ಕಿರಲಿಲ್ಲ.
ಸೌತಾಂಪ್ಟನ್ ನಲ್ಲಿ ನಡೆದಿದ್ದ 4ನೇ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಳ್ಳುವ ಮೂಲಕ ಸರಣಿಯನ್ನು 3-1ರಿಂದ ವಶಪಡಿಸಿಕೊಂಡಿತ್ತು. 4ನೇ ಟೆಸ್ಟ್ ನಲ್ಲಿ ಪಾಲ್ಗೊಂಡಿದ್ದ ಇಂಗ್ಲೆಂಡ್ ನ ಅದೇ ತಂಡ 5ನೇ ಟೆಸ್ಟ್ ನಲ್ಲೂ ಪಾಲ್ಗೊಳ್ಳಲಿದೆ. ಸರಣಿ ಫಲಿತಾಂಶ ಈಗಾಗಲೇ ಬಂದಿರುವುದರಿಂದ ಭಾರತ-ಇಂಗ್ಲೆಂಡ್ ಎರಡಕ್ಕೂ ಇದು ಔಪಚಾರಿಕ ಪಂದ್ಯ. ಸೆಪ್ಟೆಂಬರ್ 7ರ ಶುಕ್ರವಾರದಿಂದ ಈ 5ನೇ ಟೆಸ್ಟ್ ಆರಂಭವಾಗಲಿದೆ.
ಇಂಗ್ಲೆಂಡ್ ತಂಡ
ಜೋ ರೂಟ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಬೇರ್ಸ್ಟೋವ್, ಸ್ಟುವರ್ಟ್ ಬ್ರಾಡ್, ಜೋಸ್ ಬಟ್ಲರ್, ಅಲಾಸ್ಟೇರ್ ಕುಕ್, ಸ್ಯಾಮ್ ಕ್ಯುರ್ರಾನ್, ಕೀಟನ್ ಜೆನ್ನಿಂಗ್ಸ್, ಆಲ್ಲಿ ಪೋಪ್, ಬೆನ್ ಸ್ಟೋಕ್ಸ್, ಆದಿಲ್ ರಶೀದ್, ಕ್ರಿಸ್ ವೋಕ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications