ಕುರ್ಚಿಯಿಂದ ಜಿಗಿದು ರಿಷಭ್ ಪಂತ್ ಶತಕ ಸಂಭ್ರಮಿಸಿದ ಕೊಹ್ಲಿ: ವಿಡಿಯೋ

ಅಹ್ಮದಾಬಾದ್: ಅಹ್ಮದಾಬಾದ್‌ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪಂತ್ ಶತಕದ ಕೊಡುಗೆಯೊಂದಿಗೆ ರನ್ ಕುಸಿತ ಕಂಡಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ರನ್ ಚೇತರಿಕೆ ಕಂಡಿದೆ. ಆರಂಭಿಕ ಇನ್ನಿಂಗ್ಸ್‌ನಲ್ಲಿ 160 ರನ್ ಮುನ್ನಡೆಯೂ ಸಾಧಿಸಿದೆ.
ನಾಲ್ಕನೇ ಟೆಸ್ಟ್‌ನ ಭಾರತದ ಮೊದಲನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 0ಗೆ ವಿಕೆಟ್ ಒಪ್ಪಿಸಿದ್ದರು. ತಂಡಕ್ಕೆ ರನ್ ಕೊಡುಗೆ ನೀಡುವ ಆಲೋಚನೆಯಲ್ಲಿ ಕೊಹ್ಲಿ ಇದ್ದರಾದರೂ ಅದು ಸಾಧ್ಯವಾಗಲಿಲ್ಲ. ಆದರೆ ತಂಡಕ್ಕೆ ಬಲ ತುಂಬಿದ ರಿಷಭ್ ಪಂತ್ ಬ್ಯಾಟಿಂಗ್ ಅನ್ನು ಕೊಹ್ಲಿ ಸಂಭ್ರಮಿಸಿದ್ದಾರೆ.

ಒಟ್ಟು 13 ಫೋರ್ಸ್
ಭಾರತದ ಆರಂಭಿಕ ಇನ್ನಿಂಗ್ಸ್‌ನಲ್ಲಿ 118 ಎಸೆತಗಳಲ್ಲಿ ಪಂತ್ 101 ರನ್ ಕೊಡುಗೆ ನೀಡಿದ್ದರು. ಈ ವೇಳೆ ಪಂತ್ ಬ್ಯಾಟ್‌ನಿಂದ 13 ಫೋರ್ಸ್, 2 ಸಿಕ್ಸರ್ ಕೂಡ ಸಿಡಿದಿತ್ತು. ಶುಕ್ರವಾರ ದಿನದಾಟದ ಅಂತ್ಯಕ್ಕೆ ಮೊದಲನೇ ಇನ್ನಿಂಗ್ಸ್ ಆಡುತ್ತಿದ್ದ ಭಾರತ 94 ಓವರ್‌ಗೆ 7 ವಿಕೆಟ್ ಕಳೆದು 294 ರನ್ ಗಳಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 205 ರನ್ ಬಾರಿಸಿತ್ತು. ಮರುದಿನ ಭಾರತದ ಮೊದಲ ಇನ್ನಿಂಗ್ಸ್ ಮುಗಿಯುವಾಗ ಭಾರತದ ಖಾತೆಯಲ್ಲಿ 365 ರನ್ ಇತ್ತು.

ಪಂತ್ ಮತ್ತೊಂದು ಮೈಲಿಗಲ್ಲು
ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. 2021ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಪಂತ್ 500+ ರನ್ ಪೂರೈಸಿದ್ದಾರೆ. ಪಂತ್ 4ನೇ ಟೆಸ್ಟ್‌ನಲ್ಲಿ ಬಾರಿಸಿದ್ದು 3ನೇ ಶತಕ ಮತ್ತು ಇಂಗ್ಲೆಂಡ್ ವಿರುದ್ಧ ಬಾರಿಸುತ್ತಿರುವ 2ನೇ ಶತಕ. ಈವರೆಗೆ ಒಟ್ಟು 11 ಟೆಸ್ಟ್ ಇನ್ನಿಂಗ್ಸ್‌ಗಳನ್ನಾಡಿರುವ ಪಂತ್ ಕ್ರಮವಾಗಿ 29, 36, 97, 23, 89, 91, 11, 58, 8, 1, 101 ರನ್ ಬಾರಿಸಿದ್ದಾರೆ.
ಕೊಹ್ಲಿ ಸಂಭ್ರಮಾಚರಣೆ
ಶುಕ್ರವಾರದ ಪಂದ್ಯದಲ್ಲಿ ತನ್ನ ವೃತ್ತಿ ಬದುಕಿನ 3ನೇ ಟೆಸ್ಟ್ ಶತಕ ಬಾರಿಸಿದ ರಿಷಭ್ ಪಂತ್ ಅವರನ್ನು ಕೊಹ್ಲಿ ಕೂತಲ್ಲಿಂದ ಎದ್ದು ಸಂಭ್ರಮಾಚರಿಸಿದ್ದಾರೆ. ಅದರಲ್ಲೂ ಪಂತ್ ಸಿಕ್ಸ್ ಮೂಲಕ ಶತಕ ಪೂರೈಸಿದ್ದು ನೋಡುತ್ತಲೇ ಕೊಹ್ಲಿ ಮುಖದಲ್ಲಿ ನಾಯಕನ ಸಂಭ್ರಮ ಮಿನುಗಿತ್ತು. ಕೂತಲ್ಲಿಂದ ಎದ್ದು ಕೊಹ್ಲಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications