ಮೊಯೀನ್ ಅಲಿ ಮಾರಕ ಸ್ಪಿನ್‌ಗೆ ದಂಗಾದ ವಿರಾಟ್ ಕೊಹ್ಲಿ: ವಿಡಿಯೋ

ಚೆನ್ನೈ: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮತ್ತೆ ಎಡವಿದ್ದಾರೆ. ಚೆನ್ನೈನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ನ ಆರಂಭಿಕ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಡಕ್ ಔಟ್ ಆಗಿದ್ದಾರೆ. ಇಂಗ್ಲೆಂಡ್ ಸ್ಪಿನ್ನರ್ ಮೊಯೀನ್ ಅಲಿಗೆ ಕೊಹ್ಲಿ ವಿಕೆಟ್ ಒಪ್ಪಿಸಿದ್ದಾರೆ.
ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ನಲ್ಲಿ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ವಿರಾಟ್ ಕೊಹ್ಲಿ, 21.2ನೇ ಓವರ್‌ನಲ್ಲಿ ಮೊಯೀನ್ ಅಲಿ ಸ್ಪಿನ್‌ಗೆ ಬೌಲ್ಡ್ ಆಗಿ 0 ರನ್‌ಗೆ ಪೆವಿಲಿಯನ್‌ಗೆ ನಡೆದರು.
ಚೆನ್ನೈನಲ್ಲೇ ನಡೆದಿದ್ದ ಮೊದಲನೇ ಟೆಸ್ಟ್‌ನಲ್ಲಿ ಕೊಹ್ಲಿ ಕ್ರಮವಾಗಿ 11, 72 ರನ್ ಕೊಡುಗೆ ನೀಡಿದ್ದರು. ದ್ವಿತೀಯ ಪಂದ್ಯದಲ್ಲಿ ಕೊಹ್ಲಿಗೆ ಅಲಿ ಸ್ಪಿನ್ ಅನ್ನು ಊಹಿಸಲೇ ಸಾಧ್ಯವಾಗಿರಲಿಲ್ಲ. ಬೌಲ್ಡ್ ಆದಾಗ ಕೊಹ್ಲಿ ಇನ್ನೂ ಕೊಂಚ ಕಾಲ ನಿಂತು ರಿವ್ಯೂ ಮೂಲಕ ಔಟ್ ಆಗಿದ್ದನ್ನು ಖಾತರಿಪಡಿಸಿ ಆ ಬಳಿಕ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ದು ಕಾಣಸಿಕ್ಕಿತ್ತು.
ವಿರಾಟ್ ಕೊಹ್ಲಿ 90 ಟೆಸ್ಟ್ ಪಂದ್ಯಗಳಲ್ಲಿ 52.86ರ ಸರಾಸರಿಯಂತೆ 7401 ರನ್ ಬಾರಿಸಿದ್ದಾರೆ. ಇದರಲ್ಲಿ 254 ವೈಯಕ್ತಿಕ ಅತ್ಯಧಿಕ ರನ್. 251 ಏಕದಿನ ಪಂದ್ಯಗಳಲ್ಲಿ 12040 ರನ್, 84 ಟಿ20ಐ ಪಂದ್ಯಗಳಲ್ಲಿ 2928 ರನ್ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications