ಭಾರತ vs ಇಂಗ್ಲೆಂಡ್: ಕೆಟ್ಟ ದಾಖಲೆ ಪಟ್ಟಿಯಲ್ಲಿ ಕೊಹ್ಲಿಯೇ ಮುಂದು!

ಅಹ್ಮದಾಬಾದ್: ವಿರಾಟ್ ಕೊಹ್ಲಿ ಫಿಟ್ನೆಸ್ ವಿಚಾರದಲ್ಲಿ ವಿಶ್ವದ ಸಕ್ರಿಯ ಕ್ರಿಕೆಟರ್‌ಗಳಲ್ಲೇ ಮುಂಚೂಣಿಯಲ್ಲಿದ್ದಾರೆ. ಆದರೂ ಟೀಮ್ ಇಂಡಿಯಾದ ನಾಯಕ ಕೊಹ್ಲಿ ಈಗಾಗಲೇ ಕೆಟ್ಟ ದಾಖಲೆ ನಿರ್ಮಿಸಿದ್ದಾರೆ. ಮಾರ್ಚ್ 18ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಭಾರತ-ಇಂಗ್ಲೆಂಡ್ ನಾಲ್ಕನೇ ಟಿ20ಐ ಪಂದ್ಯದಲ್ಲಿ ಕೊಹ್ಲಿ ಮತ್ತೆ ಎಡವಿದರೆ ಅವರ ಹೆಸರಿನಲ್ಲಿ ಇನ್ನೊಂದು ಬೇಡದ ದಾಖಲೆಯೊಂದು ನಿರ್ಮಾಣವಾಗಲಿದೆ.
ಭಾರತ-ಇಂಗ್ಲೆಂಡ್ ಮೂರನೇ ಟಿ20ಐ ಪಂದ್ಯದ ವೇಳೆ ಕೊಹ್ಲಿ ತನ್ನ ಬಾಡಿ ಲ್ಯಾಂಗ್ವೇಜ್ ಬಗ್ಗೆ ಅಸಮಾಧಾನ ತೋರಿಕೊಂಡಿದ್ದರು. ಕಾರಣ ಫೀಲ್ಡಿಂಗ್ ವೇಳೆ ಅದರಲ್ಲೂ ಕ್ಯಾಚ್ ವೇಳೆ ಕೊಹ್ಲಿ ಎಡವುತ್ತಿರುವುದು ಅವರಿಗೇನೆ ಬೇಸರ ಉಂಟು ಮಾಡುತ್ತಿದೆ.

ಕ್ಯಾಚ್ ಕೈಚೆಲ್ಲಿದ ಕೊಹ್ಲಿ
ಇಂಗ್ಲೆಂಡ್ ವಿರುದ್ಧದ ತೃತೀಯ ಟಿ20 ಪಂದ್ಯದಲ್ಲಿ ಕೊಹ್ಲಿ 77 ರನ್‌ನೊಂದಿಗೆ ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡಿದ್ದರಾದರೂ ಕ್ಯಾಚ್ ವಿಚಾರದಲ್ಲಿ ಎಡವಿದ್ದರು. ಭಾರತದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಓವರ್‌ನಲ್ಲಿ ಕೊಹ್ಲಿ, ಜೋಸ್ ಬಟ್ಲರ್ ಕ್ಯಾಚ್ ಒಂದನ್ನು ಬಿಟ್ಟಿದ್ದರು. ಆಗ ಬಟ್ಲರ್ 76 ರನ್ ಬಾರಿಸಿ ಆಡುತ್ತಿದ್ದರು.

ದುಬಾರಿಯಾದ ಬಟ್ಲರ್
ಕೊಹ್ಲಿ ಅವರು ಕ್ಯಾಚ್ ಕೈಬಿಟ್ಟು ಜೀವದಾನ ಪಡೆದ ಬಟ್ಲರ್ ಕ್ರೀಸ್‌ನಲ್ಲಿ ಇನ್ನೊಂದಿಷ್ಟು ಹೊತ್ತು ನಿಂತು ಅಜೇಯ 83 ರನ್ ಅನ್ನು ತಂಡದ ಖಾತೆಗೆ ಸೇರಿದಿದ್ದರು. ಪರಿಣಾಮ ಇಂಗ್ಲೆಂಡ್ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿತಲ್ಲದೆ 5 ಪಂದ್ಯಗಳ ಟಿ20 ಸರಣಿಯಲ್ಲಿ 2-1ರ ಮುನ್ನಡೆಯೂ ಸಾಧಿಸಿತ್ತು.

ಕ್ಯಾಚ್‌ನಲ್ಲಿ ಕೊಹ್ಲಿ ಕೆಟ್ ದಾಖಲೆ
(ಟಿ20ಐ ಕ್ಯಾಚ್ ಕೈಬಿಟ್ಟ ಕೆಟ್ಟ ದಾಖಲೆ ವಿಚಾರದಲ್ಲಿ ಕೊಹ್ಲಿ ಈಗಾಗಲೇ ಮುಂಚೂಣಿಯಲ್ಲಿದ್ದಾರೆ. ಕೆಳಗೆ ಮಾಹಿತಿಯಿದೆ ನೋಡಿ)
* ವಿರಾಟ್ ಕೊಹ್ಲಿ, ಭಾರತ, ಪಡೆದ ಕ್ಯಾಚ್‌ಗಳು 9, ಕೈಚೆಲ್ಲಿದ ಕ್ಯಾಚ್‌ಗಳು 6.
* ಕ್ರಿಸ್ ಜೋರ್ಡನ್, ಇಂಗ್ಲೆಂಡ್, ಪಡೆದ ಕ್ಯಾಚ್‌ಗಳು 15, ಕೈಬಿಟ್ಟ ಕ್ಯಾಚ್‌ಗಳು 5.
* ಸ್ಟೀವ್ ಸ್ಮಿತ್, ಆಸ್ಟ್ರೇಲಿಯಾ, ಪಡೆದ ಕ್ಯಾಚ್‌ಗಳು 11, ಕೈಚೆಲ್ಲಿದ ಕ್ಯಾಚ್‌ಗಳು 4.
* ಯುಜುವೇಂದ್ರ ಚಾಹಲ್, ಭಾರತ, ಪಡೆದ ಕ್ಯಾಚ್‌ಗಳು 2, ಮಿಸ್ ಮಾಡಿದ ಕ್ಯಾಚ್‌ಗಳು 4.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications