ವಾಷಿಂಗ್ಟನ್ ಸುಂದರ್ ಶತಕದಾಸೆ ಹಾಳುಗೆಡವಿದ ಸಿರಾಜ್, ಇಶಾಂತ್!

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 160 ರನ್ ಮುನ್ನಡೆ ಸಾಧಿಸಿದೆ. ಪಂದ್ಯದಲ್ಲಿ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಆಕರ್ಷಕ ಶತಕ ಬಾರಿಸಿ ಮಿಂಚಿದ್ದರೆ, ಮತ್ತೊಬ್ಬ ಯುವ ಬ್ಯಾಟ್ಸ್‌ಮನ್ ವಾಷಿಂಗ್ಟನ್ ಸುಂದರ್ ಶತಕದ ಅವಕಾಶವನ್ನು ಕಳೆದುಕೊಂಡಿದ್ದಾರೆ.
8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಷಾಷಿಂಗ್ಟನ್ ಸುಂದರ್, 174 ಎಸೆತಗಳಲ್ಲಿ 96 ರನ್ ಬಾರಿಸಿದ್ದರು. 10 ಫೋರ್ಸ್, 1 ಸಿಕ್ಸರ್ ಇದರಲ್ಲಿ ಸೇರಿತ್ತು. ಆದರೆ 96 ರನ್ ಅನ್ನು 100ಕ್ಕೇರಿಸಲು ಸುಂದರ್ ಅವರಿಂದಾಗಲಿಲ್ಲ. ಅವರಿಗೆ ಆ ಅವಕಾಶ ಸಿಗಲಿಲ್ಲ.

ಬೆನ್ ಸ್ಟೋಕ್ಸ್ ಅರ್ಧ ಶತಕ
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ಜಾನಿ ಬೇರ್ಸ್ಟೋವ್ 28, ಬೆನ್ ಸ್ಟೋಕ್ಸ್ 55, ಆಲಿ ಪೋಪ್ 29, ಡೇನಿಯಲ್ ಲಾರೆನ್ಸ್ 46 ರನ್ ಬಾರಿಸಿದ್ದರು. ಇಂಗ್ಲೆಂಡ್ 75.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 205 ರನ್ ಬಾರಿಸಿತ್ತು. ಭಾರತ ಪರ ಮೊಹಮ್ಮದ್ ಸಿರಾಜ್ 2, ಅಕ್ಷರ್ ಪಟೇಲ್ 4, ಆರ್ ಅಶ್ವಿನ್ 3, ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದಿದ್ದರು.

ರಿಷಭ್ ಪಂತ್ ಶತಕದಾಟ
ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 49, ಅಜಿಂಕ್ಯ ರಹಾನೆ 27, ರಿಷಭ್ ಪಂತ್ 101, ಚೇತೇಶ್ವರ ಪೂಜಾರ 17, ವಾಷಿಂಗ್ಟನ್ ಸುಂದರ್ 96, ಅಕ್ಷರ್ ಪಟೇಲ್ 43, ಆರ್ ಅಶ್ವಿನ್ 13 ರನ್ ಕೊಡುಗೆಯಿತ್ತರು. ಭಾರತ 114.4 ಓವರ್‌ಗೆ 10 ವಿಕೆಟ್ ಕಳೆದು 365 ರನ್ ಬಾರಿಸಿ 160 ರನ್ ಮುನ್ನಡೆ ಗಳಿಸಿತ್ತು.

ಸುಂದರ್ ಶತಕದಾಸೆ ಮಣ್ಣುಪಾಲು
96 ರನ್ ಬಾರಿಸಿ ಷಾಷಿಂಗ್ಟನ್ ಸುಂದರ್ ಶತಕದಂಚಿಗೆ ಹೋಗಿದ್ದರಾದರೂ ಅವರಾಸೆ ಈಡೇರಲಿಲ್ಲ. ಕಾರಣ ಅಕ್ಷರ್ ಪಟೇಲ್ 43 ರನ್ ಬಾರಿಸಿ ಔಟಾದ ಬಳಿಕ ಬಂದ ಇಶಾಂತ್ ಶರ್ಮಾ 0 ರನ್‌ಗೆ ಬೆನ್ ಸ್ಟೋಕ್ಸ್‌ಗೆ ಎಲ್‌ಬಿಡಬ್ಲ್ಯೂ ಆದರು. ಮತ್ತೆ ಬಂದ ಮೊಹಮ್ಮದ್ ಸಿರಾಜ್ ಕೂಡ 0 ರನ್‌ಗೆ ಸ್ಟೋಕ್ಸ್‌ಗೆ ಬೌಲ್ಡ್ ಆದರು. ಹೀಗಾಗಿ ಸುಂದರ್‌ಗೆ ಶತಕ ಪೂರೈಸುವ ಅವಕಾಶವೇ ಸಿಗಲಿಲ್ಲ. ಅಂದ್ಹಾಗೆ ವಾಷಿಂಗ್ಟನ್ ಸುಂದರ್ ಮತ್ತು ಮೊಹಮ್ಮದ್ ಸಿರಾಜ್ ಇಬ್ಬರೂ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications