Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಿಂಕ್ ಬಾಲ್ ಪಡೆಯಲು ಹಾತೊರೆಯುತ್ತಿದ್ದೇವೆ ಎಂದ ಇಂಗ್ಲೆಂಡ್ ವೇಗಿ

India vs England: we are dying to to get swinging pink ball says england pacer Mark Wood

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಅಹ್ಮದಾಬಾದ್‌ನಲ್ಲಿ ನಡೆಯಲಿದೆ. ಆದರೆ ಇದು ಅಹರ್ನಿಶಿಯಾಗಿ ನಡೆಯಲಿದ್ದು ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿರಲಿದೆ. ಇಂಗ್ಲೆಂಡ್ ವೇಗಿಗಳು ಇದರ ಲಾಭವನ್ನು ಪಡೆಯಬಹುದು ಎಂಬ ಲೆಕ್ಕಾಚಾರವನ್ನು ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಪಿಂಕ್ ಟೆಸ್ಟ್ ಪಂದ್ಯದ ಬಗ್ಗೆ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್‌ನ ವೇಗಿ ಮಾರ್ಕ್‌ವುಡ್ ತಮ್ಮ ಜೊತೆಗೆ ವೇಗದ ಬೌಲಿಂಗ್ ವಿಭಾಗದ ಜೊತೆಗಾರರಾದ ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್ ಜೋಫ್ರಾ ಆರ್ಚರ್ ಹಾಗೂ ಕ್ರಿಸ್ ವೋಕ್ಸ್ ಪಿಂಕ್ ಬಾಲ್ ಪಂದ್ಯವನ್ನಾಡಲು ಹಾತೊರೆಯುತ್ತಿದ್ದಾರೆ ಎಂದು ಎಂದು ಹೇಳಿದ್ದಾರೆ. ಫೆಬ್ರವರಿ 24ರಿಂದ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ.

ಮಾರ್ಕ್ ವುಡ್ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು. ಈಗ ಅಂತಿಮ ಎರಡು ಪಂದ್ಯಗಳಿಗಾಗಿ ತಂಡವನ್ನು ಸೇರಿಕೊಂಡಿದ್ದಾರೆ. ನೆಟ್ ಅಭ್ಯಾಸದ ಸಂದರ್ಭದಲ್ಲಿ ಎಸ್‌ಜಿ ಪಿಂಕ್ ಬಾಲ್‌ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುವಲ್ಲಿ ಮಾರ್ಕ್‌ವುಡ್ ಯಶಸ್ವಿಯಾಗಿದ್ದಾರೆ.

"ಈ ಚೆಂಡು ಅತ್ಯಂತ ಶೀಘ್ರವಾಗಿ ತಿರುವನ್ನು ಪಡೆದುಕೊಳ್ಳುತ್ತದೆ. ಹೀಗಾಗಿ ಕಳೆದೆರಡು ತಿಂಗಳಿನಿಂದ ಈ ಚೆಂಡನ್ನು ಕೈಗಿತ್ತುಕೊಳ್ಳಲು ಹಾತೊರೆಯುತ್ತಿದೆ. ನಾನೊಬ್ಬರೆ ಅದನ್ನು ಪಡೆಯಲು ಉತ್ಸುಕನಾಗಿಲ್ಲ" ಎಂದು ಮಾರ್ಕ್‌ವುಡ್ ಕುತೂಹಲದಿಂದ ಹೇಳಿಕೊಂಡಿದ್ದಾರೆ.

ಭಾರತ ಇಂಗ್ಲೆಂಡ್ ನಡುವಿನ ಮೊದಲ ಎರಡು ಟೆಸ್ಟ್ ಪಂದ್ಯಗಳು ಚೆನ್ನೈನಲ್ಲಿ ನಡೆದಿತ್ತು. ಇದರಲ್ಲಿ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದ್ದರೆ ಎರಡನೇ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು. ಹೀಗಾಗಿ ಸದ್ಯ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ 1-1 ಅಂತರದಿಂದ ಸಮಬಲದಲ್ಲಿದೆ.

Story first published: Saturday, February 20, 2021, 9:25 [IST]
Other articles published on Feb 20, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+