ಭಾರತ vs ಇಂಗ್ಲೆಂಡ್: ಗಾಯಾಳು ಶುಬ್ಮನ್ ಗಿಲ್‌ಗೆ ಬದಲಿ ಆಟಗಾರನೇಕಿಲ್ಲ?

ಲಂಡನ್: ಕಾಲಿನ ಗಾಯಕ್ಕೀಡಾಗಿರುವ ಯುವ ಆರಂಭಿಕ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಬದಲಿಗೆ ಬೇರೆ ಆಟಗಾರನನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇಂಗ್ಲೆಂಡ್‌ಗೆ ಕಳುಹಿಸಿಕೊಟ್ಟಿಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿದ್ದ ಗಿಲ್ ಗಾಯಕ್ಕೀಡಾಗಿ ಭಾರತ-ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರ ಬಿದ್ದಿದ್ದಾರೆ. ಆದರೂ ಆಯ್ಕೆ ಸಮಿತಿ ಗಿಲ್ ಬದಲಿಗೆ ಯಾವುದೇ ಆಟಗಾರರನ್ನು ಇಂಗ್ಲೆಂಡ್‌ಗೆ ಕಳುಹಿಸದಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ.
ತಂಡದಿಂದ ಹೊರ ಬಿದ್ದಿರುವ ಶುಬ್ಮನ್ ಗಿಲ್‌ಗೆ ಬದಲಾಗಿ ಶ್ರೀಲಂಕಾ ಪ್ರವಾಸದಲ್ಲಿದ್ದ ದೇವದತ್ ಪಡಿಕ್ಕಲ್ ಮತ್ತು ಪೃಥ್ವಿ ಶಾ ಅವರನ್ನು ಇಂಗ್ಲೆಂಡ್‌ಗೆ ಕಳುಹಿಸಿಕೊಡುವಂತೆ ಭಾರತ ತಂಡ ನಿರ್ವಹಣಾ ಸದಸ್ಯರು ಬಿಸಿಸಿಐ ಆಯ್ಕೆ ಸಮಿತಿಯನ್ನು ಕೋರಿಕೊಂಡಿದ್ದರು. ಆದರೆ ಆಯ್ಕೆ ಸಮಿತಿ ಇದಕ್ಕೆ ಒಪ್ಪಿಲ್ಲ.

4 ಆರಂಭಿಕ ಬ್ಯಾಟ್ಸ್‌ಮನ್‌ಗಳು
ಇಂಗ್ಲೆಂಡ್‌ನಲ್ಲಿರುವ ಭಾರತ ತಂಡದಲ್ಲೀಗ ರೋಹಿತ್ ಶರ್ಮಾ, ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಮತ್ತು ಅಭಿಮನ್ಯು ಈಶ್ವರನ್ ಹೀಗೆ ನಾಲ್ವರು ಆರಂಭಿಕ ಬ್ಯಾಟ್ಸ್‌ಮನ್‌ಗಳಿದ್ದಾರೆ. ಇದೇ ಕಾರಣಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಗಿಲ್‌ಗೆ ಬದಲಿ ಆಟಗಾರರನ್ನು ಇಂಗ್ಲೆಂಡ್‌ಗೆ ಕಳುಹಿಸಿಕೊಟ್ಟಿಲ್ಲ.

ರೋಹಿತ್‌ಗೆ ಮಯಾಂಕ್ ಜೋಡಿ?
ಮಯಾಂಕ್ ಅಗರ್ವಾಲ್ ಮತ್ತು ಕೆಲ್ ರಾಹುಲ್ ಸದ್ಯ ಫಾರ್ಮ್‌ನಲ್ಲಿಲ್ಲ. ಹೀಗಾಗಿಯೇ ನಿರ್ವಹಣಾ ಸದಸ್ಯರು ಗಿಲ್‌ಗೆ ಬದಲಿ ಆಟಗಾರನಿಗಾಗಿ ಕೋರಿಕೊಂಡಿತ್ತು. ಆದರೆ ಆಯ್ಕೆ ಸಮಿತಿ ಇದಕ್ಕೆ ಸ್ಪಂದಿಸಿಲ್ಲವಾದ್ದರಿಂದ ಟೆಸ್ಟ್ ಸರಣಿಯಲ್ಲಿ ರೋಹಿತ್ ಜೊತೆಗೆ ಮಯಾಂಕ್ ಆಡುವ ಸಾಧ್ಯತೆಯಿದೆ.

ಏಕಕಾಲಕ್ಕೆ ಎರಡೆರಡು ಪ್ರವಾಸ
ಭಾರತ ಎರಡು ತಂಡಗಳಾಗಿ ಬೇರೆ ಬೇರೆ ಪ್ರವಾಸದಲ್ಲಿದೆ. ಒಂದು ತಂಡ ಶ್ರೀಲಂಕಾದಲ್ಲಿದ್ದು, ಭಾರತ-ಶ್ರೀಲಂಕಾ ಮಧ್ಯೆ ಸೀಮಿತ ಓವರ್‌ಗಳ ಸರಣಿ ಜುಲೈ 13ರಿಂದ ಆರಂಭಗೊಳ್ಳಲಿದೆ. ಈ ತಂಡಕ್ಕೆ ಶಿಖರ್ ಧವನ್ ನಾಯಕರಾಗಿದ್ದಾರೆ. ಮತ್ತೊಂದು ತಂಡ ಇಂಗ್ಲೆಂಡ್‌ನಲ್ಲಿದ್ದು ಆತಿಥೇಯರ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಆಗಸ್ಟ್ 4ರಿಂದ ಈ ಟೆಸ್ಟ್ ಸರಣಿ ಶುರುವಾಗಲಿದೆ. ಇಲ್ಲಿರುವ ತಂಡಕ್ಕೆ ಎಂದಿನ ನಾಯಕ ವಿರಾಟ್ ಕೊಹ್ಲಿ ನಾಯಕರಾಗಿರಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications