ನಮ್ಮ ವಿಧಾನದಲ್ಲಿ ಬದಲಾವಣೆಯಾಗಲ್ಲ: 2ನೇ ಪಂದ್ಯದ ಹಿನ್ನಲೆಯಲ್ಲಿ ಶ್ರೇಯಸ್ ಐಯ್ಯರ್ ಹೇಳಿದ್ದೇನು?

ಮೊದಲ ಪಂದ್ಯದಲ್ಲಿ ಬೃಹತ್ ಅಂತರದ ಸೋಲನ್ನು ಅನುಭವಿಸಿದ ನಂತರ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಐಯ್ಯರ್ ಪ್ರತಿಕ್ರಿಯಿಸಿದ್ದಾರೆ. ಮೊದಲ ಪಂದ್ಯದದ ಸೋಲಿನ ಹಿನ್ನೆಲೆಯಲ್ಲಿ ನಾವು ನಮ್ಮ ಬ್ಯಾಟಿಂಗ್ ವಿಧಾನದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದಿಲ್ಲ. ತಂಡದಲ್ಲಿ ಪವರ್‌ಹಿಟ್ಟರ್ಸ್ ಹಾಗೂ ಖ್ಯಾತನಾಂ ಆಟಗಾರರು ಇರುವುದೇ ಇದಕ್ಕೆ ಕಾರಣ ಎಂದು ಐಯ್ಯರ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 124 ರನ್‌ಗಳಿಗೆ ಕುಸಿಯಿತು. ಭಾರತ ತಂಡ ನೀಡಿದ ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 15.3 ಓವರ್‌ಗಳಲ್ಲಿ ಈ ಗುರಿಯನ್ನು ಎರಡು ವಿಕೆಟ್ ಕಳೆದುಕೊಂಡು ತಲುಪಿತ್ತು.
"ಟೀಮ್ ಇಂಡಿಯಾ ವಿಚಾರಕ್ಕೆ ಬರುವಾಗ ನೀವು ಯಾವ ಬ್ಯಾಟಿಂಗ್ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತೀರಿ ಅದಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ನೀವು ಯಾವ ಕ್ರಮಾಂಕದಲ್ಲಿ ಹೋಗುತ್ತೀರಿ ಎಂಬುದಕ್ಕೆ ಮನಸ್ಥಿತಿ ಮುಖ್ಯವಾಗುತ್ತದೆ. ಪರಿಸ್ಥಿತಿಯನ್ನು ನೋಡಿಕೊಂಡು ಆಡುವುದು ತಂಡಕ್ಕೆ ಮುಖ್ಯವಾಗುತ್ತದೆ" ಎಂದಿದ್ದಾರೆ ಶ್ರೇಯಸ್ ಐಯ್ಯರ್.
"ನಾನು ಪರಿಸ್ಥಿತಿಗೆ ಪೂರಕವಾಗಿ ಬ್ಯಾಟಿಂಗ್ ನಡೆಸಿದೆ. ಇವತ್ತು ಪರಿಸ್ಥಿತಿ ಸವಾಲಿನದ್ದಾಗಿತ್ತು. ನಾವು ನಮ್ಮ ಸ್ವಾಭಾವಿಕ ಆಟವನ್ನು ಪ್ರದರ್ಶಿಸಬೇಕಾಗಿತ್ತು ಅದರ ಜೊತೆಯಲ್ಲಿಯೇ ತಂಡದ ಸ್ಕೋರ್‌ಬೋರ್ಡ್‌ನಲ್ಲ್ಇ ಏರಿಕೆ ಕಾಣುವಂತೆ ಮಾಡಬೇಕಿತ್ತು. ನಾವು ನಮ್ಮ ಬ್ಯಾಟಿಂಗ್ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳುವುದಿಲ್ಲ. ನಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಎಂತಾ ಪವರ್‌ಹಿಟ್ಟರ್‌ಗಳು ಇದ್ದಾರೆ ಎಂಬುದನ್ನು ಗಮನಿಸಿ" ಎಂದು ಶ್ರೇಯಸ್ ಐಯ್ಯರ್ ಪ್ರತಿಕ್ರಿಯಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications