ಏಕದಿನ: ಮಂಧಾನ-ಜೂಲನ್ ಸಾಹಸ, ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಜಯ

ಮುಂಬೈ, ಫೆಬ್ರವರಿ 25: ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ವನಿತೆಯರ ವಿರುದ್ಧ ಭಾರತದ ಮಹಿಳಾ ತಂಡ ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಸೋಮವಾರ (ಫೆಬ್ರವರಿ 25) ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 7 ವಿಕೆಟ್ ಸುಲಭ ಗೆಲುವನ್ನಾಚರಿಸಿದೆ. ಸ್ಮೃತಿ ಮಂಧಾನ ಅರ್ಧಶತಕ, ಜೂಲನ್ ಗೋಸ್ವಾಮಿ ಮಾರಕ ಬೌಲಿಂಗ್ ನೆರವಿನಿಂದ ಭಾರತ ಜಯ ದಾಖಲಿಸುವುದರೊಂದಿಗೆ 2-0ಯಿಂದ ಏಕದಿನ ಸರಣಿಯನ್ನೂ ಗೆದ್ದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡ, ನಟಾಲಿಯಾ ಸಿವರ್ 85, ಟಮ್ಮಿ ಬ್ಯೂಮಾಂಟ್ 20, ಲಾರೆನ್ ವಿನ್ಫೀಲ್ಡ್ 28 ರನ್ ಕೊಡುಗೆಯೊಂದಿಗೆ 43.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 161 ರನ್ ಪೇರಿಸಿತು. ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಜೂಲನ್ ಗೋಸ್ವಾಮಿ ಮತ್ತು ಶಿಖಾ ಪಾಂಡೆ ತಲಾ 4 ವಿಕೆಟ್ ಪಡೆದು ಮಿಂಚಿದರು.
ಇಂಗ್ಲೆಂಡ್ ನೀಡಿದ್ದ 162 ರನ್ ಗುರಿ ಬೆನ್ನಟ್ಟಿದ ಭಾರತ, ಮಂಧಾನ 63, ಪೂನಂ ರಾವತ್ 32, ನಾಯಕಿ ಮಿಥಾಲಿ ರಾಜ್ ಅಜೇಯ 47 ರನ್‌ನೊಂದಿಗೆ 41.1 ಓವರ್‌ಗೆ 3 ವಿಕೆಟ್ ಕಳೆದು 162 ರನ್ ಬಾರಿಸಿತು. ಅನುಭವಿ ಆಟಗಾರ್ತಿ ಭಾರತದ ಜೂಲನ್ ಗೋಸ್ವಾಮಿ ಪಂದ್ಯಶ್ರೇಷ್ಠೆ ಎನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications