ಭಾರತ v ಎಸೆಕ್ಸ್ ಅಭ್ಯಾಸ ಪಂದ್ಯ, 2ನೇ ದಿನ: ಎಸೆಕ್ಸ್ 5ಕ್ಕೆ 237ರನ್


ಚೆಲ್ಮ್ಸಫೋರ್ಡ್, ಜುಲೈ 26: ಭಾರತ ವಿರುದ್ಧ ಚೆಲ್ಮ್ಸಫೋರ್ಡ್ ನಲ್ಲಿ ಗುರುವಾರ ನಡೆದ ಎರಡನೇ ದಿನದ ಅಭ್ಯಾಸ ಪಂದ್ಯದಲ್ಲಿ ಎಸೆಕ್ಸ್, 58 ಓವರ್ ಗಳ ಮುಕ್ತಾಯಕ್ಕೆ 5 ವಿಕೆಟ್ ಕಳೆದು 237 ರನ್ ಕಲೆ ಹಾಕಿದೆ. ನಾಯಕ ಟಾಮ್ ವೆಸ್ಲಿ (57/89) ಮತ್ತು ಮೈಕಲ್-ಕೈಲ್ ಪೆಪ್ಪರ್ (68/74) ಬಾರಿಸಿದ ಅರ್ಧ ಶತಕ, ತಂಡದ ಮೊತ್ತ ಹೆಚ್ಚಿಸಲು ನೆರವಾಯಿತು.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 100.2 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 395 ರನ್ ಪೇರಿಸಿತ್ತು. ಮುರಳಿ ವಿಜಯ್, ನಾಯಕ ಕೊಹ್ಲಿ, ಕೆಎಲ್ ರಾಹುಲ್ ಮತ್ತು ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ಅರ್ಥ ಶತಕ ನೆರವಿನಿಂದ ಭಾರತ 400ರ ಸಮೀಪ ತೆರಳಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಭಾರತದಿಂದ ಆರಂಭಿಕ ಆಟಗಾರ ವಿಜಯ್-ಧವನ್ ರಲ್ಲಿ ವಿಜಯ್ 53 (113) ರನ್ ಕೊಡುಗೆ ನೀಡಿ ವಾಲ್ಟರ್ ಓವರ್ ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ನಡೆದರು. ಇನ್ನೊಬ್ಬ ದಾಂಡಿಗ ಧವನ್ ಅವರು ಮ್ಯಾಟ್ ಕೋಲ್ಸ್ ಎಸೆದ ಮೊದಲ ಎಸೆತಕ್ಕೆ ವಿಕೆಟ್ ಕೀಪರ್ ಜೇಮ್ಸ್ ಫೋಸ್ಟರ್ ಗೆ ಕ್ಯಾಚಿತ್ತು ಸೊನ್ನೆಗೆ ಔಟಾಗಿದ್ದು ಭಾರತಕ್ಕೆ ನಷ್ಟವೆನಿಸಿತು.
ಅನಂತರ ಬ್ಯಾಟಿಂಗ್ ಗೆ ಇಳಿದ ಚೇತೇಶ್ವರ್ ಪೂಜಾರ (1/7) ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಜಿಂಕ್ಯ ರಹಾನೆ (17/47) ಅವರೂ ಮ್ಯಾಥ್ಯು ಕ್ವಿನ್ ಓವರ್ ನಲ್ಲಿ ಕ್ಯಾಚಿತ್ತು ಹೊರ ನಡೆದರು. ಆದರೆ 5ನೇ ಕ್ರಮಾಂಕದಲ್ಲಿ ಇಳಿದ ಕೊಹ್ಲಿ ಕೊಂಚ ವಿಕೆಟ್ ಕಾಯ್ದುಕೊಂಡರು. 93 ಎಸೆತಗಳಿಗೆ ವಿರಾಟ್ 68 ರನ್ ಬಾರಿಸಿ ಔಟಾದರು.
ರಾಹುಲ್ ಅವರೂ ತಂಡಕ್ಕೆ ತಕ್ಕ ಮಟ್ಟಿನ ರನ್ ಕೊಡುಗೆ ನೀಡಿದರು. 58 (92) ರನ್ ಪೇರಿಸಿದ ರಾಹುಲ್ ಆ್ಯರನ್ ನಿಜ್ಜರ್ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ದಿನೇಶ್ ಕಾರ್ತಿಕ್ ಅಜೇಯ 82 (95), ಹಾರ್ದಿಕ್ ಪಾಂಡ್ಯ 51 (82) ರನ್ ಸೇರಿಸಿದ್ದರು. ಭಾರತ ಇನ್ನಿಂಗ್ಸ್ ವೇಲೆ ಎಸೆಕ್ಸ್ ಬೌಲರ್ ಪೌಲ್ ವಾಲ್ಟರ್ 113 ರನ್ ಗೆ 4 ವಿಕೆಟ್ ಕಬಳಿಸಿ ಭಾರತದ ರನ್ ಕದಿಯುವಿಕೆಗೆ ತಡೆಯೊಡ್ಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications