For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್: ಕ್ರಿಕೆಟ್ ಶಿಶು ಹಾಂಕಾಂಗ್ ಎದುರು ತಿಣುಕಾಡಿ ಗೆದ್ದ ಭಾರತ!

Asia cup 2018: ಹಾಂಕಾಂಗ್ ವಿರುದ್ದ ಗೆಲುವು ಸಾಧಿಸಿದ ಭಾರತ | Oneindia Kannada
India vs Hong Kong, 4th Match, Group A - Live Cricket Score

ದುಬೈ, ಸೆಪ್ಟೆಂಬರ್ 18: ಏಷ್ಯಾ ಕಪ್ 2018ರ 4ನೇ ಪಂದ್ಯದಲ್ಲಿ ಭಾರತ ಮತ್ತು ಹಾಂಕಾಂಗ್ ತಂಡಗಳು ಮಖಾಮುಖಿಯಾಗಿದ್ದು, ಶಿಖರ್ ಧವನ್ ಅವರ ಆಕರ್ಷಕ ಶತಕ (127) ಮತ್ತು ಅಂಬಾಟಿ ರಾಯುಡು ಅವರ ಅರ್ಧ ಶತಕದ (60) ನೆರವಿನಿಂದ ಭಾರತ 26 ರನ್ ಜಯ ಸಾಧಿಸಿದೆ.

ಹಾಂಕಾಂಗ್ ಹೊಸ ತಂಡವಾದ್ದರಿಂದ ಭಾರತ ಎದುರಾಳಿ ವಿರುದ್ಧ ಸುಲಭ ಜಯ ಸಾಧಿಸುವ ನಿರೀಕ್ಷೆಯಲ್ಲಿತ್ತು. ಆದರೆ ಪಂದ್ಯಾರಂಭದಿಂದಲೂ ಉತ್ತಮ ಆಟವಾಡಿದ ಹಾಂಕಾಂಗ್ ತಂಡ ಫಲಿತಾಂಶ ಕಸಿದುಕೊಳ್ಳುವ ಭೀತಿಯನ್ನು ರೋಹಿತ್ ಶರ್ಮಾ ಬಳಗಕ್ಕೆ ದಾಟಿಸಿತ್ತು. ಆದರೆ ಅಂತಿಮವಾಗಿ ಭಾರತ ಮೊದಲ ಪಂದ್ಯದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟಿದೆ.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44049

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಷಲ್ಪಟ್ಟ ಭಾರತ, ಧವನ್ ಅವರ ಶತಕ ಮತ್ತು ರಾಯುಡು ಅವರ ಅರ್ಧ ಶತಕದ ನೆರವಿನಿಂದ 50 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದು 285 ರನ್ ಪೇರಿಸಿ ಎದುರಾಳಿ ಗೆ ಭಾರತ 286 ರನ್ ಗುರಿ ನೀಡಿತ್ತು.

ಗುರಿ ಬೆನ್ನಟ್ಟಿದ ಹಾಂಕಾಂಗ್ ನಿಜಾಕತ್ ಖಾನ್ (92) ಮತ್ತು ನಾಯಕ ಅನ್ಸುಮಾನ್ ರಾಥ್ (73) ಅವರ ಅರ್ಧಶತಕ ನೆರವಿನಿಂದ 50 ಓವರ್ ಗೆ 8 ವಿಕೆಟ್ ಕಳೆದು 259 ರನ್ ಪೇರಿಸಿ 26 ರನ್ ಗಳಿಂದ ಭಾರತಕ್ಕೆ ಶರಣಾಯಿತು. ಬುಧವಾರ (ಸೆಪ್ಟೆಂಬರ್ 19) ಕ್ರಿಕೆಟ್ ಲೋಕದ ಸಾಂಪ್ರದಾಯಿಕ ಎದುರಾಳಿ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಪಂದ್ಯವನ್ನಾಡಲಿವೆ.

Story first published: Wednesday, September 19, 2018, 1:42 [IST]
Other articles published on Sep 19, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+