ಟೀಮ್ ಇಂಡಿಯಾ vs ಐರ್ಲೆಂಡ್: ಪ್ರಿವ್ರ್ಯೂ, ಪಂದ್ಯದ ಸಮಯ ಹಾಗೂ ಸಂಭಾವ್ಯ ಆಡುವ ಬಳಗ
ಐರ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಶುಕ್ರವಾರ ಮೊದಲ ಪಂದ್ಯವನ್ನಾಡಲಿದೆ. ಸರಣಿಯ ಮೂರು ಪಂದ್ಯಗಳು ಕೂಡ ಡಬ್ಲಿನ್‌ನ ಮಾಲೆಹೈಡ್ ಕ್ರಿಕೆಟ್ ಮೈದಾನದಲ್ಲಿ ಆಯೋಜನೆಯಾಗಲಿದ್ದು ಬೂಮ್ರಾ ನಾಯಕತ್ವದ ಯುವ ಆಟಗಾರರ ಪಡೆ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಈಗ ಸಾಕಷ್ಟು ಕುತೂಹಲ ಮೂಡಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-3 ಅಂತರದಿಂದ ಸೋಲು ಅನುಭವಿಸಿದ ಟೀಮ್ ಇಂಡಿಯಾ ಈಗ ಮತ್ತೊಂದು ಚುಟುಕು ಮಾದರಿಯ ಸರಣಿಗೆ ಸಜ್ಜಾಗಿದೆ. ಈ ಸರಣಿಯಲ್ಲಿ ಮೊದಲ ಆದ್ಯತೆಯ ಕ್ರಿಕೆಟಿಗರ ಬದಲಿಗೆ ಬಹುತೇಕ ಯುವ ಆಟಗಾರರಿಗೆ ಅವಕಾಶ ನೀಡಲಾಗಿದ್ದು ಅಂತಾರಾಷ್ಟ್ರೂಈಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಹಲವು ಪ್ರತಿಭೆಗಳು ಎದುರುನೋಡುತ್ತಿದ್ದಾರೆ. ಹೀಗಾಗಿ ಈ ದೃಷ್ಟಿಯಿಂದ ಈ ಸರಣಿಯ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ನಾಯಕನಾಗಿ ಬೂಮ್ರಾಗೆ ಇದು ಅಗ್ನಿಪರೀಕ್ಷೆಯ ಜೊತೆಗೆ ಸುದೀರ್ಘ ಕಾಲದ ಬಳಿಕ ತಂಡಕ್ಕೆ ಮರಳಿ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ.

ಪಂದ್ಯದ ಸಮಯ ಹಾಗೂ ನೇರಪ್ರಸಾರದ ಮಾಹಿತಿ
ಭಾರತ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಆಗಸ್ಟ್ 18 ಶುಕ್ರವಾರದಂದು ನಡೆಯಲಿದೆ. ಡಬ್ಲಿನ್‌ನಲ್ಲಿ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋನೆಯಾಗಲಿದ್ದು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಸ್ಪೋರ್ಟ್ಸ್ 18 ವಾಹಿನಿಯಲ್ಲಿ ಪಂದ್ಯ ನೇರಪ್ರಸಾರವಾಗಲಿದ್ದು ಜಿಯೋ ಸಿನಿಮಾದಲ್ಲಿಯೂ ಪಂದ್ಯವನ್ನು ಉಚಿತವಾಗಿ ವೀಕ್ಷಿಸುವ ಅವಕಾಶವಿದೆ.
ಪಿಚ್ ರಿಪೋರ್ಟ್, ಹವಾಮಾನ ವರದಿ
ಈ ಮೈದಾನದ ಸರಾಸರಿ ಸ್ಕೋರ್ 168 ಆಗಿದ್ದು ಪಿಚ್ ಸ್ಪರ್ಧಾತ್ಮಕವಾಗಿರಲಿದೆ. ಇಲ್ಲಿ ಆಡಿರುವ 16 ಪಂದ್ಯಗಳ ಪೈಕಿ 9 ಪಂದ್ಯಗಳಲ್ಲಿ ರನ್ ಬೆನ್ನಟ್ಟಿರುವ ತಂಡ ಗೆಲುವು ಸಾಧಿಸಿದೆ. ಇನ್ನು ಪಂದ್ಯದ ಅವಧಿಯಲ್ಲಿ ಸಂಪೂರ್ಣವಾಗಿ ಮೋಡಕವಿದ ವಾತಾವರಣವಿರಲಿದ್ದು ಮಳೆ ಅಡ್ಡಿಯುಂಟು ಮಾಡುವ ಆತಂಕವೂ ಇದ್ದೇ ಇದೆ.
ಸಂಭಾವ್ಯ ಆಡುವ ಬಳಗ
ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಗರೆಥ್ ಡೆಲಾನಿ, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಜೋಶ್ ಲಿಟಲ್, ಕ್ರೇಗ್ ಯಂಗ್, ಬ್ಯಾರಿ ಮೆಕಾರ್ಥಿ
ಟೀಮ್ ಇಂಡಿಯಾ: ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ (ನಾಯಕ), ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications