For Quick Alerts
ALLOW NOTIFICATIONS  
For Daily Alerts
 

ಟಿ20 ಎರಡನೆಯ ಪಂದ್ಯ: ಪ್ರಯೋಗಗಳ ನಡುವೆ ಕ್ಲೀನ್‌ಸ್ವೀಪ್ ಗುರಿ

India vs Ireland 2nd t20 match preview

ಡಬ್ಲಿನ್, ಜೂನ್ 29: ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಮೊದಲ ಟಿ20 ಯನ್ನು ಗೆದ್ದುಕೊಂಡಿರುವ ಭಾರತ, ಕ್ಲೀನ್‌ಸ್ವೀಪ್ ಸಾಧನೆಯೊಂದಿಗೆ ಇಂಗ್ಲೆಂಡ್‌ನ ಸವಾಲಿನ ಅಂಗಳಕ್ಕೆ ಪ್ರಯಾಣ ಬೆಳೆಸಲು ಉದ್ದೇಶಿಸಿದೆ.

ನಾಯಕ ವಿರಾಟ್ ಕೊಹ್ಲಿ ಪ್ರಯೋಗಗಳನ್ನು ನಡೆಸುವ ಬಗ್ಗೆ ಈಗಾಗಲೇ ಸುಳಿವು ನೀಡಿದ್ದಾರೆ. ಹೀಗಾಗಿ ಈ ಪಂದ್ಯವನ್ನು ಲಘುವಾಗಿ ಪರಿಗಣಿಸದೆಯೇ ಇದ್ದರೂ, ತಮ್ಮ ಬ್ಯಾಟ್ಸ್‌ಮನ್‌ಗಳ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡುವ ಅವಕಾಶವನ್ನಾಗಿ ಬಳಸಿಕೊಳ್ಳಲು ಕೊಹ್ಲಿ ಹಿಂದೇಟು ಹಾಕುವುದಿಲ್ಲ.

ಶುಕ್ರವಾರ ನಡೆಯಲಿರುವ ಎರಡನೆಯ ಪಂದ್ಯದಲ್ಲಿ ಕೊಹ್ಲಿ ತಂಡ ಹಾಗೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಅನೇಕ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ.

ಅತ್ಯುತ್ತಮ ಫಾರ್ಮ್‌ನಲ್ಲಿರುವ ಕೆ.ಎಲ್. ರಾಹುಲ್ ಅವರನ್ನು ಮೊದಲ ಪಂದ್ಯದಲ್ಲಿ ಕೈಬಿಟ್ಟಿದ್ದು ಬಹುತೇಕರಲ್ಲಿ ಅಚ್ಚರಿ ಮೂಡಿಸಿತ್ತು. ಅಲ್ಲದೆ, ಕೊಹ್ಲಿಯನ್ನು ಕ್ರಿಕೆಟ್ ಅಭಿಮಾನಿಗಳು ತೀವ್ರವಾಗಿ ಟೀಕಿಸಿದ್ದರು.

ಆದರೆ, ಎರಡನೆಯ ಪಂದ್ಯದಲ್ಲಿ ಆಡುವ ತಂಡದಲ್ಲಿ ಹಲವು ಬದಲಾವಣೆಗಳು ಇರಲಿದೆ ಎಂದು ಕೊಹ್ಲಿ ಮೊದಲ ಪಂದ್ಯದ ಬಳಿಕ ಹೇಳಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ರಾಹುಲ್‌ ಇನ್ನಿಂಗ್ಸ್ ಆರಂಭಿಸುವ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.

ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಅವರ ಜೊಡಿಯನ್ನೇ ಉಳಿಸಿಕೊಳ್ಳಲು ತೀರ್ಮಾನಿಸಿದರೆ, ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ.

India vs Ireland 2nd t20 match preview

ಮೂರು ಮತ್ತು ನಾಲ್ಕನೆಯ ಕ್ರಮಾಂಕದಲ್ಲಿ ಆಡಿದ್ದ ಸುರೇಶ್ ರೈನಾ ಹಾಗೂ ಎಂ.ಎಸ್. ಧೋನಿ, ಈ ಬಾರಿಯೂ ಅದೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಹೆಚ್ಚು. ಮನೀಶ್ ಪಾಂಡೆ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ಇನ್ನೊಂದು ಅವಕಾಶ ನೀಡಬಹುದು.

ಧೋನಿ ಮತ್ತು ಮನೀಶ್ ಪಾಂಡೆ ಇಬ್ಬರೂ ಇಂದಿನ ಪಂದ್ಯದಲ್ಲಿ ಆಡಿದರೆ ದಿನೇಶ್ ಕಾರ್ತಿಕ್ ಅವರಿಗೆ ತಂಡದಲ್ಲಿ ಅವಕಾಶ ಸಿಗುವ ಸಂಭವ ಕಡಿಮೆ.

ಬೌಲಿಂಗ್ ವಿಭಾಗದಲ್ಲಿ ಇಬ್ಬರೂ ಸ್ಪಿನ್ನರ್‌ಗಳನ್ನು ಬಿಟ್ಟು ಕಣಕ್ಕಿಳಿಯುವ ಸಾಹಸಕ್ಕೆ ಕೊಹ್ಲಿ ಮುಂದಾಗಲಾರರು. ಆದರೆ, ಆರು ವರ್ಷದಿಂದ ಅಂತರರಾಷ್ಟ್ರೀಯ ಟಿ20 ಪಂದ್ಯ ಆಡದ ವೇಗದ ಬೌಲರ್ ಉಮೇಶ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.

ಇದರಿಂದ ಭುವನೇಶ್ವರ್ ಕುಮಾರ್ ಅಥವಾ ಜಸ್‌ಪ್ರೀತ್ ಬೂಮ್ರಾ ಹೊರಕ್ಕೆ ಕೂರಬೇಕಾಗಲಿದೆ. ಮತ್ತೊಬ್ಬ ವೇಗಿ ಸಿದ್ಧಾರ್ಥ ಕೌಲ್ ಅವರಿಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ.

ಪಂದ್ಯದ ವಿವರ
ಸ್ಥಳ: ದಿ ವಿಲೇಜ್, ಮಲ್ಹೈಡ್, ಡುಬ್ಲಿನ್ (ಐರ್ಲೆಂಡ್)
ಪಂದ್ಯದ ಆರಂಭ: ರಾತ್ರಿ 8.30 (ಭಾರತೀಯ ಕಾಲಮಾನ)
ಪ್ರಸಾರ: ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ (ಎಸ್ ಪಿಎನ್). ಸೋನಿ ಸಿಕ್ಸ್, ಸೋನಿ ಸಿಕ್ಸ್ ಎಚ್ ಡಿ (ಇಂಗ್ಲಿಷ್) ಸೋನಿ ಟೆನ್ 3 ಹಾಗೂ ಎಚ್ ಡಿ (ಹಿಂದಿ), ಸೋನಿ ಲೈವ್ ಆಪ್.

Story first published: Friday, June 29, 2018, 14:11 [IST]
Other articles published on Jun 29, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+