ಯಾವುದೇ ತಂಡವನ್ನಾದರೂ ನಾವು ಮಣಸಬಲ್ಲೆವು: ಭಾರತಕ್ಕೆ ಐರ್ಲೆಂಡ್ ಆಟಗಾರನ ಎಚ್ಚರಿಕೆ ಸಂದೇಶ
ಭಾರತ ಹಾಗೂ ಐರ್ಲೆಂಡ್ ತಂಡಗಳ ಮುಖಾಮುಖಿಗೆ ಕ್ಷಣಗಣನೆ ಆರಂಭವಾಗಿದೆ. ಮೂರು ಪಂದ್ಯಗಳ ಟಿ20 ಸರಣಿ ಆಗಸ್ಟ್ 18ರಂದು ಆರಂಭವಾಗಲಿದೆ. ಈ ಸರಣಿಯ ಆರಂಭಕ್ಕೂ ಮುನ್ನ ಆತಿಥೇಯ ಐರ್ಲೆಂಡ್ ತಂಡದ ಸ್ಪಿನ್ನರ್ ಬೆನ್ ವೈಟ್ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದು ಪ್ರಸ್ತುತ ಐರ್ಲೆಂಡ್ ತಂಡ ಬಲಿಷ್ಠವಾಗಿದ್ದು ಬಲಿಷ್ಠ ಐರ್ಲೆಂಡ್ ತಂಡ ಭಾರತವನ್ನು ಮಣಿಸಲು ಶಕ್ತವಾಗಿದೆ ಎಂದಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಟಿ 20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಐರ್ಲೆಂಡ್ ತಮ್ಮ ಮೊದಲ ಆಯ್ಕೆಯ ಆಟಗಾರರನ್ನು ಸರಣಿಗೆ ಹೊಂದಿದ್ದು, ಭಾರತವು ತಮ್ಮ ಯುವ ಗನ್‌ಗಳಿಗೆ ಅವಕಾಶಗಳನ್ನು ನೀಡಿದೆ. ಹೀಗಾಗಿ ಭಾರತ ತಂಡಕ್ಕೆ ಈ ಸರಣಿ ಸುಲಭ ಸವಾಲಾಗಿರುವುದಿಲ್ಲ ಎಂಬುದು ಕೂಡ ಸ್ಪಷ್ಟವಾಗಿದೆ. ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸ್ಟಾರ್ ಆಟಗಾರರ ಬಳಗವವನ್ನು ಹೊಂದಿದ್ದರೂ 2-3 ಅಂತರದಿಂದ ಸರಣಿಯನ್ನು ಕಳೆದುಕೊಂಡಿರುವುದು ಗಮನಾರ್ಹ.

"ನಮ್ಮ ದಿನದಲ್ಲಿ ನಾವು ಯಾವುದೇ ತಂಡವನ್ನಾದರೂ ಮಣಸಬಲ್ಲೆವು. ಏನಾಗಲಿದೆ ಎಂಬುದು ನಿಮಗೆ ತಿಳಿದಿಲ್ಲ. ಅದನ್ನು ನೀವು ನಂಬಲೇ ಬೇಕಾಗುತ್ತದೆ. ಭಾರತದ ವಿರುದ್ಧ ತವರಿನಲ್ಲಿ ಆಡುವುದು ಬಹಳ ದೊಡ್ಡ ಸಂಗತಿ. ಅವರು ವಿಶ್ವದಲ್ಲೇ ಅತ್ಯುತ್ತಮ ತಂಡ. ಆದರೆ ಅವರ ಸವಾಲನ್ನು ನಾವು ಎದುರಿಸಲು ಸಮರ್ಥರಾಗಿದ್ದೇವೆ" ಎಂದಿದ್ದಾರೆ ಬೆನ್ ವೈಟ್.
ಇನ್ನು ಇದಕ್ಕೂ ಮುನ್ನ ಐರ್ಲೆಂಡ್‌ನ ವಿಕೆಟ್‌ಕೀಪರ್ ಲೋರ್ಕನ್ ಟಕರ್ ಈ ಸರಣಿಯ ಕುರಿತಾಗಿ ಮಾತನಾಡಿದ್ದರು. ಮಲಾಹೈಡ್‌ನಲ್ಲಿ ಭಾರತವನ್ನು ಎದುರಿಸಲು ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ ಎಂದ ಅವರು ಕಳೆದ ಬೇಸಿಗೆಯಲ್ಲಿ ಭಾರತದ ವಿರುದ್ಧ ಎರಡು ಶ್ರೇಷ್ಠ ಪಂದ್ಯಗಳನ್ನು ಹೊಂದಿದ್ದೆವು ಎಂದಿದ್ದಾರೆ. ಈ ಬಾರಿ ಭಾರತ ತಂಡಕ್ಕೆ ಪ್ರಬಲ ಪೈಪೋಟಿ ನೀಡುವ ಆತ್ಮವಿಶ್ವಾಸವನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೇರ್, ರಾಸ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್, ಕ್ರೇಗ್ ಯಂಗ್
ಭಾರತ ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications