ಭಾರತ vs ಐರ್ಲೆಂಡ್ ಟಿ20 ಸರಣಿ: ಸೂಪರ್ ಸ್ಟಾರ್‌ಗಳ ಸಹಿತ ಈ ಐವರು ಭಾರತ ತಂಡಕ್ಕೆ ಮರಳುವ ಸಾಧ್ಯತೆ!

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯಲ್ಲಿ ಕೊನೆಯ ಎರಡು ಪಂದ್ಯಗಳು ಮಾತ್ರವೇ ಬಾಕಿಯಿದೆ. ಈ ಸರಣಿಯಲ್ಲಿ ಭಾರತ ತಂಡ 1-2 ಅಂತರದಿಂದ ಹಿನ್ನಡೆ ಅನುಭವಿಸುತ್ತಿದೆ. ಈ ಸರಣಿಯ ಬಳಿಕ ಭಾರತ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಈ ಪ್ರವಾಸದಲ್ಲಿ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ ಆಡಲಿದೆ.
ಐರ್ಲೆಂಡ್ ವಿರುದ್ಧ ನಡೆಯಲಿರುವ ಈ ಸರಣಿಯಲ್ಲಿ ಭಾರತ ತಂಡಕ್ಕೆ ಐವರು ಪ್ರಮುಖ ಆಟಗಾರರು ಮರಳುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾ ವಿರುದ್ಧಧ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಇಬ್ಬರು ಸೂಪರ್ ಸ್ಟಾರ್ ಆಟಗಾರರು ಸೇರಿದಂತೆ ಭಾರತ ತಂಡದಲ್ಲಿ ಮತ್ತೆ ಕಾಣಿಸಿಕೊಳ್ಳಬಹುದಾದ ಆ ಐವರು ಕ್ರಿಕೆಟಿಗರು ಯಾರು? ಮುಂದೆ ಓದಿ..

ವಿರಾಟ್ ಕೊಹ್ಲಿ
2022ರ ಐಪಿಎಲ್ ಆವೃತ್ತಿಯ ಬಳಿಕ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿಯನ್ನು ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಭಾಗವಹಿಸಿಲ್ಲ. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯಬೇಕು ಎಂಬ ಅಭಿಪ್ರಾಯುಗಳು ವ್ಯಕ್ತವಾಗಿತ್ತು. ಅದಕ್ಕೆ ಪೂರಕವಾಗಿ ಕೊಹ್ಲಿ ವಿರಾಮ ತೆಗೆದುಕೊಂಡಿದ್ದು ಮತ್ತೆ ಹೊಸತನದಿಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಐರ್ಲೆಂಡ್ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟಿ20 ಸರಣಿಗೆ ಕೊಹ್ಲಿ ಮತ್ತೆ ತಂಡಕ್ಕೆ ಮರಳುವ ಸಾಧ್ಯತೆಯಿದೆ.

ರೋಹಿತ್ ಶರ್ಮಾ
ಐಪಿಎಲ್ 2022ರ ಆವೃತ್ತಿಯ ಬಳಿಕ ಟೀಮ್ ಇಂಡಿಯಾ ಖಾಯಂ ನಾಯಕ ರೋಹಿತ್ ಶರ್ಮಾ ಕೂಡ ವಿಶ್ರಾಂತಿ ಪಡೆದುಕೊಂಡಿದ್ದಾರೆ. ರೋಹಿತ್ ಶರ್ಮಾ ಪಾಲಿಗೂ ಈ ಆವೃತ್ತಿ ಅತ್ಯಂತ ಕಠಿಣವಾಗಿತ್ತು. ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು, ವೈಯಕ್ತಿಕವಾಗಿಯೂ ರೋಹಿತ್ ಶರ್ಮಾ ಪಾಲಿಗೆ ಇದು ಅತ್ಯಂತ ಕಳಪೆ ಆವೃತ್ತಿಯಾಗಿತ್ತು. ಈ ಆವೃತ್ತಿಯಲ್ಲಿ ರೋಹಿತ್ ಬ್ಯಾಟ್‌ನಿಂದ ಒಂದೇ ಒಂದು ಅರ್ಧ ಶತಕ ದಾಖಲಾಗಿರಲಿಲ್ಲ. ಇದೀಗ ವಿಶ್ರಾಂತಿ ಮುಗಿಸಿ ಮತ್ತೆ ರಾಷ್ಟ್ರೀಯ ತಂಡದ ಜವಾಬ್ಧಾರಿಗೆ ರೋಹಿತ್ ಶರ್ಮಾ ಸಜ್ಜಾಗಿದ್ದು ಐರ್ಲೆಂಡ್ ವಿರುದ್ಧ ಮರಳುವ ಸಾಧ್ಯತೆಯಿದೆ.

ಸಂಜು ಸ್ಯಾಮ್ಸನ್
ಈ ಬಾರಿಯ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ ನಾಯಕನಾಗಿ ಹಾಗೂ ಆಟಗಾರನಾಗಿ ಅದ್ಭುತ ಆವೃತ್ತಿಯನ್ನು ಹೊಂದಿದ್ದರು. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸಂಜು ಫೈನಲ್ ಹಂತದವರೆಗೆ ಮುನ್ನಡೆಸಿದ್ದು ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿಯೂ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಆಪ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕಾಹಿತ್ತು ಎಂಬ ಕೂಗು ಸಾಕಷ್ಟು ಕೇಳಿ ಬಂದಿತ್ತು. ಆದರೆ ಸಂಜು ಸ್ಯಾಮ್ಸನ್‌ಗೆ ಅವಕಾಶ ದೊರೆತಿರಲಿಲ್ಲ. ಆದರೆ ಐರ್ಲೆಂಡ್ ವಿರುದ್ಧಧ ಸರಣಿಗೆ ಸಂಜು ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. ಈ ಅವಕಾಶವನ್ನು ಬಳಸಿಕೊಂಡು ಟಿ20 ವಿಶ್ವಕಪ್‌ನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಲಿದ್ದಾರೆ.

ರಾಹುಲ್ ತ್ರಿಪಾಠಿ
ರಾಹುಲ್ ತ್ರಿಪಾಠಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿಯೂ ಅದ್ಭುತ ಪ್ರದರ್ಶನ ನಿಡಿ ಮಿಂಚಿದ್ದಾರೆ. ಆಡಿದ 14 ಪಂದ್ಯಗಳಲ್ಲಿ 400 ರನ್‌ಗಳಿಗೂ ಅಧಿಕ ರನ್‌ಗಳಿಸಿದ್ದಾರೆ. ಐಪಿಎಲ್‌ನಲ್ಲಿ ರಾಹುಲ್ ತ್ರಿಪಾಠಿ ಅವರ ಸ್ಟ್ರೈಕ್‌ರೇಟ್ ಕೂಡ ಅದ್ಭುತವಾಗಿದ್ದು 158ರ ಸ್ಟ್ರೈಕ್‌ರೆಟ್‌ನಲ್ಲಿ ತ್ರಿಪಾಠಿ ಬ್ಯಾಟಿಂಗ್ ನಡೆಸಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಸರೆಯಾದರು. ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಸರಣಿಗೆ ರಾಹುಲ್ ತ್ರಿಪಾಠಿ ಆಯ್ಕೆಯಾಗುವ ನಿರೀಕ್ಷೆಯಿತ್ತು. ಆದರೆ ಆಗ ಆಯ್ಕೆಗಾರರು ಮನಸ್ಸು ಮಾಡಿರಲಿಲ್ಲ. ಇದೀಗ ಐರ್ಲೆಂಡ್ ವಿರುದ್ಧದ ಸರಣಿಗೆ ರಾಹುಲ್ ತ್ರಿಪಾಠಿ ಆಯ್ಕೆಯಾಗುವ ನಿರೀಕ್ಷೆಯಿದೆ.

ಟಿ ನಟರಾಜನ್
ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಟಿ ನಟರಾಜನ್ ಈ ಆವೃತ್ತಿಯಲ್ಲಿಯೂ ಮಿಂಚಿದ್ದಾರೆ. 11 ಪಂದ್ಯಗಳಲ್ಲಿ ನಟ್ಟು 18 ವಿಕೆಟ್ ಸಂಪಾದದಿಸಿದ್ದರು. ಆದರೆ ಅವರ ಎಕಾನಮಿ ರೇಟ್ 9.4ರಷ್ಟಿತ್ತು. ತಮ್ಮ ತಂಡದ ಮತ್ತೋರ್ವ ಯುವ ಆಟಗಾರ ಉಮ್ರಾನ್ ಮಲಿಕ್ ಬೌಲಿಂಗ್‌ನಿಂದ ಮಿಂಚಿದ ಕಾರಣ ನಟರಾಜನ್ ಈ ಬಾರಿ ಹೆಚ್ಚು ಗಮನಸೆಳೆಯಲಿಲ್ಲ. ಆದರೆ ತೀಕ್ಷ್ಣ ಯಾರ್ಕರ್‌ಗಳ ಕಾರಣದಿಂದಾಗಿ ಮತ್ತೊಮ್ಮೆ ಭಾರತೀಯ ತಂಡದಲ್ಲಿ ನಟ್ಟು ಅವಕಾಶ ಪಡೆಯುವ ಸಾಧ್ಯತೆಯಿದೆ. ಐರ್ಲೆಂಡ್ ಪ್ರವಾಸದಲ್ಲಿ ನಟರಾಜನ್ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications