ಭಾರತ vs ನ್ಯೂಜಿಲೆಂಡ್ ಏಕದಿನ ಸರಣಿ: ಪಂದ್ಯಕ್ಕೂ ಮುನ್ನ ತಿಳಿದುಕೊಳ್ಳಲೇ ಬೇಕಾದ ಮಾಹಿತಿ

ಐದು ಪಂದ್ಯಗಳ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಕ್ಲೀನ್‌ಸ್ವೀಪ್ ಮಾಡಿದ ಟೀಮ್ ಇಂಡಿಯಾ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ನಾಳೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಚುಟುಕು ಕ್ರಿಕೆಟ್‌ನಲ್ಲಿ ಗೆದ್ದ ಹುಮ್ಮಸ್ಸಿನಲ್ಲಿರುವ ಭಾರತ ಏಕದಿನ ಸರಣಿಯಲ್ಲೂ ಇದೇ ಪ್ರದರ್ಶನ ಮುಂದುವರಿಸುವ ಉತ್ಸಾಹದಲ್ಲಿದೆ.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡಗಳು ನಾಳೆ ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಟಿ20 ಸರಣಿ ಗೆದ್ದಿರುವ ಕಾರಣ ಟೀಮ್ ಇಂಡಿಯಾ ಏಕದಿನ ಸರಣಿಯಲ್ಲೂ ಗೆಲ್ಲುವ ಫೇವರೀಟ್ ಎನಿಸಿದೆ. ಆದರೆ ನ್ಯೂಜಿಲೆಂಡ್‌ಗೆ ತವರು ನೆಲದ ಅನುಕೂಲ ಇದ್ದೇ ಇರಲಿದೆ.

ಭಾರತ vs ಕೀವಿಸ್ ಏಕದಿನ: ರೋಹಿತ್ ಶರ್ಮಾ ಸ್ಥಾನಕ್ಕೆ ಕನ್ನಡಿಗ ಮಯಾಂಕ್‌ಗೆ ಅವಕಾಶಭಾರತ vs ಕೀವಿಸ್ ಏಕದಿನ: ರೋಹಿತ್ ಶರ್ಮಾ ಸ್ಥಾನಕ್ಕೆ ಕನ್ನಡಿಗ ಮಯಾಂಕ್‌ಗೆ ಅವಕಾಶ

ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಸರಣಿಯಿಂದಲೇ ಹೊರಬಿದ್ದಿದ್ದರೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲೆರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇಬ್ಬರೂ ಗಾಯಗೊಂಡು ಕಣಕ್ಕಿಳಿಯಲು ಸಾಧ್ಯವಾಗುತ್ತಿಲ್ಲ.

ಟೀಮ್ ನ್ಯೂಸ್ ಟೀಮ್ ಇಂಡಿಯಾ

ಟೀಮ್ ನ್ಯೂಸ್ ಟೀಮ್ ಇಂಡಿಯಾ

ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ತಂಡದಿಂದ ಹೊರಗುಳಿದಿರುವುದು ತಂಡದ ದೊಡ್ಡ ಹಿನ್ನಡೆಯಾಗಿದೆ. ಈಗಾಗಲೇ ಗಾಯದ ಕಾರಣಕ್ಕೆ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯಾ, ಶಿಖರ್ ಧವನ್, ದೀಪಕ್ ಚಾಹರ್ ಹೊರಗುಳಿದಿದ್ದಾರೆ. ಮಯಾಂಕ್ ಅಗರ್ವಾಲ್ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ಬದಲಿಗೆ ಕಣಕ್ಕಿಳಿಯಲಿದ್ದಾರೆ. ಮಯಾಂಕ್ ಅಗರ್ವಾಲ್ ಮತ್ತು ಪೃಥ್ವಿ ಶಾ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ರಾಹುಲ್ ಐದನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ.

ಟೀಮ್ ನ್ಯೂಸ್ ನ್ಯೂಜಿಲೆಂಡ್

ಟೀಮ್ ನ್ಯೂಸ್ ನ್ಯೂಜಿಲೆಂಡ್

ನ್ಯೂಜಿಲೆಂಡ್ ತಂಡದಲ್ಲೂ ಗಾಯದ ಸಮಸ್ಯೆ ದೊಡ್ಡದಾಗಿದೆ. ನಾಯಕ ಕೇನ್ ವಿಲಿಯಮ್ಸನ್ ಗಾಯಗೊಂಡು ಮೊದಲೆರಡು ಪಂದ್ಯಗಳಿಂದ ಅವರು ತಪ್ಪಿಸಿಕೊಳ್ಳಲಿದ್ದಾರೆ. ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಟಾಮ್ ಲಾಥಮ್ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಆಲ್‌ರೌಂಡರ್ ಜಿಮ್ಮಿ ನೀಶಮ್ ಮತ್ತು ಕಾಲಿನ್ ಗ್ರಾಂಡ್‌ಹೊಮ್‌ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಿದ್ದಾರೆ.

ತಂಡಗಳು

ತಂಡಗಳು

ಟೀಮ್ ಇಂಡಿಯಾ: ವಿರಾಟ್ ಕೊಹ್ಲಿ (ನಾಯಕ), ಪೃಥ್ವಿ ಶಾ, ಮಾಯಾಂಕ್ ಅಗರ್ವಾಲ್, ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಶಿವಮ್ ದುಬೆ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯುಜ್ವೇಂದ್ರ ಚಹಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಶಾರ್ದುಲ್ ಠಾಕೂರ್, ನವದೀಪ್ ಸೈನಿ

ನ್ಯೂಜಿಲೆಂಡ್: ಟಾಮ್ ಲಾಥಮ್ (ನಾಯಕ ಮತ್ತು ವಿಕೆಟ್ ಕೀಪರ್), ಮಾರ್ಟಿನ್ ಗುಪ್ಟಿಲ್, ರಾಸ್ ಟೇಲರ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಜಿಮ್ಮಿ ನೀಶಮ್, ಸ್ಕಾಟ್ ಕುಗ್ಗೆಲೀಜ್ನ್, ಟಾಮ್ ಬ್ಲುಂಡೆಲ್, ಹೆನ್ರಿ ನಿಕೋಲ್ಸ್, ಮಿಚೆಲ್ ಸ್ಯಾಂಟ್ನರ್, ಹಮೀಶ್ ಬೆನೆಟ್, ಇಶ್ ಸೋಧಿ, ಟಿಮ್ ಸೌಥಿ, ಕೈಲ್ ಜೇಮೀಸನ್, ಮಾರ್ಕ್ ಚಾಪ್ಮನ್

ಪಂದ್ಯದ ಸಮಯ ಮತ್ತು ನೇರ ಪ್ರಸಾರ

ಪಂದ್ಯದ ಸಮಯ ಮತ್ತು ನೇರ ಪ್ರಸಾರ

ಭಾರತೀಯ ಕಾಲಮಾನ ಮುಂಜಾನೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯದ ನೇರಪ್ರಸಾರವಿರಲಿದೆ. ಹಾಟ್‌ಸ್ಟಾರ್‌ನಲ್ಲೂ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ. 'ಮೈಖೇಲ್ ಕನ್ನಡ'ದಲ್ಲೂ ಪಂದ್ಯದ ಕ್ಷಣಕ್ಷಣದ ಮಾಹಿತಿಯನ್ನು ಪಡೆಯಹುದು.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, February 4, 2020, 14:11 [IST]
Other articles published on Feb 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X