Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೆಲ್ಲಿಂಗ್ಟನ್, ಟಿ20: ದುರ್ಬಲ ಬ್ಯಾಟಿಂಗ್‌ನಿಂದ ಕಿವೀಸ್‌ಗೆ ತಲೆಬಾಗಿದ ಭಾರತ

India vs New Zealand, 1st T20, LIVE Cricket Score

ವೆಲ್ಲಿಂಗ್ಟನ್, ಫೆಬ್ರವರಿ 6: ವೆಲ್ಲಿಂಗ್ಟನ್‌ನ ವೆಸ್ಟ್‌ಪ್ಯಾಕ್ ಸ್ಟೇಡಿಯಂನಲ್ಲಿ ಬುಧವಾರ (ಫೆಬ್ರವರಿ 6) ನಡೆದ ಭಾರತ-ನ್ಯೂಜಿಲ್ಯಾಂಡ್ ನಡುವಣ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ 80 ರನ್ ಹೀನಾಯ ಸೋಲನುಭವಿಸಿದೆ. ದುರ್ಬಲ ಬ್ಯಾಟಿಂಗ್‌ಗೆ ಬೆಲೆ ತೆತ್ತಿರುವ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0ಯ ಹಿನ್ನಡೆ ಅನುಭವಿಸಿದೆ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44085

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಕಿವೀಸ್‌ಗೆ ಆರಂಭಿಕ ಆಟಗಾರ ಟಿಮ್ ಸೈಫರ್ಟ್ ಅವರ ಭರ್ಜರಿ ಬೆಂಬಲ ದೊರೆಯಿತು. ಸೈಫರ್ಟ್ 84, ಕಾಲಿನ್ ಮುನ್ರೋ 34, ನಾಯಕ ಕೇನ್ ವಿಲಿಯಮ್ಸನ್ 34 ರನ್ ನೆರವಿನೊಂದಿಗೆ ನ್ಯೂಜಿಲ್ಯಾಂಡ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 219 ರನ್ ಪೇರಿಸಿತು.

ಕಿವೀಸ್ ನೀಡಿದ 220 ಗರಿಷ್ಠ ರನ್ ಗುರಿ ಬೆನ್ನತ್ತಿದ ಭಾರತದ ಬೆಂಬಲಕ್ಕೆ ಬ್ಯಾಟಿಂಗ್‌ ವಿಭಾಗ ನಿಲ್ಲಲಿಲ್ಲ. ದುರಾದೃಷ್ಟಕರ ಸಂಗತಿಯೆಂದರೆ ತಂಡದ ನಾಯಕ, ಆರಂಭಿಕ ಆಟಗಾರ ರೋಹಿತ್ ಶರ್ಮಾ 1, ಶಿಖರ್ ಧವನ್ 29, ವಿಜಯ್ ಶಂಕರ್ 27, ರಿಷಬ್ ಪಂತ್ 4 ರನ್‌ನೊಂದಿಗೆ ನಿರ್ಗಮಿಸಿದರು.

ಎಂಎಸ್ ಧೋನಿ ಕೊಂಚ ನಿರೀಕ್ಷೆ ಮೂಡಿಸಿದರಾದರೂ ಅವರೂ 39 ರನ್ ಬಳಿಕ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ಅಂತೂ ಇಡೀ ತಂಡ ವಿಕೆಟ್ ಕಾವಲು ಕಾಯುವಲ್ಲಿ ವಿಫಲವಾಯಿತು. ಹೀಗಾಗಿ ಭಾರತ 19.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 139 ರನ್ ಪೇರಿಸುವುದರೊಂದಿಗೆ ತಲೆ ಬಾಗಿತು.

ನ್ಯೂಜಿಲ್ಯಾಂಡ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಟಿಮ್ ಸೌಥೀ 3, ಲಾಕೀ ಫರ್ಗುಸನ್, ಮಿಚೆಲ್ ಸಾಂಟ್ನರ್, ಇಶ್ ಸೋಧಿ ತಲಾ 2 ವಿಕೆಟ್ ಕೆಡವಿ ಪಾರಮ್ಯ ಮೆರೆದರು. ಕೇವಲ 43 ಎಸೆತಗಳಿಗೆ 84 ರನ್ ಸಿಡಿಸಿದ ಟಿಮ್ ಸೈಫರ್ಟ್ ಪಂದ್ಯಶ್ರೇಷ್ಠರೆನಿಸಿದರು.

ನ್ಯೂಜಿಲ್ಯಾಂಡ್ ತಂಡ: ಕಾಲಿನ್ ಮುನ್ರೋ, ಟಿಮ್ ಸೈಫರ್ಟ್ (W), ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಡೇರಿಲ್ ಮಿಚೆಲ್, ಕಾಲಿನ್ ಡಿ ಗ್ರಾಂಡ್ಹೋಮ್ಮೆ, ಮಿಚೆಲ್ ಸ್ಯಾಂಟ್ನರ್, ಸ್ಕಾಟ್ ಕುಗ್ಲೆಲೀಜನ್, ಟಿಮ್ ಸೌಥಿ, ಇಶ್ ಸೋಧಿ, ಲಾಕೀ ಫರ್ಗುಸನ್.

ಭಾರತ ತಂಡ: ರೋಹಿತ್ ಶರ್ಮಾ (ಸಿ), ಶಿಖರ್ ಧವನ್, ರಿಷಬ್ ಪಂತ್, ವಿಜಯ್ ಶಂಕರ್, ದಿನೇಶ್ ಕಾರ್ತಿಕ್, ಎಂಎಸ್ ಧೋನಿ (ಡಬ್ಲ್ಯೂ), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಭುವನೇಶ್ವರ ಕುಮಾರ್, ಯುಜುವೇಂದ್ರ ಚಾಹಲ್, ಕೆ ಖಲೀಲ್ ಅಹ್ಮದ್.

Story first published: Wednesday, February 6, 2019, 16:06 [IST]
Other articles published on Feb 6, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+