Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ನ್ಯೂಜಿಲೆಂಡ್ ಟೆಸ್ಟ್ live ಸ್ಕೋರ್ : ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 144/4

India vs New Zealand, 1st Test day 3 live score

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನೆಡೆ ಅನುಭವಿಸಿದೆ. ಈ ಮೂಲಕ ಕೀವಿಸ್ ತಂಡ ಟೆಸ್ಟ್ ಪಂದ್ಯದ ಮೇಲಿನ ಬಿಗಿ ಹಿಡಿತವನ್ನು ಮೂರನೇ ದಿನವೂ ಮುಂದುವರಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಅಜಿಂಕ್ಯಾ ರಹಾನೆ ಮತ್ತು ಹನುಮ ವಿಹಾರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

1
46211

ಮೂರನೇ ದಿನದ ಲಂಚ್ ಬ್ರೇಕ್ ಹೊತ್ತಿಗೆ ನ್ಯೂಜಿಲೆಂಡ್ ತಂಡ 348 ರನ್ ಗಳಿಸಿ ಆಲೌಟ್‌ ಆಯಿತು. ಈ ಮೂಲಕ ಟೀಮ್ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿ 183ರನ್‌ಗಳ ಮುನ್ನಡೆಯನ್ನು ಪಡೆದು ಪ್ರವಾಸಿಗರ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.

ನ್ಯೂಜಿಲೆಂಡ್ ಪರವಾದ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡುತ್ತಿರವ ಯುವ ವೇಗಿ ಕೈಲ್ ಜ್ಯಾಮಿಸನ್ ಬೌಲಿಂಗ್ ಬಳಿಕ ಬ್ಯಾಟಿಂಗ್‌ನಲ್ಲೂ ಗಮನ ಸೆಳೆದರು. ಬೌಲಿಂಗ್‌ನಲ್ಲಿ ಟೀಮ್ ಇಂಡಿಯಾದ ನಾಲ್ಕು ವಿಕೆಟ್ ಪಡೆದು ಮಿಂಚಿದ ಜ್ಯಾಮಿಸನ್ ಬ್ಯಾಟಿಂಗ್‌ವೇಳೆ 45 ಎಸೆತಗಳಲ್ಲಿ ಜ್ಯಾಮಿಸನ್ 44 ರನ್ ಗಳಿಸಿದರು. ಇದರಲ್ಲಿ 4 ಸಿಕ್ಸರ್ ಕೂಡಿತ್ತು ಎಂಬುದು ವಿಶೇಷ.

ಇನ್ನಿಂಗ್ಸ್‌ನ ಕೊನೆಯಲ್ಲಿ ಟೀಮ್ ಇಂಡಿಯಾ ಬೌಲರ್‌ಗಳಿಗೆ ಕೀವಿಸ್ ಬಾಲಂಗೋಚಿಗಳು ದೊಡ್ಡ ಸವಾಲಾಗಿ ಪರಿಣಮಿಸಿದರು. ಅದರಲ್ಲೂ ಜ್ಯಾಮಿಸನ್ ಮತ್ತು ಟ್ರೆಂಟ್ ಬೋಲ್ಟ್ ಟೆಸ್ಟ್ ಅನ್ನುವುದನ್ನೇ ಮರೆತು ಬ್ಯಾಟ್ ಬೀಸಲು ಆರಂಭಿಸಿದರು. ಟ್ರೆಂಟ್ ಬೋಲ್ಟ್ 24 ಎಸೆತಗಳಲ್ಲಿ 38 ರನ್ ಗಳಿಸಿ ಜ್ಯಾಮಿಸನ್‌ಗೆ ಉತ್ತಮ ಸಾಥ್ ನೀಡಿದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಮುಂದುವರಿಸಿದ್ದು ಆರಂಭದಲ್ಲಿ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿದೆ. ಸದ್ಯ ಟೀಮ್ ಇಂಡಿಯಾ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಮತ್ತು ಚೇತೇಶ್ವರ್ ಪೂಜಾರ ಆಟವನ್ನು ಮುಂದುವರಿಸಿದ್ದಾರೆ. ಬೌಲಿಂಗ್‌ನಲ್ಲಿ ಇಶಾಂತ್ ಶರ್ಮಾ 5 ವಿಕೆಟ್ ಪಡೆದು ಮಿಂಚಿದ್ದಾರೆ.

Story first published: Sunday, February 23, 2020, 13:19 [IST]
Other articles published on Feb 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+