ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲೆಂಡ್ ಟೆಸ್ಟ್ : ಟೀಮ್ ಇಂಡಿಯಾ 122/5: ಮಳೆಯಿಂದ ಮೊದಲ ದಿನದ ಆಟ ಸ್ಥಗಿತ

India vs New Zealand 1st Test Live Score Wellington

ವೆಲ್ಲಿಂಗ್ಟನ್: ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಆಟಕ್ಕೆ ಮಳೆ ಅಡ್ಡಿಯಾಗಿದೆ. ವೆಲ್ಲಿಂಗ್ಟನ್ ಟೆಸ್ಟ್‌ನ ಮೊದಲ ದಿನದ ಅಂತಿಮ ಸೆಶನ್ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿದೆ. ಹೀಗಾಗಿ ಮೊದಲ ದಿನದ ಆಟವನ್ನು ಸ್ಥಗಿತಗೊಳಿಸಲಾಗಿದೆ.

ಮೊದಲ ದಿನದ ಆಟದಲ್ಲಿ ನ್ಯೂಜಿಲೆಂಡ್‌ ಬೌಲರ್‌ಗಳು ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಟೀಮ್ ಇಂಡಿಯಾದ ಪ್ರಮುಖ ಐದು ವಿಕೆಟ್‌ಗಳನ್ನು ಪಡೆದುಕೊಂಡಿರುವ ಕೀವಿಸ್ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತವನ್ನು ಸಾಧಸಿದ್ದಾರೆ.

ಮೊದಲ ದಿನದ ಸ್ಕೋರ್ ಪಟ್ಟಿ ಹೀಗಿದೆ:

1
46211

ಟೀಮ್ ಇಂಡಿಯಾ 122 ರನ್‌ಗಳನ್ನು ಗಳಿಸಿದ್ದು 5 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಪ್ರಮುಖ ಆಟಗಾರರು ಈಗಾಗಲೆ ಫೆವಿಲಿಯನ್ ಸೇರಿಕೊಂಡಿದ್ದಾರೆ. ಸದ್ಯ ಉಪನಾಯಕ ಅಜಿಂಕ್ಯ ರೆಹಾನೆ ಮತ್ತು ರಿಷಭ್ ಪಂತ್ ಟೀಮ್ ಇಂಡಿಯಾಗೆ ಆಸರೆಯಾಗಿದ್ದಾರೆ.

ಅಂತಾರಾಷ್ಟ್ರೀಯ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ನ್ಯೂಜಿಲೆಂಡ್ ತಂಡದ ಕೈಲ್ ಜ್ಯಾಮಿಸನ್ ಮಿಂಚು ಹರಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಸೇರಿದಂತೆ ಮೂವರು ವಿಕೆಟ್ ಪಡೆಯುವಲ್ಲಿ ಜ್ಯಾಮಿಸನ್ ಯಶಸ್ವಿಯಾಗಿದ್ದಾರೆ.

52 ವರ್ಷಗಳ ಹಿಂದಿನ ಜಯ ಮತ್ತೆ ದಾಖಲಿಸಲಿದೆಯಾ ಟೀಮ್ ಇಂಡಿಯಾ?!52 ವರ್ಷಗಳ ಹಿಂದಿನ ಜಯ ಮತ್ತೆ ದಾಖಲಿಸಲಿದೆಯಾ ಟೀಮ್ ಇಂಡಿಯಾ?!

ಟಿ20 ಸರಣಿಯನ್ನು ಟೀಮ್ ಇಂಡಿಯಾ 5-0 ಅಂತರದಿಂದ ವಶಕ್ಕೆ ಪಡೆದುಕೊಂಡಿತ್ತು. ಅದಾದ ಬಳಿಕ ನಡೆದ ಏಕದಿನ ಸರಣಿಯನ್ನು ನ್ಯೂಜಿಲೆಂಡ್ ತಂಡ 3-0 ಅಂತರದಿಂದ ಭಾರತವನ್ನು ಮಣಿಸಿತು. ಇದೀಗ ಟೆಸ್ಟ್ ಸರಣಿಗಾಗಿ ಎರಡೂ ತಂಡಗಳು ಕಾದಾಟಕ್ಕೆ ಇಳಿದಿವೆ. ಇಲ್ಲಿ ಗೆದ್ದು ವಿಜಯ ಪತಾಕೆ ಯಾರು ಹಾರಿಸುತ್ತಾರೆ ಎಂಬುದು ಸದ್ಯದ ಕುತೂಹಲವಾಗಿದೆ.

ಟೀಮ್ ಇಂಡಿಯಾ ವಿಶ್ವಕಪ್‌ ಬಳಿಕ ನಡೆದ ಎಲ್ಲಾ ಟೆಸ್ಟ್ ಸರಣಿಗಳನ್ನು ಗೆದ್ದುಕೊಳ್ಲುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್‌ನಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಕೀವಿಸ್ ವಿರುದ್ಧದ ಸರಣಿಯನ್ನು ಗೆದ್ದು ಮೊದಲ ಸ್ಥಾನವನ್ನು ಮತ್ತಷ್ಟು ಭದ್ರಗೊಳಿಸಬೇಕೆನ್ನುವ ಇರಾದೆಯಲ್ಲಿದೆ ಟೀಮ್ ಇಂಡಿಯಾ

ಭಾರತ vs ಕೀವಿಸ್ ಟೆಸ್ಟ್: ಬ್ಯಾಟ್ಸ್‌ಮನ್‌ಗಳಿಗೆ ಎದುರಾಗಲಿದೆ ನಿಜವಾದ ಅಗ್ನಿಪರೀಕ್ಷೆಭಾರತ vs ಕೀವಿಸ್ ಟೆಸ್ಟ್: ಬ್ಯಾಟ್ಸ್‌ಮನ್‌ಗಳಿಗೆ ಎದುರಾಗಲಿದೆ ನಿಜವಾದ ಅಗ್ನಿಪರೀಕ್ಷೆ

ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಟೆಸ್ಟ್ ಸಾಧನೆ ಅಷ್ಟಕ್ಕಷ್ಟೇ ಎಂಬಂತಿದೆ. ಈವರೆಗೆ ಆಡಿದ 23 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್‌ನಲ್ಲಿ ಗೆದ್ದಿದ್ದು ಕೇವಲ 5 ಪಂದ್ಯಗಳಲ್ಲಿ ಮಾತ್ರ. 8 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಗೆದ್ದಿದ್ದರೆ ಉಳಿದ 10 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದೆ.

Story first published: Friday, February 21, 2020, 11:06 [IST]
Other articles published on Feb 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X