ಭಾರತ vs ನ್ಯೂಜಿಲೆಂಡ್: ಕಿವೀಸ್ ಪಡೆಗೆ ಸೋಲುಣಿಸಲು ಕಾರಣವಾಗಿದ್ದು ಈ 3 ಪ್ರಮುಖ ಅಂಶಗಳು

ಇತ್ತೀಚೆಗಷ್ಟೇ ಅಂತ್ಯವಾದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಮೊದಲ ಎರಡು ಪಂದ್ಯಗಳಲ್ಲಿ ಮಾಡಿದ ತಪ್ಪಿನಿಂದಾಗಿ ಟಿ20 ಟೂರ್ನಿಯ ಸೆಮಿಫೈನಲ್‌ಗೇರುವಲ್ಲಿಯೂ ವಿಫಲವಾಗಿತ್ತು. ಆದರೆ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಅದ್ಭುತ ಪ್ರದರ್ಶನದಿಂದಾಗಿ ಗೆದ್ದು ಬೀಗಿದೆ. ಅದರಲ್ಲೂ ಟೀಮ್ ಇಂಡಿಯಾ ಟಿ20 ತಂಡದ ನಾಯಕತ್ವ ಹಾಗೂ ಕೋಚಿಂಗ್ ವಿಭಾಗ ಬದಲಾವಣೆಯಾಗಿರುವ ಕಾರಣ ಈ ಗೆಲುವು ತಂಡಕ್ಕೆ ಬಹಳ ಪ್ರಮುಖವಾಗಿದೆ.
ಈ ಪಂದ್ಯದ ಮೂಲಕ ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಿಕೊಂಡಿದ್ದರೆ ರಾಹುಲ್ ದ್ರಾವಿಡ್ ನೂತನ ಮುಖ್ಯ ಕೋಚ್ ಆಗಿ ಕರ್ತವ್ಯ ಆರಂಭಿಸಿದ್ದಾರೆ. ಈ ಇಬ್ಬರಿಗೂ ಕೂಡ ಅತ್ಯುತ್ತಮವಾದ ಆರಂಭ ದೊರೆತಿರುವ ಕಾರಣ ಆತ್ಮ ವಿಶ್ವಾಸ ಹೆಚ್ಚಾಗಿದೆ. ಆದರೆ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಲು ಕೆಲ ಅಂಶಗಳು ಪ್ರಮುಖ ಪಾತ್ರವಹಿಸಿದೆ ಎಂಬುದು ಗಮನಾರ್ಹ. ಅದರಲ್ಲೂ ಟಿ20 ಫೈನಲ್‌ಗೆ ಪ್ರವೇಶಿಸಿದ್ದ ಆತ್ಮ ವಿಶ್ವಾಸದಲ್ಲಿದ್ದ ಕಿವೀಸ್ ಪಡೆಯನ್ನು ಕಟ್ಟಿ ಹಾಕುವಲ್ಲಿ ತಂಡದ ರಣತಂತ್ರ ಬಹಳ ಮುಖ್ಯವಾಗಿದೆ.
ಹೀಗಾಗಿ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಗೆಲುವು ಸಾಧಿಸಲು ಕಾರಣವಾದ ಪ್ರಮುಖ ಮೂರು ಅಂಶಗಳು ಯಾವುದು ಎಂಬ ಬಗ್ಗೆ ಈ ವರದಿಯಲ್ಲಿ ನೋಡೋಣ..

ಕರುಣ್ ಭರ್ಜರಿ ಆಟ, ಸಾಧಾರಣ ಗುರಿ ನೀಡಿದ ಕರ್ನಾಟಕ
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಕರ್ನಾಟಕ ಉತ್ತಮ ಆರಂಬ ಪಡೆಯುವಲ್ಲಿ ವಿಫಲವಾಯಿತು. ನಂತರ ತಂಡದ ಮೊತ್ತವು ಕೂಡ ನಿಧಾನಗತಿಯಲ್ಲಿ ಸಾಗಿತ್ತು. ಕರ್ನಾಟಕದ ರನ್‌ವೇಗವನ್ನು ಹೆಚ್ಚಿಸಿದ್ದು ಅನುಭವಿ ಆಟಗಾರ ಕರುಣ್ ನಾಯರ್. 29 ಎಸೆತ ಎದುರಿಸಿದ ಕರುಣ್ ಭರ್ಜರಿ 55 ರನ್ ಬಾರಿಸಿ ತಂಡ ಗೌರವದ ಮೊತ್ತ ಗಳಿಸಲು ಕಾರಣವಾದರು. ರೋಹನ್ ಕದಮ್ 29 ಎಸೆತಗಳಲ್ಲಿ 30 ರನ್ ಗಳಿಸಿದರೆ ನಾಯಕ ಮನೀಶ್ ಪಾಂಡೆ 34 ಎಸೆತಗಳಲ್ಲಿ 29 ರನ್‌ಗಳಿಸಿದರು. ಅಂತಿಮವಾಗಿ ಕರ್ನಾಟಕ ನಿಗದಿತ 20 ಓವರ್‌ಗಳಲ್ಲಿ 160 ರನ್‌ಗಳಿಸಲು ಶಕ್ತವಾಯಿತು.

ಬಂಗಾಳದ ಹೋರಾಟ
ಈ ಮೊತ್ತವನ್ನು ಬೆನ್ನಟ್ಟಿದ ಬಂಗಾಳ ಮೊದಲ ಓವರ್‌ನಲ್ಲಿಯೇ 20 ರನ್‌ಗಳಿಸುವ ಮೂಲಕ ಅಬ್ಬರಿಸುವ ಸೂಚನೆ ನೀಡಿತ್ತು. ಆದರೆ ವಿದ್ಯಾದರ್ ಪಾಟೀಲ್ ಎರಡನೇ ಓವರ್‌ನ ಮೊದಲ ಎಸೆತದಲ್ಲಿಯೇ ಈ ಜೋಡಿಯನ್ನು ಬೇರ್ಪಡಿಸಿ ಕರ್ನಾಟಕಕ್ಕೆ ಮೊದಲ ಯಶಸ್ಸು ದೊರಕಿಸಿದರು. ನಂತರ ಬಂಗಾಳ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೂ ಕೂಡ ಮತ್ತೊಂದು ತುದಿಯಲ್ಲಿ ವೃತ್ತಿಕ್ ಚಟರ್ಜೀ ಕರ್ನಾಟಕಕ್ಕೆ ಕಾಲ ಕಾಡಿದರು. 40 ಎಸೆತಗಳಲ್ಲಿ 51 ರನ್‌ಗಳಿಸಿದ ವೃತ್ತಿಕ್ ಚಟರ್ಜಿಯನ್ನು ದರ್ಶನ್ ಎಂಬಿ ಔಟ್ ಮಾಡುವ ಮೂಲಕ ಕರ್ನಾಟಕಕ್ಕೆ ಮೇಲುಗೈ ಒದಗಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ತಂಡ 108 ರನ್‌ಗಳಿಗೆ 6 ವಿಕೆಟ್ ಪಡೆದುಕೊಂಡು ಗೆಲುವಿನ ಆತ್ಮ ವಿಶ್ವಾಸದಲ್ಲಿತ್ತು. ಆದರೆ ಕ್ರೀಸ್‌ನಲ್ಲಿದ್ದ ರಿತ್ವಿಕ್ ಚೌಧರಿ ಬಂಗಾಳದ ಗೆಲುವಿನ ಅವಕಾಶವನ್ನು ತೆರೆದಿಟ್ಟರು. 18 ಎಸೆತಗಳಲ್ಲಿ 36 ರನ್ ಸಿಡಿಸಿದ ರಿತ್ವಿಕ್ ಕರ್ನಾಟಕದಿಂದ ಜಯವನ್ನು ಬಹುತೇಕ ಕಸಿದಿದ್ದರು. ಆದರೆ ಅಂತಿಮ ಎಸೆತವನ್ನು ಎದುರಿಸಲು ಸ್ಟ್ರೈಕ್‌ನಲ್ಲಿದ್ದ ಆಕಾಶ್ ದೀಪ್ ರನೌಟ್ ಆಗುವ ಮೂಲಕ ಕರ್ನಾಟಕ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಸೂಪರ್ ಓವರ್‌ನಲ್ಲಿ ಕರ್ನಾಟಕಕ್ಕೆ ಗೆಲುವು
ಇನ್ನು ಈ ಕ್ವಾರ್ಟರ್‌ಫೈನಲ್ ಪಂದ್ಯ ರೋಚಕ ಟೈ ಫಲಿತಾಂಶವನ್ನು ಕಂಡ ಕಾರಣ ಸೂಪರ್ ಓವರ್‌ನಲ್ಲಿ ಪಲಿತಾಂಶವನ್ನು ಪಡೆಯಲಾಯಿತು. ಈ ಸೂಪರ್ ಓವರ್‌ನಲ್ಲಿ ಬಂಗಾಳ ಮೊದಲಿಗೆ ಬ್ಯಾಟಿಂಗ್ ನಡೆಸಿತು. ಕರ್ನಾಟಕದ ಪರವಾಗಿ ಬೌಲಿಂಗ್ ದಾಳಿಗಿಳಿದ ಕಾರಿಯಪ್ಪ ಅದ್ಭುತ ಪ್ರದರ್ಶನ ನೀಡಿ ಬಂಗಾಳವನ್ನು ಕೇವಲ 5 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಕರ್ನಾಟಕ ಸೆಮಿಫೈನಲ್‌ಗೆ ಪ್ರವೇಶಿಸಲು ಒಂದು ಓವರ್‌ನಲ್ಲಿ 6 ರನ್‌ಗಳಿಸುವ ಸವಾಲು ಪಡೆಯಿತು. ಕರ್ನಾಟಕ ಪರವಾಗಿ ಬ್ಯಾಟಿಂಗ್‌ಗೆ ನಾಯಕ ಮನೀಶ್ ಪಾಂಡೆ ಹಾಗೂ ಕರುಣ್ ನಾಯರ್ ಕಣಕ್ಕಿಳಿದರು. ಮೊದಲ ಎಸೆತದಲ್ಲಿ ಮನೀಶ್ ಪಾಂಡೆ ಎರಡು ರನ್ ಗಳಿಸಿದರು. ಮುಖೇಶ್ ಕುಮಾರ್ ಎಸೆದ ಎರಡನೇ ಎಸೆತವನ್ನು ಮನೀಶ್ ಪಾಂಡೆ ಭರ್ಜರಿಯಾಗಿ ಸಿಕ್ಸರ್‌ಗೆ ಅಟ್ಟಿದರು. ಈ ಮೂಲಕ ಕರ್ನಾಟಕ ಅದ್ಭುತವಾದ ಗೆಲುವು ಸಾಧಿಸಿದೆ. ಈ ಗೆಲುವು ಕರ್ನಾಟಕಕ್ಕೆ ಸೆಮಿಫೈನಲ್‌ನ ಟಿಕೆಟ್ ನೀಡಿದೆ. ಸೆಮಿಫೈನಲ್‌ನಲ್ಲಿ ಕರ್ನಾಟಕ ವಿದರ್ಭ ತಂಡವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications