Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೇ ಓವಲ್, 2ನೇ ಏಕದಿನ: 90 ರನ್‌ನಿಂದ ನ್ಯೂಜಿಲ್ಯಾಂಡ್ ಮಣಿಸಿದ ಭಾರತ

India vs New Zealand, 2nd ODI Live Cricket Score

ಮೌಂಟ್ ಮೌಂಗನ್ಯುಯಿ, ಜನವರಿ 26: ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಭಾರತ ಇಂದು (ಜನವರಿ 26) ಮೌಂಟ್ ಮೌಂಗನ್ಯುಯಿಯಲ್ಲಿನ ಬೇ ಓವಲ್ ಸ್ಟೇಡಿಯಂನಲ್ಲಿ ನಡೆದ ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ 90 ರನ್ ಭರ್ಜರಿ ಗೆಲುವನ್ನಾಚರಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದ ಅತ್ಯುತ್ತಮ ಪ್ರದರ್ಶನದಿಂದ ಭಾರತ ಈ ಗೆಲುವಿನೊಂದಿಗೆ ಸರಣಿಯಲ್ಲಿ 2-0ಯ ಮುನ್ನಡೆ ಗಳಿಸಿದೆ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44081

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಟೀಮ್ ಇಂಡಿಯಾ ಪರ ಶಿಖರ್ ಧವನ್ 66, ರೋಹಿತ್ ಶರ್ಮಾ 87, ವಿರಾಟ್ ಕೊಹ್ಲಿ 43, ಅಂಬಾಟಿ ರಾಯುಡು 47, ಎಂಎಸ್ ಧೋನಿ ಅಜೇಯ 48, ಕೇದಾರ್ ಜಾಧವ್ ಅಜೇಯ 22 ರನ್ ಸೇರಿಸಿದರು. ಹೀಗಾಗಿ ಭಾರತ 50 ಓವರ್‌ ಮುಕ್ತಾಯಕ್ಕೆ 4 ವಿಕೆಟ್ ಕಳೆದು ಭರ್ಜರಿ 324 ರನ್ ಕಲೆ ಹಾಕಿತ್ತು.

ಗುರಿ ಬೆನ್ನತ್ತಿದ ಕಿವೀಸ್ ಬ್ಯಾಟ್ಸ್ಮನ್‌ಗಳ ವಿರುದ್ಧ ಭಾರತದ ಬೌಲರ್‌ಗಳು ಮಾರಕ ದಾಳಿ ನಡೆಸಿದರು. ಡೌಗ್ ಬ್ರೇಸ್ವೆಲ್ ಗಮನಾರ್ಹ 57 ರನ್ ಬಾರಿಸಿದ್ದು ಬಿಟ್ಟರೆ, ಮಾರ್ಟಿನ್ ಗಪ್ಟಿಲ್ 15, ನಾಯಕ ಕೇನ್ ವಿಲಿಮ್ಸನ್ 20, ಕಾಲಿನ್ ಮುನ್ರೋ (31), ರಾಸ್ ಟೇಲರ್ (22) ವಿಕೆಟ್ ಒಪ್ಪಿಸಿದ್ದು ಆತಿಥೇಯರ ಹಿನ್ನಡೆಗೆ ಕಾರಣವಾಯ್ತು.

ಭಾರತದ ನೀಡಿದ್ದ 325 ಗರಿಷ್ಠ ರನ್‌ ಗುರಿಯ ಬೆನ್ನುಬಿದ್ದ ನ್ಯೂಜಿಲ್ಯಾಂಡ್ 40.2 ಓವರ್‌ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 234 ರನ್ ಪೇರಿಸಿ ಶರಣಾಯಿತು. ಕುಲದೀಪ್ ಯಾದವ್ 4, ಭುವನೇಶ್ವರ್ ಕುಮಾರ್ ಮತ್ತು ಯುಜುವೇಂದ್ರ ಚಾಹಲ್ ತಲಾ 2 ವಿಕೆಟ್‌ನೊಂದಿಗೆ ಮಿಂಚಿದರು. ಹಿಟ್ ಮ್ಯಾನ್ ರೋಹಿತ್ ಶರ್ಮಾ ಪಂದ್ಯಶ್ರೇಷ್ಠರೆನಿಸಿದರು.

ಐದು ಪಂದ್ಯಗಳ ಈ ಏಕದಿನ ಸರಣಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ 8 ವಿಕೆಟ್ ಸುಲಭ ಜಯ ಸಾಧಿಸುವುದರೊಂದಿಗೆ 1-0ಯ ಮುನ್ನಡೆಯಲ್ಲಿತ್ತು. ಈ ಪಂದ್ಯದ ಗೆಲುವಿನೊಂದಿಗೆ ಟೀಮ್ ಇಂಡಿಯಾ ಈಗ 2-0ಯ ಮುನ್ನಡೆಯಲ್ಲಿದೆ. ಏಕದಿನ ಸರಣಿ ವಶವಾಗಲು ಇನ್ನೊಂದೇ ಗೆಲುವು ಬಾಕಿಯಿದೆ.

ನ್ಯೂಜಿಲ್ಯಾಂಡ್ ತಂಡ: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮುನ್ರೋ, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಟಾಮ್ ಲ್ಯಾಥಮ್ (ವಿಕ್), ಹೆನ್ರಿ ನಿಕೋಲ್ಸ್, ಕೋಲಿನ್ ಡಿ ಗ್ರ್ಯಾಂಡ್ಹೊಮ್ಮೆ, ಡೌಗ್ ಬ್ರೇಸ್ವೆಲ್, ಲಾಕಿ ಫರ್ಗುಸನ್, ಇಶ್ ಸೊಧಿ, ಟ್ರೆಂಟ್ ಬೌಲ್ಟ್.

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಅಂಬಾಟಿ ರಾಯುಡು, ಎಂಎಸ್ ಧೋನಿ (ವಿ.ಕೆ), ಕೇದಾರ್ ಜಾಧವ್, ವಿಜಯ್ ಶಂಕರ್, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್.

Story first published: Saturday, January 26, 2019, 14:54 [IST]
Other articles published on Jan 26, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+