Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ನ್ಯೂಜಿಲೆಂಡ್‌: 2ನೇ ಟಿ20ಗೆ ಭಾರತ ತಂಡ ಬದಲಾಗುತ್ತಾ?!

India vs New Zealand, 2nd T20I: India Probable XI

ಆಕ್ಲೆಂಡ್‌, ಜನವರಿ 25: ಆಕ್ಲೆಂಡ್‌ನಲ್ಲಿ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ ಆತಿಥೇಯ ನ್ಯೂಜಿಲೆಂಡನ್ನು ಸೋಲಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು. ಭಾರತಕ್ಕೆ ಕಿವೀಸ್ ಸವಾಲಿನ ರನ್ ಗುರಿಯನ್ನೇ ನೀಡಿತ್ತಾದರೂ ಕೆಎಲ್ ರಾಹುಲ್ (56 ರನ್) ಮತ್ತು ಶ್ರೇಯಸ್ ಐಯ್ಯರ್ (58 ರನ್‌) ಸ್ಫೋಟಕ ಅರ್ಧ ಶತಕ ವಿರಾಟ್ ಕೊಹ್ಲಿ ಪಡೆಗೆ ಗೆಲುವಿನ ಉಡುಗೊರೆ ನೀಡಿತ್ತು.

ಮೊದಲ ಪಂದ್ಯದಲ್ಲಿ ನಾಯಕ ಕೊಹ್ಲಿಯ 45 ರನ್ ಸೇರ್ಪಡೆಯೊಂದಿಗೆ ಭಾರತ 6 ವಿಕೆಟ್ ಗೆಲುವನ್ನಾಚರಿಸಿತ್ತು. ಇದೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಈಗ 1-0ಯ ಮುನ್ನಡೆಯಲ್ಲಿದೆ. ದ್ವಿತೀಯ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಿರುಗಿಬೀಳುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

ದ್ವಿತೀಯ ಟಿ20, ಆಕ್ಲೆಂಡ್‌ನ ಈಡನ್ ಗಾರ್ಡನ್ ಸ್ಟೇಡಿಯಂನಲ್ಲೇ ನಡೆಯಲಿದ್ದು, 12.30 pmಗೆ ಪಂದ್ಯ ಆರಂಭಗೊಳ್ಳಲಿದೆ. ಆರಂಭಿಕ ಟಿ20ಯಲ್ಲಿ ಆಡಿದ್ದ ಅದೇ ತಂಡ ಎರಡನೇ ಪಂದ್ಯದಲ್ಲೂ ಮೈದಾನಕ್ಕಿಳಿಯುವ ಸಾಧ್ಯತೆ ಹೆಚ್ಚು. ಆದರೆ ಸಣ್ಣ ಬದಲಾವಣೆಯಾದರೂ ಅಚ್ಚರಿಯಿಲ್ಲ.

2ನೇ ಟಿ20ಗೆ ಭಾರತ ಸಂಭಾವ್ಯ ತಂಡ: ಕೆ.ಎಲ್. ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಮ್ ದೂಬೆ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್/ನವದೀಪ್ ಸೈನಿ, ಯುಜುವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ.

Story first published: Saturday, January 25, 2020, 20:38 [IST]
Other articles published on Jan 25, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+