ಬೇ ಓವಲ್: 7 ವಿಕೆಟ್‌ಗಳಿಂದ ಕಿವೀಸ್ ಬಗ್ಗುಬಡಿದ ಭಾರತ, ಏಕದಿನ ಸರಣಿ ವಶಕ್ಕೆ


ಮೌಂಟ್‌ಮೌಂಗನ್ಯುಯಿ, ಜನವರಿ 28: ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಎರಡೂ ಏಕದಿನ ಪಂದ್ಯಗಳಲ್ಲಿ ಜಯ ಗಳಿಸಿರುವ ಭಾರತ ಸೋಮವಾರ (ಜನವರಿ 28) ಮೌಂಟ್‌ಮೌಂಗನ್ಯುಯಿಯ ಬೇ ಓವಲ್‌ನಲ್ಲಿನ 3ನೇ ಪಂದ್ಯದಲ್ಲೂ 7 ವಿಕೆಟ್ ಭರ್ಜರಿ ಜಯಗಳಿಸಿದೆ. ಇದರೊಂದಿಗೆ ಐದು ಪಂದ್ಯಗಳ ಏಕದಿನ ಸರಣಿ 3-0ಯಿಂದ ಭಾರತದ ಮಡಿಲಿಗೆ ಬಿದ್ದಿದೆ.
ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟೀಮ್ ಇಂಡಿಯಾದ ದಿಟ್ಟ ಬ್ಯಾಟಿಂಗ್ ಮತ್ತು ಉತ್ತಮ ಬೌಲಿಂಗ್ ದಾಳಿ ಸರಣಿ ಜಯಿಸುವಲ್ಲಿ ನೆರವು ನೀಡಿದೆ. ರೋಹಿತ್ ಶರ್ಮಾ (62) ಮತ್ತು ವಿರಾಟ್ ಕೊಹ್ಲಿ (60) ನೀಡಿದ ಅರ್ಧ ಶತಕ ಬ್ಯಾಟಿಂಗ್ ವಿಭಾಗದಲ್ಲಿ ನೆರವಾದರೆ, ಮೊಹಮ್ಮದ್ ಶಮಿ 3, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದು ಬೌಲಿಂಗ್‌ನಲ್ಲಿ ತಂಡವನ್ನು ಬೆಂಬಲಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಕೇನ್ ವಿಲಿಯಮ್ಸನ್ ಬಳಗ, ರಾಸ್ ಟೇಲರ್ (93) ಅಬ್ಬರದ ಬ್ಯಾಟಿಂಗ್ ಬೆಂಬಲದಿಂದ 49 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 243 ರನ್ ಗಳಿಸಿತ್ತು. ನ್ಯೂಜಿಲ್ಯಾಂಡ್ ನೀಡಿದ 244 ರನ್ ಗುರಿ ಬೆನ್ನತ್ತಿದ ಭಾರತ 43 ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 245 ರನ್ ಪೇರಿಸಿ ಸಂಭ್ರಮಾಚರಿಸಿತು.
ಹಿಂದಿನ ಎರಡೂ ಪಂದ್ಯಗಳನ್ನು ಹೀನಾಯವಾಗಿ ಸೋತಿದ್ದ ನ್ಯೂಜಿಲ್ಯಾಂಡ್ ಈ ಪಂದ್ಯದಲ್ಲೂ ಎಚ್ಚರಿಕೆಯ ಆಟ ಆಡುವಲ್ಲಿ ಎಡವಿತು. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಕಿವೀಸ್ ಆರಂಭಿಕ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಮಾರ್ಟಿನ್ ಗಪ್ಟಿಲ್ 13, ಕಾಲಿನ್ ಮುನ್ರೋ 7 ರನ್ನಿಗೆ ಪೆವಿಲಿಯನ್ ದಾರಿ ಹಿಡಿದರು.
ಆದರೆ ನಾಯಕ ಕೇನ್ ವಿಲಿಯಮ್ಸನ್ 28, ಟೇಲರ್ 93, ಟಾಮ್ ಲ್ಯಾಥಮ್ 51 ರನ್ ಕೊಡುಗೆ ನ್ಯೂಜಿಲ್ಯಾಂಡ್ ತಂಡವನ್ನು ರನ್ ಕುಸಿತದಿಂದ ಕೊಂಚ ಪಾರು ಮಾಡಿತು. ಇನ್ನೂ ಎರಡು ಪಂದ್ಯಗಳು ನಡೆಯಲಿದ್ದು, ಅವು ಔಪಚಾರಿಕ ಆದರೆ ಪ್ರತಿಷ್ಠೆಯ ಪಂದ್ಯಗಳಾಗಿರಲಿವೆ. 3ನೇ ಪಂದ್ಯದಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠರೆನಿಸಿದರು.
ನ್ಯೂಜಿಲ್ಯಾಂಡ್ ತಂಡ: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮುನ್ರೋ, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಟಾಮ್ ಲ್ಯಾಥಮ್ (ವಿಕ್), ಹೆನ್ರಿ ನಿಕೋಲ್ಸ್, ಮಿಚೆಲ್ ಸ್ಯಾಂಟ್ನರ್, ಡೌಗ್ ಬ್ರೇಸ್ವೆಲ್, ಇಶ್ ಸೋಧಿ, ಲಾಕೀ ಫರ್ಗುಸನ್, ಟ್ರೆಂಟ್ ಬೌಲ್ಟ್.
ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಅಂಬಾಟಿ ರಾಯುಡು, ಕೇದಾರ ಜಾಧವ್, ದಿನೇಶ್ ಕಾರ್ತಿಕ್ (ವಿ.ಕೆ), ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications