ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲೆಂಡ್ : ಮೂರನೇ ಪಂದ್ಯದಲ್ಲೂ ಭಾರತಕ್ಕೆ ಸೋಲೇ ಗತಿ

IND vs NZ 3rd ODI : Team India start the innings with a openers failing to go big | virat kohli
India Vs New Zealand, 3rd ODI, Live Updates Bay Oval

ಮೂರನೇ ಪಂದ್ಯದಲ್ಲೂ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡದ ಎದುರು ಶರಣಾಗಿದೆ. ಈ ಮೂಲಕ ಏಕದಿನ ಸರಣಿಯ ಎಲ್ಲಾ ಪಂದ್ಯಗಳನ್ನು ಕೈಚೆಲ್ಲಿದ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಅವಮಾನಕ್ಕೆ ತುತ್ತಾಗಿದೆ.

ಇಂದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ಮತ್ತೆ ಬೌಲಿಂಗ್ ವಿಭಾಗ ವೈಫಲ್ಯವನ್ನು ಕಂಡಿತು. ಅನಿವಾರ್ಯ ಸಂದರ್ಭಗಳಲ್ಲಿ ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ಒತ್ತಡ ಹೇರುವಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಕೀವಿಸ್ ತಂಡಕ್ಕೆ ಉತ್ತಮ ಆರಂಭ ದೊರಕಿತು. ಮೊದಲ ವಿಕೆಟ್‌ಗೆ ಆರಂಭಿಕ ಆಟಗಾರರು ಶತಕದ ಜೊತೆಯಾಟವನ್ನು ನೀಡಿದ್ದಾರೆ. ನಿಕೋಲಸ್ 80 ರನ್ ಗಳಿಸಿದರೆ, ಗಪ್ಟಿಲ್ 66 ರನ್‌ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಟ ದೊರಕದಿದ್ದರೂ ಅಂತಿಮವಾಗಿ ಕಾಲಿನ್ ಗ್ರಾಂಡ್‌ಹೋಮ್ 28 ಎಸೆತಕ್ಕೆ 58 ರನ್‌ ಸಿಡಿಸಿ ಭಾರತದಿಂದ ಗೆಲುವನ್ನು ಸಂಪೂರ್ಣವಾಗಿ ಭಾರತದಿಂದ ಕಿತ್ತುಕೊಂಡರು

ಭವಿಷ್ಯದಲ್ಲಿ ಲೆಜೆಂಡ್ ಎನಿಸಬಲ್ಲ ಆಟಗಾರ ಸದ್ಯ ಈತನೊಬ್ಬನೇಭವಿಷ್ಯದಲ್ಲಿ ಲೆಜೆಂಡ್ ಎನಿಸಬಲ್ಲ ಆಟಗಾರ ಸದ್ಯ ಈತನೊಬ್ಬನೇ

ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದು ಬದಲಾವಣೆಯನ್ನು ಮಾಡಿಕೊಂಡಿದೆ. ಕೇದಾರ್ ಜಾಧವ್ ಹೊರಗಿಟ್ಟು ಕನ್ನಡಿಗ ಮನೀಶ್ ಪಾಂಡೆಗೆ ಅವಕಾಶವನ್ನು ನೀಡಿಲಾಗಿದೆ. ಟಿ20 ಸರಣಿಯಲ್ಲಿ ಅಬ್ಬರಿಸಿದ್ದ ಮನೀಶ್ ಪಾಂಡೆಯನ್ನು ಮೊದಲೆರಡು ಏಕದಿನ ಪಂದ್ಯಗಳಲ್ಲಿ ಆಡುವ ಬಳಗದಿಂದ ಹೊರಗಿಡಲಾಗಿತ್ತು.

ನ್ಯೂಜಿಲೆಂಡ್‌ ತಂಡದಲ್ಲೂ ಪ್ರಮುಖ ಬದಲಾವಣೆಯೊಂದು ನಡೆದಿದೆ. ಕಿವೀಸ್ ನಾಯಕ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಗಾಯಗೊಂಡಿದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲೆಡು ಪಂದ್ಯಗಳಿಂದ ಹೊರಗುಳಿದಿದ್ದರು.

U-19 ಚಾಂಪಿಯನ್ ಆದ ಬಾಂಗ್ಲಾ ವರ್ತನೆ ಜಂಟಲ್‌ಮೆನ್ ಗೇಮ್‌ಗೆ ಅವಮಾನ ! ವಿಡಿಯೋU-19 ಚಾಂಪಿಯನ್ ಆದ ಬಾಂಗ್ಲಾ ವರ್ತನೆ ಜಂಟಲ್‌ಮೆನ್ ಗೇಮ್‌ಗೆ ಅವಮಾನ ! ವಿಡಿಯೋ

ಟೀಮ್ ಇಂಡಿಯಾ ಆಡುವಬ ಬಳಗ: ಪೃಥ್ವಿ ಶಾ, ಮಾಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಲೋಕೇಶ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ.

ನ್ಯೂಜಿಲೆಂಡ್ ಆಡುವ ಬಳಗ: ಮಾರ್ಟಿನ್ ಗುಪ್ಟಿಲ್, ಹೆನ್ರಿ ನಿಕೋಲ್ಸ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಟಾಮ್ ಲಾಥಮ್ ವಿಕೆಟ್ ಕೀಪರ್), ಜೇಮ್ಸ್ ನೀಶಮ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಕೈಲ್ ಜೇಮೀಸನ್, ಹಮೀಶ್ ಬೆನೆಟ್

Story first published: Tuesday, February 11, 2020, 15:22 [IST]
Other articles published on Feb 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X