ಭಾರತ vs ಕೀವಿಸ್: ಕ್ಲೀನ್‌ಸ್ವೀಪ್ ಅವಮಾನದಿಂದ ಪಾರಾಗುತ್ತಾ ಟೀಮ್ ಇಂಡಿಯಾ?

ಬೇ ಓವಲ್: ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದ ಟೀಮ್ ಇಂಡಿಯಾ ಏಕದಿನದಲ್ಲಿ ಅದೇ ಅವಮಾನವನ್ನು ಎದುರಿಸಲಿದ್ಯಾ? ಈ ಅವಮಾನದಿಂದ ಪಾರಾಗಬೇಕಾದರೆ ಒಂದೇ ದಾರಿ. ಅದು ನಾಳಿನ ಪಂದ್ಯವನ್ನು ಗೆಲ್ಲುವುದು. ಇದನ್ನು ಹೊರತು ಪಡಿಸಿದರೆ ಯಾವುದೇ ಅವಕಾಶವೂ ಟೀಮ್ ಇಂಡಿಯಾ ಮುಂದಿಲ್ಲ.
ಮೂರು ಏಕದಿನ ಪಂದ್ಯಗಳಲ್ಲಿ ಮೊದಲೆರಡು ಪಂದ್ಯಗಳನ್ನು ಟೀಮ್ ಇಂಡಿಯಾ ಕಳೆದುಕೊಂಡಿದೆ. ಈ ಮೂಲಕ ನ್ಯೂಜಿಲೆಂಡ್ ತಂಡ 2-0 ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿದ್ದಲ್ಲದೆ ಸರಣಿಯನ್ನು ಈಗಾಗಲೆ ತನ್ನ ವಶಕ್ಕೆ ಪಡೆದುಕೊಂಡಿದೆ.
ಆಕ್ಲೆಂಡ್ ಮತ್ತು ಹ್ಯಾಮಿಲ್ಟನ್‌ನಲ್ಲಿ ನಡೆದ ಮೊದಲೆರಡು ಪಂದ್ಯಗಳನ್ನು ಟೀಮ್ ಇಂಡಿಯಾ ನ್ಯೂಜಿಲೆಂಡ್ ಕೈಗೆ ಒಪ್ಪಿಸಿತ್ತು. ಹೀಗಾಗಿ ನಾಳೆ ಬೇ ಓವಲ್‌ನಲ್ಲಿ ನಡೆಯಲಿರುವ ಪಂದ್ಯವನ್ನಾದರೂ ಗೆದ್ದು ಒಂದು ಪಂದ್ಯವನ್ನಾದರು ಗೆದ್ದ ಸಮಾದಾನ ಪಡೆದುಕೊಳ್ಳಲು ಒಂದು ಅವಕಾಶವಾಗಿದೆ.
ನಾಳಿನ ಪಂದ್ಯದಲ್ಲಿ ಒಂದಷ್ಟು ಬದಲಾವಣೆಯಾದರೂ ಅಚ್ಚರಿಯಿಲ್ಲ. ಕನ್ನಡಿಗ ಮನೀಶ್ ಪಾಂಡೆ ಮೂರನೇ ಪಂದ್ಯಕ್ಕೆ ಅವಕಾಶವನ್ನು ಪಡೆಯುವ ಸಾಧ್ಯತೆಯಿದೆ. ಮಯಾಂಕ್ ಅಗರ್ವಾಲ್‌ಗೆ ನಾಳಿನ ಪಂದ್ಯದಲ್ಲಿ ಕಣಕ್ಕಿಳಿಯದೆ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ವಿಶ್ವಕಪ್ ಬಳಿಕ ಆಡಿದ ಎಲ್ಲಾ ಸರಣಿಯನ್ನೂ ಟೀಮ್ ಇಂಡಿಯಾ ಗೆದ್ದುಕೊಂಡು ಬಂದಿದೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಳ್ಳುವ ಮೂಲಕ ಮೊದಲ ಸರಣಿ ಸೋಲನ್ನು ಕಳೆದುಕೊಂಡಂತಾಗಿದೆ. ನಾಳಿನ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಟೀಮ್ ಇಂಡಿಯಾ ಇರೋದಂತು ನಿಜ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications