For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲೆಂಡ್: ಅಂತಿಮ ಏಕದಿನ ಪಂದ್ಯ, ಪ್ರಮುಖ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟ ಆಟಗಾರರು

India vs New Zealand: 3rd ODI match, both team Players approaching record and milestones

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಹೊರತಾಗಿಯೂ ಟೀಮ್ ಇಂಡಿಯಾ ಸೋಲು ಅನುಭವಿಸಿತ್ತು ಟೀಮ್ ಇಂಡಿಯಾ. ಬಳಿಕ ಅಂತಿಮ ಪಂದ್ಯ ಮಳೆಯಿಂದಾಗಿ ಫಲಿತಾಂಶ ಕಾಣದೆ ರದ್ದಾಗಿದ್ದು ಭಾರತ ತಂಡಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದರೆ ಸರಣಿಯಲ್ಲಿ ಸಮಬಲಗೊಳಿಸುವ ಅವಕಾಶವಿದೆ.

ಬುಧವಾರ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವ ಆಟಗಾರರೊಂದಿಗೆ ಕಣಕ್ಕಿಳಿಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಶಿಖರ್ ಧವನ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಯುವ ಆಟಗಾರರ ಪಡೆಯೊಂದಿಗೆ ಕಣಕ್ಕಿಳಿದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡದ ಕೆಲ ಆಟಗಾರರ ಪ್ರಮುಖ ಮೈಲಿಗಲ್ಲು ನೆಡುವ ಅವಕಾಶ ಹೊಂದಿದ್ದಾರೆ. ಈ ಬಗ್ಗೆ ಕುತೂಹಲಕಾರಿ ಮಾಹಿತಿಯಿದೆ. ಮುಂದೆ ಓದಿ..

ನ್ಯೂಜಿಲೆಂಡ್ ಮತ್ತು ಟೀಮ್ ಇಂಡಿಯಾ ಈವರೆಗೆ 112 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ಪೈಕಿ ಕಿವೀಸ್ ಪಡೆ 50 ಪಂದ್ಯಗಳಲ್ಲಿ ಗೆದ್ದಿದ್ದರೆ ಮತ್ತು ಭಾರತ 55ರಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿದ್ದು ಕಳೆದ ಪಂದ್ಯ ಸೇರಿದಂತೆ ಆರು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಅಂತ್ಯವಾಗಿದೆ. ನ್ಯೂಜಿಲೆಂಡ್ ನೆಲದಲ್ಲಿ ಈ ಎರಡು ತಂಡಗಳು ಒಟ್ಟಾರೆಯಾಗಿ 43 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಆತಿಥೇಯ ಪಡೆ 26 ಬಾರಿ ಮತ್ತು ಭಾರತ 14 ಬಾರಿ ಜಯಗಳಿಸಿದೆ. ಮೂರು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಯಾಗಿದೆ. ಇನ್ನು ಈ ಎರಡು ತಂಡಗಳ ನಡುವಿನ ಏಕೈಕ ಟೈ ಪಂದ್ಯ 2014ರಲ್ಲಿ ಆಕ್ಲೆಂಡ್‌ನಲ್ಲಿ ಆಯೋಜನೆಗೊಂಡಿತ್ತು.

ಸಂಭಾವ್ಯ ದಾಖಲೆಗಳು ಹಾಗೂ ಮೈಲುಗಲ್ಲುಗಳು

* ಭಾರತದ ಯುವ ಆಟಗಾರ ರಿಷಬ್ ಪಂತ್ ಏಕದಿನ ಮಾದರಿಯಲ್ಲಿ ಈವರೆಗೆ 3965 ರನ್‌ಗಳನ್ನು ಗಳಿಸಿದ್ದು 4000 ರನ್‌ಗಳ ಗಡಿ ತಲುಪಲು 35 ರನ್‌ಗಳ ಅಗತ್ಯವಿದೆ.
* ಕಿವೀಸ್ ದಾಂಡಿಗ ಡೆವೊನ್ ಕಾನ್ವೇ ಏಕದಿನ ಮಾದರಿಯಲ್ಲಿ 44 ಬೌಂಡರಿಗಳನ್ನು ಈವರೆಗೆ ಬಾರಿಸಿದ್ದು 50 ಬೌಂಡರಿಗಳನ್ನು ಪೂರ್ಣಗೊಳಿಸಲು ಆರು ಬೌಂಡರಿಗಳ ಅಗತ್ಯವಿದೆ.
*ಕಿವಿಸ್ ತಂಡದ ಪ್ರಮುಖ ವೇಗದ ಬೌಲರ್ ಟಿಮ್ ಸೌಥಿ ಏಕದಿನ ಮಾದರಿಯಲ್ಲಿ ಈವರೆಗೆ 202 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಎರಡು ವಿಕೆಟ್ ಪಡೆದರೆ ನ್ಯೂಜಿಲೆಂಡ್ ಪರವಾಗಿ ಅತೀ ಹೆಚ್ಚು ಏಕದಿನ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಳ್ಳುವ ಅವಕಾಶವಿದೆ. ಸದ್ಯ 203 ವಿಕೆಟ್ ಪಡೆದಿರುವ ಕ್ರಿಸ್ ಹ್ಯಾರಿಸ್ ಮೂರನೇ ಸ್ಥಾನದಲ್ಲಿದ್ದು ಅವರನ್ನು ಹಿಂದಿಕ್ಕಲು ಟಿಮ್ ಸೌಥಿಗೆ ಎರಡು ವಿಕೆಟ್‌ಗಳ ಅಗತ್ಯವಿದೆ.
* ಟಾಮ್ ಲ್ಯಾಥಮ್ ಏಕದಿನ ಕ್ರಿಕೆಟ್‌ನಲ್ಲಿ 49 ಸಿಕ್ಸರ್‌ಗಳನ್ನು ಬಾರಿಸಿದ್ದು ಇನ್ನು ಕೇವಲ ಒಂದು ಸಿಕ್ಸರ್ ಬಾರಿಸಿದರೆ 50 ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.
* ಟಾಮ್ ಲ್ಯಾಥಮ್ ಏಕದಿನ ಮಾದರಿಯಲ್ಲಿ 291 ಬೌಂಡರಿಗಳನ್ನು ಬಾರಿಸಿದ್ದು 300 ಬೌಂಡರಿಗಳ ಗುರಿ ತಲುಪಲು ಒಂಬತ್ತು ಬೌಂಡರಿಗಳನ್ನು ಬಾರಿಸಬೇಕಿದೆ.

ನ್ಯೂಜಿಲೆಂಡ್ ಸಂಪೂರ್ಣ ಸ್ಕ್ವಾಡ್: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಮ್ಯಾಟ್ ಹೆನ್ರಿ.

ಭಾರತ ಸಂಪೂರ್ಣ ಸ್ಕ್ವಾಡ್: ಶಿಖರ್ ಧವನ್ (ನಾಯಕ), ರಿಷಬ್ ಪಂತ್ (ಉಪ ನಾಯಕ & ವಿಕೆಟ್ ಕೀಪರ್), ಶುಬ್ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಶಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ದೀಪಕ್ ಚಹಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.

Story first published: Tuesday, November 29, 2022, 17:53 [IST]
Other articles published on Nov 29, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+