ನ್ಯೂಜಿಲ್ಯಾಂಡ್ vs ಭಾರತ: ತಂಡದ ಮಾಹಿತಿ, ಡ್ರೀಮ್ XI, ಸಂಭಾವ್ಯ ತಂಡ, ನೇರ ಪ್ರಸಾರ

ನ್ಯೂಜಿಲ್ಯಾಂಡ್ ವಿರುದ್ಧ ಟೀಮ್ ಇಂಡಿಯಾ ನಾಳೆ ಮೂರನೇ ಪಂದ್ಯಕ್ಕೆ ಕಣಕ್ಕಿಳಿಯಲಿದೆ. ನಾಳಿನ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಮತ್ತೊಂದೆಡೆ ನ್ಯೂಜಿಲ್ಯಾಂಡ್‌ಗೆ ನಾಳಿನ ಪಂದ್ಯ ಮಹತ್ವದ್ದಾಗಿದ್ದು ಗೆದ್ದರಷ್ಟೇ ಸರಣಿಯಲ್ಲಿ ಉಳಿಗಾಲ.
ಮೊದಲೆರಡು ಪಂದ್ಯಗಳು ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದಿತ್ತು ಈ ಎರಡು ಪಂದ್ಯಗಳನ್ನು ಟೀಮ್ ಇಂಡಿಯಾ ರನ್ ಬೆನ್ನತ್ತಿ ಗೆದ್ದುಕೊಂಡಿತ್ತು. ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 200+ ರನ್‌ಗಳ ಗುರಿಯನ್ನು ನೀಡಿದ್ದರೂ ಟೀಮ್ ಇಂಡಿಯಾ ಗೆದ್ದಿತ್ತು. ಎರಡನೇ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿ ಅದನ್ನು ಬೆನ್ನತ್ತುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿತ್ತು.
ಮೂರನೇ ಪಂದ್ಯ ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ. ಈ ಮೈದಾನ ಅತಿಥಿಗಳ ಪಾಲಿಗೆ ಅದೃಷ್ಟವಾಗುತ್ತಾ ಅಥವಾ ಟೀಮ್ ಇಂಡಿಯಾಗೇ ವರವಾಗುತ್ತಾ ಅನ್ನೋದು ನಾಳಿನ ಪಂದ್ಯದಲ್ಲಿ ಸ್ಪಷ್ಟವಾಗಲಿದೆ. ಆದರೆ ಒತ್ತಡದಲ್ಲಿರುವ ನ್ಯೂಜಿಲ್ಯಾಂಡ್‌ಗೆ ನಾಳಿನ ಪಂದ್ಯ ದೊಡ್ಡ ಸವಾಲಾಗಿದೆ.

ಟೀಮ್ ನ್ಯೂಸ್, ಭಾರತ:
ಆಕ್ಲೆಂಡ್‌ನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಎರಡನೇ ಪಂದ್ಯದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿ ನ್ಯೂಜಿಲ್ಯಾಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಇದು ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದ ಬಲವನ್ನು ಹೆಚ್ಚುಗೊಳಿಸಿದೆ. ಹ್ಯಾಮಿಲ್ಟನ್ ಪಿಚ್ ಬೌಲರ್‌ಗಳಿಗೆ ಸ್ವಲ್ಪ ಮಟ್ಟಿನ ಸಹಕಾರಿಯಾಗುವ ಕಾರಣ ಟೀಮ್ ಇಂಡಿಯಾ ಬೌಲರ್‌ಗಳ ಪಾಲಿಗೆ ಆಶಾದಾಯಕ ಬೆಳವಣಿಗೆಯಾಗಿದೆ.

ಟೀಮ್ ನ್ಯೂಸ್, ನ್ಯೂಜಿಲ್ಯಾಂಡ್:
ಈ ಸರಣಿ ಆರಂಭದಲ್ಲೇ ಕೀವಿಸ್ ಎಡವಿರುವುದು ನ್ಯೂಜಿಲ್ಯಾಂಡ್‌ಗೆ ದೊಡ್ಡ ಹಿನ್ನಡೆಯಾಗಿದೆ. ಒತ್ತಡದಲ್ಲಿರುವ ನ್ಯೂಜಿಲ್ಯಾಂಡ್ ತಂಡ ನಾಳಿನ ಪಂದ್ಯಕ್ಕೆ ಸಿದ್ಧವಾಗುತ್ತಿದೆ. ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಕೀವಿಸ್ ಬೌಲರ್‌ಗಳು ರಣತಂತ್ರವನ್ನು ಹೆಣೆಯುತ್ತಿದ್ದಾರೆ.

ಡ್ರೀಮ್ 11 ತಂಡ:
ಆರಂಭಿಕರು: ಕೆ.ಎಲ್ ರಾಹುಲ್, ಮಾರ್ಟಿನ್ ಗಪ್ಟಿಲ್
ಮಧ್ಯಮ ಕ್ರಮಾಂಕ: ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ
ಆಲ್ ರೌಂಡರ್ಸ್: ಶಿವಮ್ ದುಬೆ, ರವೀಂದ್ರ ಜಡೇಜಾ
ಬೌಲರ್‌ಗಳು: ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬೂಮ್ರಾ, ಮೊಹಮದ್ ಶಮಿ, ಟಿಮ್ ಸೌಥಿ

ಸಂಭಾವ್ಯ ತಂಡ:
ಭಾರತ: ಕೆ.ಎಲ್. ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಂ ದುಬೆ, ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್ / ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ
ನ್ಯೂಜಿಲ್ಯಾಂಡ್: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮನ್ರೊ, ಕೇನ್ ವಿಲಿಯಮ್ಸನ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ರಾಸ್ ಟೇಲರ್, ಟಿಮ್ ಸೀಫರ್ಟ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಬ್ಲೇರ್ ಟಿಕೆನರ್, ಹಮೀಶ್ ಬೆನೆಟ್

ನೇರ ಪ್ರಸಾರ:
ನಾಳಿನ ಪಂದ್ಯವೂ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಸಮಯದಲ್ಲೂ ಯಾವುದೇ ಬದಲಾವಣೆಯಿಲ್ಲ. ಭಾರತೀಯ ಕಾಲಮಾನ ಮಧ್ಯಾಹ್ನ 12:20ಕ್ಕೆ ಪಂದ್ಯ ಆರಂಭವಾಗಲಿದೆ. ಪಂದ್ಯದ ಕ್ಷಣ ಕ್ಷಣದ ಮಾಹಿತಿಯನ್ನು ಮೈಖೇಲ್ ಕನ್ನಡದಲ್ಲೂ ತಾವು ಪಡೆಯಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications