Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹ್ಯಾಮಿಲ್ಟನ್, ಏಕದಿನ: 8 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡ್‌ಗೆ ಶರಣೆಂದ ಭಾರತ

ಕೊಹ್ಲಿ, ಧೋನಿ ಇಲ್ಲದ ತಂಡ ತಂಡವೇ ಅಲ್ಲ..! | Oneindia Kannada
India vs New Zealand 4th ODI Live Cricket Score

ಹ್ಯಾಮಿಲ್ಟನ್, ಜನವರಿ 31: ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ನಡೆದ ಭಾರತ vs ನ್ಯೂಜಿಲ್ಯಾಂಡ್ 4ನೇ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ 8 ವಿಕೆಟ್ ಗೆಲುವನ್ನಾಚರಿಸಿದೆ. ಕಿವೀಸ್ ಮಾರಕ ಬೌಲಿಂಗ್ ಮತ್ತು ಭಾರತದ ದುರ್ಬಲ ಬ್ಯಾಟಿಂಗ್ ದೇಸಿ ತಂಡದ ಸೋಲಿಗೆ ಕಾರಣವಾಯ್ತು. ಐದು ಪಂದ್ಯಗಳ ಸರಣಿ ಈಗ 3-1ರಲ್ಲಿದೆ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44083

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ನ್ಯೂಜಿಲ್ಯಾಂಡ್ ಮಾರಕ ಬೌಲಿಂಗ್‌ ದಾಳಿಗೆ ನಲುಗಿತು. 30.5 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ 92 ಕನಿಷ್ಠ ರನ್‌ನೊಂದಿಗೆ ಇನ್ನಿಂಗ್ಸ್‌ ಮುಗಿಸಿತು. ಪಾದಾರ್ಪಣೆ ಪಂದ್ಯವಾಡಿದ್ದ ಯುವ ಆಟಗಾರ ಶುಭ್‌ಮಾನ್ ಗಿಲ್ ಕೂಡ ಆಟದಿಂದ ಸೆಳೆಯಲಿಲ್ಲ.

93 ರನ್ ಸುಲಭ ಗುರಿ ಬೆನ್ನತ್ತಿದ ಕೇನ್ ವಿಲಿಯಮ್ಸನ್ ಬಳಗ, ಹೆನ್ರಿ ನಿಕೋಲ್ಸ್ ಅಜೇಯ 30, ರಾಸ್ ಟೇಲರ್ ಅಜೇಯ 37 ರನ್ ಬೆಂಬಲದೊಂದಿಗೆ 14.4 ಓವರ್‌ನಲ್ಲಿ 2 ವಿಕೆಟ್ ಕಳೆದು 93 ರನ್ ಪೇರಿಸುವುದರೊಂದಿಗೆ ಗೆಲುವಿನ ನಗು ಬೀರಿತು. ನ್ಯೂಜಿಲ್ಯಾಂಡ್ ವೇಗಿ ಟ್ರೆಂಟ್ ಬೌಲ್ಟ್ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು.

ಆರಂಭಿಕ ಇನ್ನಿಂಗ್ಸ್‌ಗೆ ಇಳಿದ ಭಾರತ ಸಾಲಾಗಿ ವಿಕೆಟ್ ಕಳೆದುಕೊಳ್ಳುತ್ತ ಬಂತು. 200ನೇ ಏಕದಿನ ಪಂದ್ಯವಾಡಿದ ನಾಯಕ ರೋಹಿತ್ ಶರ್ಮಾ 7, ಶಿಖರ್ ಧವನ್ 13, ಅಂಬಾಟಿ ರಾಯುಡು ಮತ್ತು ದಿನೇಶ್ ಕಾರ್ತಿಕ್ ೦, ಶುಭ್‌ಮಾನ್ ಗಿಲ್ (9), ಕೇದಾರ್ ಜಾಧವ್ (1), ಭುವನೇಶ್ವರ್ ಕುಮಾರ್ (1), ಹಾರ್ದಿಕ್ ಪಾಂಡ್ಯ (16), ಕುಲದೀಪ್ ಯಾದವ್ (15), ಖಲೀಲ್ ಅಹ್ಮದ್ 5 ರನ್ನಿಗೆ ನಿರ್ಗಮಿಸಿದರು. ಬೌಲರ್ ಯುಜುವೇಂದ್ರ ಚಾಹಲ್ ಅವರ ಅಜೇಯ 18 ರನ್ ವೈಯಕ್ತಿಕ ದೊಡ್ಡ ಮೊತ್ತವೆನಿಸಿತು.

ಆತಿಥೇಯ ನ್ಯೂಜಿಲ್ಯಾಂಡ್ ಪರ ಟ್ರೆಂಟ್ ಬೌಲ್ಟ್ 5, ಕಾಲಿನ್‌ ಡೆ ಗ್ರ್ಯಾಂಡ್ ಹೋಮ್ 3 ವಿಕೆಟ್ ಕೆಡವಿ ಭಾರತವನ್ನು ಕಾಡಿದರು. ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 3-0ಯಿಂದ ಸರಣಿಯಲ್ಲಿ ಮುನ್ನಡೆಯಲ್ಲಿತ್ತು. ಔಪಚಾರಿಕ ಆದರೆ ಪ್ರತಿಷ್ಠಿತ ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ ಹಿನ್ನಡೆ ಕಂಡಿದೆ.

ನ್ಯೂಜಿಲ್ಯಾಂಡ್ ತಂಡ: ಮಾರ್ಟಿನ್ ಗುಪ್ಟಿಲ್, ಹೆನ್ರಿ ನಿಕೋಲ್ಸ್, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಟಾಮ್ ಲ್ಯಾಥಮ್ (ವಿಕೆ), ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಕಾಲಿನ್ ಡಿ ಗ್ರ್ಯಾಂಡ್ಹೊಮ್, ಟಾಡ್ ಆಯ್ಸ್ಲ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್.

ಭಾರತ ತಂಡ: ರೋಹಿತ್ ಶರ್ಮಾ (ಸಿ), ಶಿಖರ್ ಧವನ್, ಶುಬ್‌ಮಾನ್ ಗಿಲ್, ಅಂಬಾಟಿ ರಾಯುಡು, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್ (ವಿಕೆ), ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಕೆ ಖಲೀಲ್ ಅಹ್ಮದ್.

Story first published: Thursday, January 31, 2019, 11:35 [IST]
Other articles published on Jan 31, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+