Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್, ಅಭ್ಯಾಸ ಪಂದ್ಯ: ವಿಲಿಯಮ್ಸನ್, ಟೇಲರ್ ಅಬ್ಬರಕೆ ಶರಣಾದ ಭಾರತ

India vs New Zealand, 4th Warm-up game Match report

ಲಂಡನ್, ಮೇ 25: ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಶನಿವಾರ (ಮೇ 25) ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವಣ ವಿಶ್ವಕಪ್ ಕ್ರಿಕೆಟ್ 2019ರ ನಾಲ್ಕನೇ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 6 ವಿಕೆಟ್ ಸುಲಭ ಜಯ ಗಳಿಸಿದೆ. ನಾಯಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಅರ್ಧ ಶತಕದ ನೆರವಿನಿಂದ ಕಿವೀಸ್ ಗೆಲುವಿನ ನಗು ಬೀರಿತು.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ಪರ ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ತಲಾ 2 ರನ್, ವಿರಾಟ್ ಕೊಹ್ಲಿ 18, ಕೆಎಲ್ ರಾಹುಲ್ 6, ಹಾರ್ದಿಕ್ ಪಾಂಡ್ಯ 30, ಎಂಎಸ್ ಧೋನಿ 17, ದಿನೇಶ್ ಕಾರ್ತಿಕ್ 4, ಭುವನೇಶ್ವರ್ ಕುಮಾರ್ 1, ರವೀಂದ್ರ ಜಡೇಜಾ 54 (50 ಎಸೆತ), ಮೊಹಮ್ಮದ್ ಶಮಿ 2, ಕುಲದೀಪ್ ಯಾದವ್ 19 ರನ್‌ಗೆ ನಿರ್ಗಮಿಸಿದರು.

ಕೊಹ್ಲಿ ಬಳಗ 39.2 ಓವರ್‌ಗೆ ಸರ್ವ ಪತನ ಕಂಡು 179 ರನ್ ಗಳಿಸಿತು. ಭಾರತದ ಇನ್ನಿಂಗ್ಸ್‌ನಲ್ಲಿ ಎದುರಾಳಿ ತಂಡದ ಟ್ರೆಂಟ್ ಬೌಲ್ಟ್ 33 ರನ್‌ಗೆ 4, ಜೇಮ್ಸ್‌ ನೀಶಮ್ 26 ರನ್‌ಗೆ 3, ಟಿಮ್ ಸೌಥೀ, ಕಾಲಿನ್ ಡೆ ಗ್ರ್ಯಾಂಡ್‌ಹೋಮ್ ಮತ್ತು ಲೂಕಿ ಫಾರ್ಗುಸನ್ ತಲಾ 1 ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್‌ಗೆ ಮಾರ್ಟಿನ್ ಗಪ್ಟಿಲ್ 22, ವಿಲಿಯಮ್ಸನ್ 67 (87 ಎಸೆತ), ಟೇಲರ್ 71 (75 ಎಸೆತ) ರನ್‌ ಸೇರಿಸಿದ್ದರಿಂದ ನ್ಯೂಜಿಲ್ಯಾಂಡ್ 37.1 ಓವರ್‌ಗೆ 4 ವಿಕೆಟ್ ಕಳೆದು 180 ರನ್ ಗಳಿಸಿತು. ಕಿವೀಸ್ ಇನ್ನಿಂಗ್ಸ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಾಹಲ್, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಲೋಕೇಶ್ ರಾಹುಲ್, ಎಂಎಸ್ ಧೋನಿ (ವಿಕೆ), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್‌ಪ್ರೀತ್, ಭುವನೇಶ್ವರ ಕುಮಾರ್, ಯುಜುವೇಂದ್ರ ಚಾಹಲ್.

ನ್ಯೂಜಿಲ್ಯಾಂಡ್ ತಂಡ: ಕಾಲಿನ್ ಮುನ್ರೊ, ಮಾರ್ಟಿನ್ ಗಪ್ಟಿಲ್, ಕೇನ್ ವಿಲಿಯಮ್ಸನ್ (ಸಿ), ಟಾಮ್ ಬ್ಲಂಡೆಲ್ (ವಿಕೆ), ರಾಸ್ ಟೇಲರ್, ಕಾಲಿನ್ ಡೆ ಗ್ರಾಂಡ್ಹೋಮ್, ಹೆನ್ರಿ ನಿಕೋಲ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಲಾಕೀ ಫರ್ಗುಸನ್, ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಇಶ್ ಸೋಧಿ.

Story first published: Saturday, May 25, 2019, 22:23 [IST]
Other articles published on May 25, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+