ಟೀಮ್ ಇಂಡಿಯಾ vs ನ್ಯೂಜಿಲ್ಯಾಂಡ್: ಐದನೇ ಟಿ20ಗೆ ಸಂಭಾವ್ಯ ತಂಡ

ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯನ್ನು ಭಾರತ ವಶಕ್ಕೆ ಪಡೆದುಕೊಂಡಿದೆ. ಸರಣಿಯಲ್ಲಿ ನಡೆದಿರುವ ನಾಲ್ಕು ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳನ್ನು ಟೀಮ್ ಇಂಡಿಯಾ ಗೆದ್ದು ಅತಿಥೇಯರಿಗೆ ಮುಖಭಂಗವನ್ನು ಅನುಭವಿಸುವಂತೆ ಮಾಡಿದೆ.
ನ್ಯೂಜಿಲ್ಯಾಂಡ್ ಈಗಾಗಲೇ ನಾಲ್ಕು ಪಂದ್ಯಗಳನ್ನು ಸೋತಿರುವ ಕಾರಣ ನ್ಯೂಜಿಲ್ಯಾಂಡ್ ಅಂತಿಮ ಪಂದ್ಯವನ್ನಾದರೂ ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿದೆ. ಇಲ್ಲವಾದಲ್ಲಿ ತವರಿನಲ್ಲೇ ವೈಟ್‌ವಾಶ್ ಅವಮಾನಕ್ಕೆ ತುತ್ತಾಗಲಿದೆ.
ಆದರೆ ಭಾರತದ ಪಾಲಿಗೆ ನಾಳಿನ ಪಂದ್ಯವೂ ಕೇವಲ ಔಪಚಾರಿಕ ಪಂದ್ಯವಷ್ಟೇ. ಹೀಗಾಗಿ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಕೆಲ ಪ್ರಮುಖ ಬದಲಾವಣೆಗಳನ್ನು ಮಾಡಿತ್ತು. ಮತ್ತೆ ನಾಳಿನ ಪಂದ್ಯದಲ್ಲೂ ಇದೇ ರೀತಿಯ ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಹಾಗಿದ್ದರೆ ನಾಳಿನ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಯಾರೆಲ್ಲಾ ಕಣಕ್ಕಿಳಿಯಬಹುದು ಎಂಬುದನ್ನು ಗಮನಿಸೋಣ.

ಕೆಎಲ್ ರಾಹುಲ್‌ಗೆ ಜೊತೆಗಾರ ಯಾರು?
ಕೆಎಲ್ ರಾಹುಲ್ ಸರಣಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ತನಗೆ ನೀಡಿರುವ ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಮತ್ತೊಂದೆಡೆ ಕೆಎಲ್ ರಾಹುಲ್‌ಗೆ ಯಾರು ಜೊತೆಯಾಗುತ್ತಾರೆ ಎಂಬುದು ಪ್ರಶ್ನೆಯಾಗಲಿದೆ. ಕಳೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶವನ್ನು ನೀಡಲಾಗಿತ್ತು. ಆದರೆ ಸಂಜು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದರು. ನಾಳೆ ರೋಹಿತ್ ಮತ್ತೆ ತಂಡಕ್ಕೆ ವಾಪಾಸಾಗುವ ಸಾಧ್ಯತೆಯಿದೆ.

ಮಧ್ಯಮ ಕ್ರಮಾಂಕ
ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕ ಬಲಿಷ್ಟವಾಗಿದೆ. ನಾಯಕ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದರೆ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಫಿಕ್ಸ್ ಆಗಿದ್ದಾರೆ. ಮನೀಶ್ ಪಾಂಡೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ. ಶಿವಮ್ ದುಬೆ ಕೂಡ ನಾಳಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.

ಆಲ್‌ರೌಂಡರ್ ಆಗಿ ಯಾರು ಕಣಕ್ಕೆ:
ಆಲ್‌ರೌಂಡರ್ ಆಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ನಾಲ್ಕನೇ ಪಂದ್ಯದಲ್ಲಿ ಯುವ ಆಟಗಾರ ವಾಶಿಂಗ್ಟನ್ ಸುಂದರ್‌ಗೆ ಅವಕಾಶವನ್ನು ನೀಡಲಾಗಿತ್ತು. ಆದರೆ ಸಿಕ್ಕ ಅವಕಾಶದಲ್ಲಿ ಸುಂದರ್ ಗಮನಾರ್ಹ ಪ್ರದರ್ಶನವನ್ನೇನು ನೀಡಲಿಲ್ಲ. ನಾಳಿನ ಪಂದ್ಯದಲ್ಲಿ ಮತ್ತೆ ಯುವ ಆಟಗಾರನಿಗೇ ಅವಕಾಶ ದೊರೆತರೆ ಅಚ್ಚರಿಯಿಲ್ಲ. ಇಲ್ಲವಾದಲ್ಲಿ ಜಡೇಜಾ ಮತ್ತೆ ಅವಕಾಶವನ್ನು ಪಡೆಯಲಿದ್ದಾರೆ.

ಸ್ಪಿನ್ನರ್ ಯಾರು?
ಯುಜುವೇಂದ್ರ ಚಾಹಲ್ ನಾಲ್ಕನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೂ ಸ್ವಲ್ಪ ದುಬಾರಿಯೆನಿಸಿದರು. ಹೀಗಾಗಿ ನಾಳಿನ ಪಂದ್ಯದಲ್ಲಿ ಮತ್ತೆ ಯುಜುವೇಂದ್ರ ಚಾಹಲ್ ಕಣಕ್ಕಿಳಿಯುತ್ತಾರಾ ಅಥವಾ ಕುಲ್ದೀಪ್ ಯಾದವ್ ಅವಕಾಶ ಗಿಟ್ಟಿಸಿಕೊಳ್ಳುತ್ತಾರಾ ಅನ್ನೋದು ಕಾದು ನೋಡಬೇಕಿದೆ.

ವೇಗಿಗಳಲ್ಲಿ ಪೈಪೋಟಿ:
ನಾಲ್ಕನೇ ಪಂದ್ಯದಲ್ಲಿ ಮೊಹಮದ್ ಶಮಿಗೆ ವಿಶ್ರಾಂತಿಯನ್ನು ನೀಡಲಾಗಿತ್ತು. ನವದೀಪ್ ಸೈನಿ ಅವಕಾಶವನ್ನು ಪಡೆದುಕೊಂಡಿದ್ದರು. ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ ನವ್‌ದೀಪ್ ಸೈನಿ. ಹೀಗಾಘಿ ಮುಂದಿನ ಪಂದ್ಯದಲ್ಲೂ ಅವಕಾಶವನ್ನು ಪಡೆದುಕೊಂಡರೆ ಅಚ್ಚರಿಯಿಲ್ಲ. ಶಾರ್ದೂಲ್ ಠಾಕೂರ್ ಕೂಡ ನಾಳಿನ ಪಂದ್ಯದಲ್ಲೂ ಕಣಕ್ಕಿಳಿಯುವ ಸಾಧ್ಯತೆ. ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ಮೊಹಮದ್ ಶಮಿ ಕಣಕ್ಕಿಳಿದು ಬೂಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications