ಭಾರತ vs ಕೀವಿಸ್ ಟೆಸ್ಟ್: ಬ್ಯಾಟ್ಸ್‌ಮನ್‌ಗಳಿಗೆ ಎದುರಾಗಲಿದೆ ನಿಜವಾದ ಅಗ್ನಿಪರೀಕ್ಷೆ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ನಾಳೆ ಚಾಲನೆ ಸಿಗಲಿದೆ. ಟೀಮ್ ಇಂಡಿಯಾ ಪಾಲಿಗೆ ಇದು ನಿಜವಾಗಿಯೂ ಅಗ್ನಿ ಪರೀಕ್ಷೆಯಾಗಿದೆ. ವೆಲ್ಲಿಂಗ್ಟನ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಟೀಮ್ ಇಂಡಿಯಾ ಆಟಗಾರರು ಅಂತಿಮ ಹಂತದ ಅಭ್ಯಾಸದಲ್ಲಿದ್ದಾರೆ.
ಸತತವಾಗಿ ಸರಣಿಗಳನ್ನು ಗೆದ್ದ ಟೀಮ್ ಇಂಡಿಯಾಗೆ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ತಿರುಗೇಟು ನೀಡಿದೆ. ಟೀಮ್ ಇಂಡಿಯಾವನ್ನು ಕ್ಲೀನ್ ಸ್ವೀಪ್ ಮಾಡಿದ ಕಾರಣ ಒಂದಷ್ಟು ಒತ್ತಡದಲ್ಲಿ ಟೀಮ್ ಇಂಡಿಯಾ ಇದೆ. ಹಾಗಿದ್ದರೂ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ಗೆ ಸರಿಯಾಗಿ ತಿರುಗೇಟು ನೀಡಲು ಟೀಮ್ ಇಂಡಿಯಾ ಆಟಗಾರರು ಕೂಡ ಸಜ್ಜಾಗಿದ್ದಾರೆ.
ಮೊದಲ ಪಂದ್ಯದ ಆತಿಥ್ಯವನ್ನು ವಹಿಸಿಕೊಳ್ಳಲು ವೆಲ್ಲಿಂಗ್ಟನ್ ಕ್ರೀಡಾಂಗಣ ಸಜ್ಜಾಗಿದೆ. ಹಸಿರು ಹುಲ್ಲುಗಳಿಂದ ಕೂಡಿರುವ ಈ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಲಿದೆ ಎಂಬುದು ತಜ್ಞರ ಅಭಿಮತವಾಗಿದೆ. ಹೀಗಾಗಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಈ ಸವಾಲನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಟೀಮ್ ಇಂಡಿಯಾ ಬೌಲಿಂಗ್ ಪಡೆಯೂ ಕೂಡ ಸಾಕಷ್ಟು ಬಲಿಷ್ಟವಾಗಿದೆ. ಅದರಲ್ಲೂ ವೇಗಿ ಮೊಹಮ್ಮದ್ ಶಮಿ ಉತ್ತಮ ಲಯದಲ್ಲಿದ್ದಾರೆ. ಅನುಭವಿ ಇಶಾಂತ್ ಶರ್ಮ ತಂಡವನ್ನು ಸೇರಿಕೊಂಡಿದ್ದಾರೆ. ಜಸ್ಪ್ರೀತ್ ಬೂಮ್ರಾ ಈ ಸರಣಿಯಲ್ಲಿ ಮತ್ತೆ ತಮ್ಮ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.
ಈ ಮಧ್ಯೆ ನಾಳಿನ ಪಂದ್ಯದ ಆತಿಥ್ಯವನ್ನು ವಹಿಸುವ ವೆಲ್ಲಿಂಗ್ಟನ್ ಮೈದಾನದ ಚಿತ್ರವನ್ನು ಬಿಸಿಸಿಐ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದೆ. ಪಂದ್ಯಕ್ಕೆ ಎರಡೂ ತಂಡಗಳ ಆಟಗಾರರು ಭರ್ಜರಿ ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications