Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs NZ 1st Test: ಕಿವೀಸ್ ವೇಗಕ್ಕೆ ದಿಕ್ಕೆಟ್ಟ ಭಾರತ; ರೋಹಿತ್ ಪಡೆ 46 ರನ್‌ಗೆ ಆಲೌಟ್

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ತವರಿನಲ್ಲಿ ಅಬ್ಬರಿಸಬೇಕಿದ್ದ ಟೀಮ್ ಇಂಡಿಯಾ ಬ್ಯಾಟರ್‌ಗಳು ಮಂಕಾದರು. ಪರಿಣಾಮವಾಗಿ ಭಾರತ 50 ರನ್‌ಗಳಿಗೆ ಆಲೌಟ್ ಆಯಿತು.

ನ್ಯೂಜಿಲೆಂಡ್ ಪರ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಮ್ಯಾಟ್ ಹೆನ್ರಿ 5 ವಿಕೆಟ್‌ ಪಡೆದು ಮಿಂಚಿದರೆ, ವಿಲಿಯಂ ಒರೂರ್ಕೆ 4 ವಿಕೆಟ್‌ ಕಬಳಿಸಿದರು. ಟೀಮ್ ಇಂಡಿಯಾ ಪರ ವಿಕೆಟ್‌ಕೀಪರ್ -ಬ್ಯಾಟರ್ ರಿಷಬ್ ಪಂತ್ ಗರಿಷ್ಠ 20 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ 13 ರನ್ ಕಲೆ ಹಾಕುವ ಮೂಲಕ ಎರಡನೇ ಗರಿಷ್ಠ ಸ್ಕೋರರ್ ಆದರು. ಇನ್ನುಳಿದಂತೆ ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಇದರೊಂದಿಗೆ ತವರಿನಲ್ಲಿ ಭಾರತ ಟೆಸ್ಟ್ ಇನ್ನಿಂಗ್ಸ್‌ವೊಂದರಲ್ಲಿ ಅತ್ಯಂತ ಕಡಿಮೆ ರನ್‌ಗೆ ಆಲೌಟಾದ ಕೆಟ್ಟ ದಾಖಲೆಯನ್ನು ಸೃಷ್ಟಿಸಿದೆ.

India vs New Zealand First Test Match First Innings report

ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯ ಟಾಸ್ ನಡೆಯದೆ ರದ್ದಾಗಿತ್ತು. ಎರಡನೇ ದಿನದಾಟದಂದು ಮೊದಲು ಟಾಸ್ ಗೆದ್ದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ನಿರ್ಧರಿಸಿದರು. ಆದರೆ ನಾಯಕ ಅಂದುಕೊಂಡಂತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸ್ಟಾರ್ ಬ್ಯಾಟರ್‌ಗಳ ಅಬ್ಬರ ನಡೆಯಲಿಲ್ಲ. ಅದಕ್ಕೆ ಕಿವೀಸ್ ಪಡೆಯ ವೇಗಿಗಳು ಅವಕಾಶ ನೀಡಲಿಲ್ಲ.

ಟೀಮ್ ಇಂಡಿಯಾ ಪರ ಆರಂಭಿಕರಾಗಿ ಇನ್ನಿಂಗ್ಸ್ ತೆರೆಯಲು ಬಂದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಅಡಿಪಾಯ ಹಾಕುವಲ್ಲಿ ಎಡುವಿದರು. ಇಲ್ಲಿಂದ ಟೀಮ್ ಇಂಡಿಯಾ ವಿಕೆಟ್‌ಗಳ ಪತನ ಶುರುವಾಯಿತು. ಭಾರತ 34 ರನ್ ಗಳಿಸುವಾಗಲೇ ಪ್ರಮುಖ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟ ಪರಿಸ್ಥಿತಿಯಲ್ಲಿ ಸಿಲುಕಿತ್ತು. ಅಷ್ಟರ ಮಟ್ಟಿಗೆ ಭಾರತ ತಂಡದ ಮೇಲೆ ಕಿವೀಸ್ ವೇಗಿಗಳು ಒತ್ತಡ ಹೇರಿದರು. ಜೊತೆಗೆ ಮೈದಾನದಲ್ಲಿ ನ್ಯೂಜಿಲೆಂಡ್ ಆಟಗಾರರ ಅದ್ಭುತ ಫೀಲ್ಡಿಂಗ್ ಕೂಡ ಭಾರತ 46 ರನ್‌ಗಳಿಗೆ ಸರ್ವಪತನವಾಗಲು ಕಾರಣವಾಯಿತು.

ಬೇಡದ ದಾಖಲೆ

1969ರ ನಂತರ ಮೊದಲ ಬಾರಿಗೆ ಭಾರತ ತವರು ನೆಲದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕನಿಷ್ಠ ಮೊತ್ತ ಕಲೆ ಹಾಕಿದೆ. ಇದಕ್ಕೂ ಮೊದಲು ನ್ಯೂಜಿಲೆಂಡ್ ವಿರುದ್ಧ ಹೈದರಾಬಾದ್‌ನಲ್ಲಿ ಟೀಮ್ ಇಂಡಿಯಾ 89 ರನ್‌ಗಳಿಗೆ ಆಲೌಟ್ ಆಗಿತ್ತು. ಈಗ ನ್ಯೂಜಿಲೆಂಡ್ ವಿರುದ್ಧ ಬೇಡದ ದಾಖಲೆಯನ್ನು ಭಾರತ ಮಾಡಿದೆ. ಇದಲ್ಲದೆ, ಟಾಪ್ 7 ಟೀಮ್ ಇಂಡಿಯಾ ಬ್ಯಾಟರ್‌ಗಳ ಪೈಕಿ ನಾಲ್ವರು ತವರಿನಲ್ಲಿ ನಡೆದ ಟೆಸ್ಟ್‌ ಇನ್ನಿಂಗ್ಸ್‌ವೊಂದರಲ್ಲಿ ಯಾವುದೇ ರನ್ ಗಳಿಸದೆ ಡಕ್‌ ಔಟಾಗಿರುವುದು ಇದೇ ಮೊದಲು.

Story first published: Thursday, October 17, 2024, 13:20 [IST]
Other articles published on Oct 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+